ಮೈಸೂರು: ಕುವೆಂಪು ನಗರ ವಿಶ್ವ ಜೋಡಿ ರಸ್ತೆಯಲ್ಲಿರುವ ನಾಗರಿಕ ವೇದಿಕೆಯ ಪೂರ್ಣ ಪ್ರಜ್ಞ ವಿದ್ಯಾ ಕೇಂದ್ರ ಶಾಲೆಯ 19 ನೇ ಶಾಲಾ ವಾರ್ಷಿಕೋತ್ಸವವೂ ಕುವೆಂಪು ನಗರ ರಮ ಗೋವಿಂದ್ ಕಲಾವಿದಿಕೆ (ಗಾನ ಭಾರತಿ)ಸಭಾಂಗಣದಲ್ಲಿ ಬಹಳ ಸಂಭ್ರಮದಿಂದ ನೆರವೇರಿತು.
ಕೇಂದ್ರ ತೆರಿಗೆ ಅಧಿಕ್ಷಕರಾದ ಜಿಎ ಶಶಿಧರ್ ಮಾತನಾಡಿ, ಆರಾಧನೆ ಧಾರ್ಮಿಕ ಆಚರಣೆಗೆ ಮೀಸಲಾಗಿರುವ ಎಲ್ಲಾ ದೇವಾಲಯಗಳನ್ನು ಸೇವಾ ಹಾಗೂ ಜ್ಞಾನ ಕೇಂದ್ರಗಳಾಗಿ ಬದಲಾಯಿಸಿದರೆ ಸಂಸ್ಕೃತಿ ಉಳಿಯುತ್ತದೆ ಈ ನಿಟ್ಟಿನಲ್ಲಿ ಪೂರ್ಣ ಪ್ರಜ್ಞಾ ವಿದ್ಯಾ ಕೇಂದ್ರ ಶಾಲೆಯ ಸೇವೆ ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಮಕ್ಕಳಿಗೆ ಒಂದು ಸ್ಪೂರ್ತಿ ಎಂದು ಮತ್ತು ವೇದಿಕೆ ಹಿರಿಯ ಸದಸ್ಯರನ್ನು ಗುರುತಿಸಿ ಸನ್ಮಾನಿಸುತ್ತಿರುವುದು ಉತ್ತಮ ಕೆಲಸ ಎಂದು ತಿಳಿಸಿದರು.

ಚಲನಚಿತ್ರ ನಟಿ ಕುಮಾರಿ ಸಾತ್ವಿಕ ಮಾತನಾಡಿ, ದಾನದಲ್ಲಿ ಶ್ರೇಷ್ಠದಾನ ವಿದ್ಯಾದಾನ ಪೂರ್ಣಪ್ರಜ್ಞ ವಿದ್ಯಾ ಕೇಂದ್ರ ಶಾಲೆಯು ಈಗಿನ ಕಾಲದಲ್ಲೂ ಅತ್ಯಂತ ಕಡಿಮೆ ಶುಲ್ಕದಲ್ಲಿ ವಿದ್ಯಾಭ್ಯಾಸ ನೀಡಿ ಉತ್ತಮ ಪ್ರಜೆಗಳಾಗಿ ರೂಪಿಸುತ್ತಿರುವುದು ತುಂಬಾ ಒಳ್ಳೆಯ ಕೆಲಸ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಚಲನಚಿತ್ರ ನಟ ಸಂತೋಷ್ ಬಿಲ್ವ ಮಾತನಾಡಿ, 19ನೇ ವರ್ಷ ಶಾಲಾ ವಾರ್ಷಿಕೋತ್ಸವ ಆಚರಿಸುತ್ತಿರುವ ಸಂಸ್ಥೆಗೆ ಬಂದು ತುಂಬಾ ಖುಷಿಯಾಗ್ತಿದೆ, ಮಕ್ಕಳು ಆಟೋ ಸ್ಪರ್ಧೆಯಲ್ಲಿ ಭಾಗವಹಿಸಿ ಬಹುಮಾನಗಳಿಸಿದ್ದಾರೆ ಈ ಶಾಲೆಯಲ್ಲಿ ಓದಿದ ಹಲವಾರು ವಿದ್ಯಾರ್ಥಿಗಳು ಉನ್ನತ ಸ್ಥಾನದಲ್ಲಿದ್ದಾರೆ. ಅದೇ ರೀತಿ ಇರುವ ಎಲ್ಲಾ ವಿದ್ಯಾರ್ಥಿಗಳು ಮುಂದೆ ದೇಶದ ಒಳ್ಳೆ ಪ್ರಜೆಗಳಾಗಲಿ, ಶಾಲೆಗೂ ಕೀರ್ತಿ ತರಲಿ ಎಂದು ಶುಭಾಶಯ ಕೋರಿದರು .
ಮಕ್ಕಳು ಹಾಗೂ ಪೋಷಕರಿಗೆ ಆಟೋಟ ಸ್ಪರ್ಧೆಯಲ್ಲಿ ವಿಜೇತರಾಗಿದ್ದವರಿಗೆ ಬಹುಮಾನ ವಿಚರಿಸಲಾಯಿತು.
ಲೀನಾ ಲೋಕೇಶ್ ರವರ ಸ್ಮರಣಾರ್ಥ ಕಳೆದ ಸಾಲಿನಲ್ಲಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ನಗದು ಹಾಗೂ ಪಾರಿತೋಷಕ ನೀಡಲಾಯಿತು. ಹಾಗೂ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನೆರವೇರಿತು.
ಕಾರ್ಯಕ್ರಮದಲ್ಲಿ 10 ಹಿರಿಯ ಸದಸ್ಯರುಗಳಿಗೆ ಸನ್ಮಾನಿಸಿ ಗೌರವಿಸಲಾಯಿತು.
ಮುಖ್ಯ ಅತಿಥಿಗಳಾಗಿ ಚಲನಚಿತ್ರ ನಟಿ ಕುಮಾರಿ ಸಾತ್ವಿಕ, ಚಲನಚಿತ್ರ ನಟ ಸಂತೋಷ್ ಬಿಲ್ವ, ಹಾಗೂ ಕೇಂದ್ರ ತೆರಿಗೆ ಅಧೀಕ್ಷಕರಾದ ಜಿ ಎನ್ ಶಶಿಧರ್, ನಾಗರಿಕ ವೇದಿಕೆ ಗೌರವ ಅಧ್ಯಕ್ಷರಾದ ಬಿ ಪಿ ಪುಟ್ಟಸ್ವಾಮಿ, ಅಧ್ಯಕ್ಷರಾದ ಕೆ ಆರ್ ಶ್ರೀರಂಗಯ್ಯ ಕಾರ್ಯದರ್ಶಿ ಕುಳ್ಳೇಗೌಡ, ಶಾಲಾ ಸಮಿತಿ ಅಧ್ಯಕ್ಷ ಜೆ ಲೋಕೇಶ್, ಉಪಾಧ್ಯಕ್ಷರಾದ ಎಚ್ ಅರವಿಂದ, ಖಜಾಂಚಿ ಎಸ್ ಪಿ ತ್ಯಾಗರಾಜು, ಕಾರ್ಯಕಾರಿ ಸಮಿತಿ ಸದಸ್ಯರಾದ ಕೃಷ್ಣ, ಎಚ್ ಕೆ ಅಪ್ಪಾಜಿಗೌಡ, ಬಿ ಶಿವಣ್ಣ,ಶೈಲೇಂದ್ರ, ರೇವಣ್ಣ ರಾಜು, ಎಂಎಸ್ ರಮೇಶ್,ಬಿ ಶ್ರೀಕಾಂತ್ ಮತ್ತು ಶಾಲಾ ಮುಖ್ಯೋಪಾದರಾದ ಶ್ರೀಮತಿ ಶಾಮಲದೇವಿ ಮುಂತಾದವರು ಉಪಸ್ಥಿತರಿದ್ದರು.