ಕೆ.ಆರ್.ನಗರ : ಸಾಲಿಗ್ರಾಮ ತಾಲೂಕಿನ ತಂದ್ರೆ ಅಂಕನಹಳ್ಳಿ ಗ್ರಾಮದಲ್ಲಿ ನಡೆದ ಹಾಲು ಉತ್ಪಾದಕರ ಸಹಕಾರ ಸಂಘದ ಕಾರ್ಯಕಾರಿ ಮಂಡಳಿಗೆ ಮುಂದಿನ 5 ವರ್ಷಗಳ ಅವಧಿಗೆ ನಡೆದ ಚುನಾವಣೆಯಲ್ಲಿ ನೂತನ ನಿರ್ದೇಶಕರಾಗಿ ಆಯ್ಕೆಯಾದರು.
ಸಾಮಾನ್ಯ ಕ್ಷೇತ್ರದಿಂದ ಯೋಗೇಶ್, ರಾಜಶೇಖರ್, ನಾಗೇಂದ್ರ, ನಿಂಗಪ್ಪ, ಶಿವಣ್ಣ, ಪಾಲಾಕ್ಷ, ರುದ್ರೇಶ್, ಸಾಮಾನ್ಯ ಮಹಿಳಾ ಕ್ಷೇತ್ರದಿಂದ ನೀಲಮ್ಮ, ಗೌರಮ್ಮ, ಪ. ಪಂಗಡ ದಿಂದ ಸಿದ್ದನಾಯಕ, ಇವರುಗಳು ಚುನಾವಣೆಯಲ್ಲಿ ಸ್ಪರ್ದಿಸಿ ಗೆಲುವನ್ನು ಸಾಧಿಸಿದರು . ಚುನಾವಣಾಧಿಕಾರಿಯಾಗಿ ಶಿಕ್ಷಕ ಶಂಕರೇಗೌಡ ಕಾರ್ಯ ನಿರ್ವಹಿಸಿದರು. ಕಾರ್ಯದರ್ಶಿ ಕಾರ್ತಿಕ್, ಶಿಕ್ಷಕ ನಾಗರಾಜು ಇದ್ದರು. ಮುಖಂಡರುಗಳಾದ ತಾಲೂಕು ಪಂಚಾಯತಿ ಮಾಜಿ ಸದಸ್ಯ ರಘು, ಬಸವರಾಜ್ ಸೇರಿದಂತೆ ಇನ್ನಿತರರು ಶುಭ ಹಾರೈಸಿದರು.