ಮೈಸೂರು: ಕೂಸಿನ ಮನೆ ತರಬೇತಿಯನ್ನು ಸದುಪಯೋಗ ಪಡೆದುಕೊಳ್ಳಿ ಎಂದು ಕೆ.ಆರ್.ನಗರ ತಾಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿಗಳಾದ ಹರೀಶ್ ಜಿ.ಕೆ ಅವರು ಹೇಳಿದರು. ಇಂದು ಕೆ.ಆರ್.ನಗರ ತಾಲೂಕು ಪಂಚಾಯತಿ ಸಾಮರ್ಥ್ಯ ಸೌಧದಲ್ಲಿ ಕೆ.ಆರ್ ನಗರ / ಸಾಲಿಗ್ರಾಮ ತಾಲೂಕು ಪಂಚಾಯತಿ ವ್ಯಾಪ್ತಿಯ ಕೂಸಿನ ಮನೆ ಆರೈಕೆದಾರರ ತರಬೇತಿ ಉದ್ಘಾಟಿಸಿ ಅವರು ಮಾತನಾಡಿದರು.
ಕೂಸಿನ ಮನೆ ಆರೈಕೆದಾರರು ಏಳು ದಿನಗಳ ತರಬೇತಿ ಪಡೆದು ಚೆನ್ನಾಗಿ ಕೆಲಸ ಮಾಡಬೇಕು. ತಮ್ಮ ಗ್ರಾಮ ಪಂಚಾಯತಿಯಲ್ಲಿರುವ ಕೂಸಿನ ಮನೆಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳು ಬರುವಂತೆ ನೋಡಿಕೊಳ್ಳಬೇಕು. ನಿಮ್ಮ ಮೇಲೆ ಸಾಕಷ್ಟು ಜವಾಬ್ದಾರಿ ಇರುತ್ತದೆ ಎಂದು ತಿಳಿಸಿದರು. ಗ್ರಾಮೀಣ ಪ್ರದೇಶದ ಬಡವರ ಮಕ್ಕಳಿಗೆ ಕೂಸಿನ ಮನೆ ವರವಾಗಿದೆ. ಅದರಲ್ಲಿ ಕೆಲಸ ಮಾಡಲು ಅವಕಾಶ ಸಿಕ್ಕ ತಾವುಗಳು ಬಹಳ ಜವಾಬ್ದಾರಿ ಅರಿತು ಕೆಲಸ ಮಾಡಬೇಕು. ಮಕ್ಕಳಿಗೆ ಯಾವುದೇ ರೀತಿಯಲ್ಲಿ ತೊಂದರೆಯಾಗದoತೆ ನೋಡಿಕೊಂಡು ಹೋಗಬೇಕು ಎಂದು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ತಾಲ್ಲೂಕು ಆರೋಗ್ಯಾಧಿಕಾರಿಗಳಾದ ಡಾ.ನಟರಾಜ್, ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಅಕ್ಕಮಹಾದೇವಿ, ಮ-ನರೇಗಾ ಸಹಾಯಕ ನಿರ್ದೇಶಕರಾದ ಭಾಸ್ಕರ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮೇಲ್ವಿಚಾರಕರಾದ ಅನುಪಮಾ ಮತ್ತು ಲತಾ, ತಾಂತ್ರಿಕ ಸಂಯೋಜಕರು ಭರತ್ ರಾಜ್, ಟಿ.ಎಂ.ಐ.ಸಿ ಅನೂಪ್ ಆರ್, ತಾ.ಪಂ ಐಇಸಿ ಸಂಯೋಜಕರಾದ ಸಂಜಯ್ ಬಿ.ಸಿ, ಹಾಗೂ ಮಕ್ಕಳ ಆರೈಕೆದಾರರು ಹಾಜರಿದ್ದರು.