Sunday, April 20, 2025
Google search engine

Homeರಾಜ್ಯಸುದ್ದಿಜಾಲ೫೯ ಲಕ್ಷ ರೂಗಳ ವಿವಿಧ ಕಾಮಗಾರಿಗೆ ಶಾಸಕ ಡಿ.ರವಿಶಂಕರ್ ಚಾಲನೆ

೫೯ ಲಕ್ಷ ರೂಗಳ ವಿವಿಧ ಕಾಮಗಾರಿಗೆ ಶಾಸಕ ಡಿ.ರವಿಶಂಕರ್ ಚಾಲನೆ

ಕೆ. ಆರ್.ನಗರ: ಬಿಳಿಕೆರೆಯಿಂದ, ಹೊಳೆನರಸೀಪುರ ತಾಲೂಕು ದೊಡ್ಡಹಳ್ಳಿವರೆಗೆ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗೆ ೧೨೦೦ ಕೋಟಿ ರೂಗಳ ಮಂಜೂರಾತಿ ದೊರೆತಿದ್ದು, ರಸ್ತೆ ಅಭಿವೃದ್ದಿಗೊಂಡ ನಂತರ ಪಟ್ಟಣದ ವ್ಯಾಪರ ವಹಿವಾಟು ಹೆಚ್ಚಾಗಲಿದೆ ಎಂದು ಶಾಸಕ ಡಿ.ರವಿಶಂಕರ್ ಹೇಳಿದರು.
ಇಲ್ಲಿನ ೩ನೇ ವಾರ್ಡ್ನ ವಿಜಯನಗರ ಬಡಾವಣೆಯಲ್ಲಿ ೫೯ ಲಕ್ಷ ರೂಗಳ ವಿವಿಧ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದ ಅವರು ಬೈಪಾಸ್ ರಸ್ತೆ ನಿರ್ಮಾಣವಾದರೆ ಪಟ್ಟಣದ ವ್ಯಾಪಾರಸ್ಥರಿಗೆ ತೊಂದರೆಯಾಗಲಿದೆ ಎಂಬ ಉದ್ದೇಶದಿಂದ ಸದರಿ ರಸ್ತೆಯನ್ನು ಅಭಿವೃದ್ದಿ ಪಡಿಸುವಂತೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಪತ್ರ ಬರೆಯಲಾಗಿದೆ ಎಂದು ತಿಳಿಸಿದರು.
ಬಜಾರ್ ರಸ್ತೆಯಲ್ಲಿ ಹಣ್ಣು ಮತ್ತು ಹೂ ವ್ಯಾಪಾರಸ್ಥರು ಸೇರಿದಂತೆ ಪುಟ್‌ಬಾತ್ ವ್ಯಾಪಾರಸ್ಥರ ಸಂಖ್ಯೆ ಹೆಚ್ಚಾಗಿದ್ದು ಇದರಿಂದ ಸಾರ್ವಜನಿಕರು ಮತ್ತು ವಾಹನಗಳ ಸಂಚಾರಕ್ಕೆ ತೊಂದರೆಯಾಗಿದೆ ಆದ್ದರಿಂದ ಇದಕ್ಕೆ ಶೀಘ್ರದಲ್ಲಿಯೇ ಶಾಶ್ವತ ಪರಿಹಾರ ನೀಡಲಾಗುತ್ತದೆ ಎಂದು ಹೇಳಿದ ಶಾಸಕರು ಪಟ್ಟಣದ ಜನತೆ ಸ್ವಚ್ಚತೆಗೆ ಮೊದಲ ಆದ್ಯತೆ ನೀಡಬೇಕು ಎಂದು ಮನವಿ ಮಾಡಿದರು.
ಪಟ್ಟಣದ ವಿವಿಧ ವಾರ್ಡ್ಗಳ ಪಾರ್ಕ್ ಅಭಿವೃದ್ದಿ, ಆಂಜನೇಯ ಸ್ವಾಮಿ ದೇವಾಲಯದ ಆವರಣಕ್ಕೆ ಗ್ರೀಲ್ ಅಳವಡಿಕೆ, ತರಕಾರಿ ಮಾರುಕಟ್ಟೆ ದುರಸ್ಥಿ ಮತ್ತು ಮುಸ್ಲಿಂ ಬಡಾವಣೆಯ ಮಿಲಾದ್‌ಪಾರ್ಕ್ ಅಭಿವೃದ್ದಿ ಕಾಮಗಾರಿಗಳಿಗೆ ಹಣ ನಿಗದಿಪಡಿಸಿ ಚಾಲನೆ ನೀಡಲಾಗಿದ್ದು, ಗುತ್ತಿಗೆದಾರರಿಂದ ಗುಣಮಟ್ಟದ ಕಾಮಗಾರಿ ಮಾಡಿಸಬೇಕಾದ್ದದ್ದು ಆಯಾ ವಾರ್ಡಿನ ಸದಸ್ಯರ ಜವಬ್ದಾರಿ ಎಂದು ಹೇಳಿದರು.
ಪುರಸಭೆ ಸದಸ್ಯರಾದ ಕೆ.ಎಲ್.ಜಗದೀಶ್, ಕೋಳಿ ಪ್ರಕಾಶ್, ಶಂಕರ್, ಶಿವಕುಮಾರ್, ಶಂಕರ್‌ಸ್ವಾಮಿ, ಜಾವಿದ್, ಸಿದ್ದಿಕ್, ಮಾಜಿ ಸದಸ್ಯರಾದ ಪದ್ಮಮ್ಮಶಂಕರೇಗೌಡ, ಕೆ.ವಿನಯ್, ಮುಖ್ಯಾಧಿಕಾರಿ ಡಾ.ಜಯಣ್ಣ, ಇಂಜಿನಿಯರ್ ಕೆ.ಆರ್.ಚಂದ್ರಶೇಖರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಉದಯಶಂಕರ್, ನಗರಾಧ್ಯಕ್ಷ ಎಂ.ಜೆ.ರಮೇಶ್, ಯುವ ಕಾಂಗ್ರೆಸ್ ಅಧ್ಯಕ್ಷ ಕೆಂಚಿಮoಜು, ಮುಖಂಡರಾದ ಮೂಡಲಕೊಪ್ಪಲುಕೃಷ್ಣೇಗೌಡ, ಗೊರಗುಂಡಿಚoದ್ರು, ತಿಮ್ಮಶೆಟ್ಟಿ, ಮಹದೇವ್, ಕೆ.ಎಲ್.ಜಯರಾಮು, ಗೌತಮ್‌ಜಾದವ್, ಪುಟ್ಟಸ್ವಾಮಿ, ಮತ್ತಿತರರು ಹಾಜರಿದ್ದರು.

RELATED ARTICLES
- Advertisment -
Google search engine

Most Popular