Sunday, April 20, 2025
Google search engine

Homeರಾಜ್ಯರಾಮನಗರ: ಕೆರೆಯಲ್ಲಿ ಬೆಳ್ಳಂಬೆಳಗ್ಗೆ ಒಂಟಿ ಸಲಗ ಪ್ರತ್ಯಕ್ಷ- ಗ್ರಾಮಸ್ಥರಲ್ಲಿ ಆತಂಕ

ರಾಮನಗರ: ಕೆರೆಯಲ್ಲಿ ಬೆಳ್ಳಂಬೆಳಗ್ಗೆ ಒಂಟಿ ಸಲಗ ಪ್ರತ್ಯಕ್ಷ- ಗ್ರಾಮಸ್ಥರಲ್ಲಿ ಆತಂಕ

ರಾಮನಗರ: ಚನ್ನಪಟ್ಟಣ ತಾಲೂಕಿನ‌ ಸಂತೆ ಮೊಗೇನಹಳ್ಳಿ ಗ್ರಾಮದ ಕೆರೆಯಲ್ಲಿ ಬೆಳ್ಳಂಬೆಳಗ್ಗೆ ಒಂಟಿ ಸಲಗವೊಂದು ಕಾಣಿಸಿಕೊಂಡಿದ್ದು, ಜನರು ಆತಂಕಕ್ಕೆ ಒಳಗಾಗಿದ್ದಾರೆ.

ಕನಕಪುರದಲ್ಲಿ ಕಳೆದ ಒಂದು ತಿಂಗಳಲ್ಲಿ ಒಂಟಿ ಸಲಗ ದಾಳಿಗೆ ನಾಲ್ವರು ಬಲಿಯಾಗಿದ್ದು, ಜಿಲ್ಲೆಯಲ್ಲಿ ಕಾಡಾನೆಗಳ ಉಪಟಳದಿಂದ ಜೀವ ಭಯದಲ್ಲೇ ಜಿಲ್ಲೆಯ ಜನರು ಜೀವನ ನಡೆಸುತ್ತಿದ್ದಾರೆ. ಈ ನಡುವೆ ಜೀವಭಯವಿದ್ದರೂ ಗಜರಾಜನ ಜಲಕ್ರೀಡೆ ನೋಡಲು ಗ್ರಾಮದ ಜನ ಮುಗಿಬಿದ್ದಿದ್ದಾರೆ.

ತೆಂಗಿನ‌ಕಲ್ಲು ಅರಣ್ಯ ಪ್ರದೇಶದಿಂದ ನಾಡಿನತ್ತ ಒಂಟಿ ಸಲಗ ಬಂದಿದ್ದು, ಸ್ಥಳಕ್ಕೆ ಅರಣ್ಯಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಒಂದೆಡೆ ಹೊಂಗನೂರು ಮುಖ್ಯ ರಸ್ತೆಗೆ ಸಲಗ ಬಾರದಂತೆ ಸಾರ್ವಜನಿಕರು ಪಟಾಕಿ ಸಿಡಿಸುತ್ತಿದ್ದಾರೆ. ಸಂಜೆವರೆಗೂ ಸಲಗ ಕೆರೆಯಲ್ಲಿ ತಂಗುವಂತೆ ಅರಣ್ಯ ಸಿಬ್ಬಂದಿ ಯೋಜನೆ ರೂಪಿಸಿದ್ದು, ಸಂಜೆ ಬಳಿಕ ತೆಂಗಿನಕಲ್ಲು ಅರಣ್ಯ ಪ್ರದೇಶಕ್ಕೆ ಸಲಗ ಓಡಿಸಲು ಅರಣ್ಯ ಸಿಬಂದಿ ಉಪಾಯ ಹೂಡಿದ್ದಾರೆ.

RELATED ARTICLES
- Advertisment -
Google search engine

Most Popular