ಮಂಡ್ಯ: 8 ವರ್ಷ ಪ್ರೀತಿಸಿ, ಎಲ್ಲಾ ರೀತಿ ಬಳಸಿಕೊಂಡು ಬಳಿಕ ಅನ್ಯಜಾತಿ ನೆಪವೊಡ್ಡಿ ಪ್ರಿಯತಮೆಗೆ ಪ್ರಿಯಕರ ಕೈ ಕೊಟ್ಟ ಪ್ರಕರಣಕ್ಕೆ ಸಂಬಂದಿಸಿದಂತೆ ಪ್ರಿಯಕರನ ಸಂಬಂಧಿಕರು ಹೈಡ್ರಾಮಾ ಸೃಷ್ಠಿಸಿದ್ದಾರೆ.
ಪ್ರೀತಿಸಿ ವಂಚಿಸಿದ ಪ್ರಿಯಕರನ ಮನೆ ಮುಂದೆ ಕುಳಿತ ಪ್ರಿಯತಮೆಯ ನಂಜನಗೂಡು ಮೂಲದ ರಮಶ್ರೀ ಮೇಲೆ ಪ್ರಿಯಕರ ಬಳ್ಳಗೆರೆ ಗ್ರಾಮದ ಮಂಜು.ಬಿ.ಆರ್ ಹಾಗೂ ಸಂಬಂಧಿಕರು ಹಲ್ಲೆ ಮಾಡಿದ್ದಾರೆ.

ನ್ಯಾಯ ಕೇಳಲು ಕುಳಿತ ಯುವತಿ ಹಾಗೂ ಸಂಬಂಧಿಕರ ಮೇಲೆ ಪ್ರಿಯಕರನ ಮನೆಯವರು ದರ್ಪ ತೋರಿದ್ದು, ಹುಡುಗನ ಸಂಬಂಧಿ ದೊಣ್ಣೆಯಿಂದ ಹಲ್ಲೆ ನಡೆಸಿದದ್ದಾರೆ.
ಹಲ್ಲೆಗೆ ಒಳಗಾದ ಯುವತಿ ಮಂಡ್ಯ ಮಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾಳೆ.