ಮಂಡ್ಯ: ಜನ ಜಾನುವಾರಗಳ ಕುಡಿಯುವ ನೀರಿಗಾಗಿ ಕೆ.ಆರ್.ಎಸ್. ಡ್ಯಾಂನ ಅಚ್ಚುಕಟ್ಟು ನಾಲೆಗಳಿಗೆ ನೀರು ಬಿಡುಗಡೆ ಮಾಡಲಾಗಿದೆ.
ಜನ ಜಾನುವಾರುಗಳಿಗೆ ಕುಡಿಯುವ ನೀರಿಗಾಗಿ ನಾಲೆಗಳಿಗೆ ನೀರು ಹರಿಸುವಂತೆ ರೈತರು ಪ್ರತಿಭಟನೆ ನಡೆಸಿದ್ದು, ಕಡೆಗೂ ರೈತರ ಪ್ರತಿಭಟನೆಗೆ ರಾಜ್ಯ ಸರ್ಕಾರ ಮಣಿದಿದೆ.
ಸಂಕ್ರಾಂತಿ ಹಬ್ಬದವರೆಗೆ ನಾಲೆಗಳಿಗೆ ಕಟ್ಟು ನೀರು ಹರಿಸಲು ಸರ್ಕಾರ ಸೂಚನೆ ನೀಡಿದೆ. ಅದರಂತೆ ನೀರಾವರಿ ಅಧಿಕಾರಿಗಳು ಜಲಾಶಯದಿಂದ ಇಂದು ನಾಲೆಗಳಿಗೆ ನೀರು ಬಿಡುಗಡೆ ಮಾಡಿದ್ದಾರೆ.
ಕೇವಲ ಕುಡಿಯುವ ನೀರಿಗಾಗಿ ಬಳಸಲು ರೈತರಿಗೆ ಸೂಚನೆ ನೀಡಲಾಗಿದೆ.