ವರದಿ: ವಿನಯ್ ದೊಡ್ಡಕೊಪ್ಪಲು
ಕೆ.ಆರ್.ನಗರ : ಕೆ.ಆರ್.ನಗರ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಸಮಾರು ೧೦ ಸಾವಿರ ಎಕರೆಯಲ್ಲಿ ರೈತರು ಕಬ್ಬು ಬೆಳದಿದ್ದು ಈ ಜಮೀನುಗಳಿಗೆ ನೀರು ಹರಿಸಲು ತಿಂಗಳಿಗೆ ಎರಡು ಬಾರಿ ನಾಲೆಗಳಿಗೆ ನೀರು ಹರಿಸಬೇಕೆಂದು ಮೈಮುಲ್ ಮಾಜಿ ಅಧ್ಯಕ್ಷ ಎ.ಟಿ.ಸೋಮಶೇಖರ್ ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳನ್ನು ಒತ್ತಾಯಿಸಿದರು.
ಪಟ್ಟಣದ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಕ್ಷೇತ್ರ ವ್ಯಾಪ್ತಿಯಲ್ಲಿ ಬರುವ ಚಾಮರಾಜ, ರಾಮಸಮುದ್ರ, ಮಿರ್ಲೇ ಶ್ರೇಣಿ ನಾಲೆಗಳ ನೀರಿನ ಮೂಲಕ ರೈತರು ಕಬ್ಬು ಬೆಳದಿದ್ದು ಇದೀಗ ನಾಲೆಗಳಲ್ಲಿ ನೀರು ಹರಿಸುವುದನ್ನು ನಿಲ್ಲಿಸಿರುವ ಪರಿಣಾಮ ಬೆಳೆ ಕೈತಪ್ಪಿ ನಷ್ಠ ಅನುಭವಿಸುವಂತಾಗಿದೆ ಎಂದು ದೂರಿದರು.
ಕಾವೇರಿ ನದಿಯಿಂದ ನಾಲೆಗಳಿಗೆೆ ನೀರು ಹರಿಸದ ಅಧಿಕಾರಿಗಳು ನಾಲೆಗಳ ಅಣೆಕಟ್ಟೆಗಳನ್ನು ಕಟ್ಟಿ ನದಿಗೆ ನೀರು ಹರಿಯಲು ಬಿಟ್ಟು ರೈತರಿಗೆ ಅನ್ಯಾಯ ಎಸಗುತ್ತಿರುವುದನ್ನು ದಾಖಲೆ ಸಮೇತ ಭಾವಚಿತ್ರಗಳನ್ನು ಬಿಡುಗಡೆ ಮಾಡಿ ರೈತರ ಹಿತ ಕಾಯದ ಅಧಿಕಾರಿಗಳ ವರ್ತನೆಯನ್ನು ಖಂಡಿಸಿದರು.
ಇತ್ತಿಚಿಗೆ ನೀರಾವರಿ ಇಲಾಖೆಯ ಅಧಿಕಾರಿಗಳು ತಮ್ಮ ಸಹಿ ಇಲ್ಲದೆ ಒಂದು ಸೂತ್ತೂಲೆಯ ಕರ ಪತ್ರವನ್ನು ಹಂಚಿ ಇದರಲ್ಲಿ ನಾಲೆಗಳಿಗೆ ನೀರನ್ನು ಹರಿಸಲಾಗುವುದಿಲ್ಲ ಎಂದು ತಿಳಿಸಿದ್ದು ಈ ಬಗ್ಗೆ ಅಧಿಕಾರಿಗಳು ಸ್ಪಷ್ಟನೆ ನೀಡಿ ನದಿಗೆನದಿಗೆ ಬಿಡುತ್ತಿರುವ ನೀರನ್ನು ನಾಲೆಗೆ ಹರಿಸಬೇಕೆಂದು ಆಗ್ರಹಿಸಿದರು.
ಚುಂಚನಕಟ್ಟೆ ಶ್ರೀರಾಮ ಸಕ್ಕರೆ ಕಾರ್ಖಾನೆ ಉತ್ತಮವಾಗಿ ಮುಂದಿ ದಿನಗಳಲ್ಲಿ ನಡೆಯ ಬೇಕಾದರೆ ರೈತರು ಹೆಚ್ಚಾಗಿ ಕಬ್ಬು ಬೆಳೆಯ ಬೇಕಾದ ಅನಿರ್ವಾತೆ ಇದ್ದು ಇದಕ್ಕೆ ರೈತರ ಬೆನ್ನಲುಬಿಗೆ ಇರುವ ಈ ನಾಲೆಗಳಿಗೆ ನೀರು ಹರಿಸಬೇಕಿದ್ದು ಈ ಸಂಬoದ ಶಾಸಕ ಡಿ.ರವಿಶಂಕರ್ ರವರು ನೀರಾವರಿ ಇಲಾಖೆಯ ಅಧಿಕಾರಿಗಳ ಸಭೆ ನಡೆಸಿ ಬೆಸಿಗೆ ಮುಗಿಯುವ ತನಕ ಈ ನಾಲೆಗಳಿಗೆ ತಿಂಗಳಿಗೆ ಕನಿಷ್ಟ ಎರಡು ಬಾರಿ ನೀರು ಹರಿಸಲು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ಆದೇಶ ಹಿಂಪಡೆಯಿರಿ: ರೈತರು ಜಮೀನಿಗಳಿಗೆ ತೆಗೆಸಿದ ಬೋರುವೇಲ್‌ಗಳಿಗೆ ಚೆಸ್ಕಂ ವತಿಯಿಂದ ವಿದ್ಯುತ್ ಸಂಪರ್ಕ ನೀಡಲು ಆರ್ ಆರ್ ನಂಬರ್ ಪಡೆಯಲು ಅನುಮತಿ ಕೊಡದೇ ಪ್ರತಿ ಬೋರ್ ಸಂಪರ್ಕಕ್ಕೆ ಸ್ವಂತ ಖರ್ಚಿನಲ್ಲಿಯೇ ಟಿ.ಸಿಯನ್ನ ಹಾಕಿಸಿಕೊಳ್ಳಬೇಕೆಂಬ ಸರ್ಕಾರದ ಆದೇಶವನ್ನ ಹಿಂಪಡೆದು ಈ ಹಿಂದೆ ಇದ್ದ ನಿಯಮವನ್ನು ಮುಂದು ವರಿಸಬೇಕೆಂದು ಎ.ಟಿ.ಸೋಮಶೇಖರ್ ಈ ಸಂದರ್ಭದಲ್ಲಿ ಸರ್ಕಾರಕ್ಕೆ ಒತ್ತಾಯಿಸಿದರು.ಈ ಸುದ್ದಿಗೋಷ್ಠಿಯಲ್ಲಿ ರೈತ ಮುಖಂಡರಾದ ಮಿರ್ಲೇ ಮೃತ್ಯಂಜಯ, ಚಿಕ್ಕನಾಯಕನ ಹಳ್ಳಿ ಡೈರಿ ಗೋಪಾಲ್, ಸಾಲಿಗ್ರಾಮ ಗ್ರಾ.ಪಂ ಸದಸ್ಯ ಹರೀಶ್ ಹಾಜರಿದ್ದರು.