Sunday, April 20, 2025
Google search engine

Homeರಾಜಕೀಯಮೂವರು ಡಿಸಿಎಂಗೆ ಶಾಸಕರ ವಿರೋಧವಿಲ್ಲ: ಸಚಿವ ಕೆ.ಎನ್.ರಾಜಣ್ಣ

ಮೂವರು ಡಿಸಿಎಂಗೆ ಶಾಸಕರ ವಿರೋಧವಿಲ್ಲ: ಸಚಿವ ಕೆ.ಎನ್.ರಾಜಣ್ಣ

ತುಮಕೂರು: ಮೂವರು ಡಿಸಿಎಂ ಗೆ ಯಾವ ಶಾಸಕರೂ ವಿರೋಧ ಮಾಡಿಲ್ಲ. ತುಂಬಾ ಜನ ಮೌನವಾಗಿದ್ದಾರೆ….ಮೌನಂ ಸಮ್ಮತಿ ಲಕ್ಷಣ ಅಲ್ವಾ?  ಎಂದು ಎಂದು ತುಮಕೂರಿನಲ್ಲಿ ಸಹಕಾರಿ ಸಚಿವ ಕೆ.ಎನ್.ರಾಜಣ್ಣ ಹೇಳಿದರು.

ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗಾಗಲೇ‌ ಸುರ್ಜೆವಾಲರ ಗಮನಕ್ಕೆ ತಂದಿದ್ದೇವೆ. ಹೆಚ್ಚುವರಿ‌ ಡಿಸಿಎಂ ಆದಾಕ್ಷಣ ಯಾರೂ ಯಾರ ಪೋರ್ಟ್ ಪೋಲಿಯೋ ಕಿತ್ತುಕೊಳ್ಳಲ್ಲ. ಹೆಚ್ಚುವರಿ ಡಿಸಿಎಂ ಆದರೆ ಡಿಕೆಶಿ ಅವರ ಪೋರ್ಟ್ ಪೋಲಿಯೋ ಯಾರೂ ಕಿತ್ತುಕೊಳ್ತಾರಾ? ಎಂದು ಕೇಳಿದರು.

ಇಂದು ಸುರ್ಜೇವಾಲ ಜೊತೆ ಸಭೆ ಇದ್ದು, 28 ಕ್ಷೇತ್ರದ ಚುನಾವಣಾ ಉಸ್ತುವಾರಿ ಸಚಿವರು ಸೇರಿದಂತೆ ಎಲ್ಲರ ಅಭಿಪ್ರಾಯ ಸಂಗ್ರಹ ಮಾಡಲಾಗುತ್ತದೆ.  ಅಭ್ಯರ್ಥಿ‌ಗಳ ಆಯ್ಕೆ ಪ್ರಕ್ರಿಯೆ ಪ್ರಾರಂಭ ಇಂದಿನಿಂದ ಆಗುತ್ತದೆ. ನಾಳೆ ಕೂಡ ಖರ್ಗೆ, ರಾಹುಲ್ ಗಾಂಧಿ ಉಪಸ್ಥಿತಿ ದೆಹಲಿಯಲ್ಲಿ ಸಭೆ ನಡೆಯಲಿದೆ

ಇವತ್ತಿನ ಸಭೆಯಲ್ಲಿ ಮೂವರು ಡಿಸಿಎಂ ವಿಚಾರ ಪ್ರಸ್ತಾಪ ಮಾಡಲ್ಲ. ನಾಳೆ ದೆಹಲಿಯಲ್ಲಿ ಪರಿಸ್ಥಿತಿ ನೋಡಿ ಮುಂದುವರೆಯಲಾಗುವುದು. ಅವರು ಯಾವ ವಿಚಾರಕ್ಕೆ ಸಭೆ ಕರೆದಿದ್ದಾರೆ ಅನ್ನೋದರ ಮೇಲೆ ಡಿಸಿಎಂ ವಿಚಾರ ಪ್ರಸ್ತಾಪ ಮಾಡಬೇಕೋ ಬೇಡವೋ ಅನ್ನೋದನ್ನು ನಿರ್ಧಾರವಾಗುತ್ತದೆ ಎಂದರು.

ಅಗತ್ಯ ಬಿದ್ರೆ ಸಚಿವರನ್ನು ಕಣಕ್ಕಿಳಿಸುವ ಸೂಚನೆ ಹೈಕಮಾಂಡ್ ನಿಂದ ಬಂದಿದೆ. ನಾನು ಲೋಕಸಭೆಗೆ ಸ್ಪರ್ಧೆ ಮಾಡಲ್ಲ. ಬದಲಾದ ಪರಿಸ್ಥಿತಿಯಲ್ಲಿ ನಿಲ್ಲಲ್ಲ ಎಂದು ಸ್ಪಷ್ಟಪಡಿಸಿದರು.

ಮುದ್ದಹನುಮೇಗೌಡರು ಡಿಸಿಸಿ ಬ್ಯಾಂಕ್ ಸಾಲದ ಕುರಿತು ಭೇಟಿ ಮಾಡಿದ್ದಾರೆ. ಬೇರೆ ರಾಜಕೀಯ ಮಾತುಕತೆ ನಡೆದಿಲ್ಲ. ಮುದ್ದಹನುಮೇಗೌಡ ಅಲ್ಲಾ, ಯಾರು ಬೇಕಾದರೂ ಕಾಂಗ್ರೆಸ್ ಗೆ ಬರಬಹುದು.  ವಿ.ಸೋಮಣ್ಣ ಕಾಂಗ್ರೆಸ್ ಬರುತ್ತಾರೆ ಎಂಬ ಊಹಾಪೋಹ ಇದೆ.  ಸೋಮಣ್ಣಗೆ ಟಿಕೆಟ್ ಕೊಡುತ್ತಾರೆ ಎಂಬ ಚರ್ಚೆನೂ ಇದೆ. ಜಯಚಂದ್ರರು ತಮ್ಮ ಮಗನಿಗೆ ಟಿಕೆಟ್ ಕೇಳಿದ್ದಾರೆ. ಅವರ ಮಗನಿಗೆ ಅವಕಾಶ ಕೊಟ್ಟರೆ ಕೊಡಲಿ ಎಂದು ಹೇಳಿದರು

ಸಿಎಂ ಐದು ವರ್ಷ ಪೂರೈಸುತ್ತಾರಾ ಎಂಬ ಪ್ರಶ್ನೆಗೆ ಉತ್ತರಿಸಿ,ಸಿಎಂ ಸಿದ್ದರಾಮ್ಯ ಯಾಕೆ 5 ವರ್ಷ ಪೂರೈಸಬಾರದು ಎಂದು ಮರುಪ್ರಶ್ನೆ ಹಾಕಿದರು. ಹೈಕಮಾಂಡ್, ಶಾಸಕರ ಬೆಂಬಲ ಇರೋವರೆಗೂ ಅವರು ಮುಂದುವರೆಯುತ್ತಾರೆ ಎಂದರು.

ಗಣರಾಜ್ಯೋತ್ಸವದಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ಟ್ಯಾಬ್ಲೋ ನಿರಾಕರಣೆ ವಿಚಾರವಾಗಿ ಮಾತನಾಡಿ,  ಕಳೆದ ವರ್ಷನೂ ನಾರಾಯಣಗುರು ಟ್ಯಾಬ್ಲೋ ನಿರಾಕರಣೆ ಮಾಡಿದ್ದಾರೆ. ಅದಕ್ಕೆ ಜನ ತಕ್ಕ ಫಲಿತಾಂಶ ಕೊಟ್ಟಿದ್ದಾರೆ. ಈ ವರ್ಷಾನೂ ನಾಲ್ವಡಿ ಕೃಷ್ಣರಾಜ ಒಡೆಯರ್ ಟ್ಯಾಬ್ಲೋ ನಿರಾಕರಣೆ ಮಾಡಿದ್ದಾರೆ. ಇದು ಕನ್ನಡಿಗರಿಗೆ ಮಾಡಿದ ಅವಮಾನ. ಮುಂದಿನ ದಿನದಲ್ಲಿ ಗೋಡ್ಸೆ ಟ್ಯಾಬ್ಲೊಗೆ ಅವಕಾಶ ಕೊಟ್ಟರೂ  ಆಶ್ಚರ್ಯವಿಲ್ಲ ಎಂದು ಕಿಡಿಕಾರಿದರು.

RELATED ARTICLES
- Advertisment -
Google search engine

Most Popular