Saturday, April 19, 2025
Google search engine

Homeರಾಜಕೀಯ2024ರ ಚುನಾವಣೆಯಲ್ಲಿ ಬಿಜೆಪಿಯವರೆ ನಿಮ್ಮನ್ನು ಸೋಲಿಸುವ ಕೆಲಸ ಮಾಡ್ತಾರೆ: ಪ್ರತಾಪ್ ಸಿಂಹ ವಿರುದ್ಧ ಎಂ.ಲಕ್ಷ್ಮಣ್ ಕಿಡಿ

2024ರ ಚುನಾವಣೆಯಲ್ಲಿ ಬಿಜೆಪಿಯವರೆ ನಿಮ್ಮನ್ನು ಸೋಲಿಸುವ ಕೆಲಸ ಮಾಡ್ತಾರೆ: ಪ್ರತಾಪ್ ಸಿಂಹ ವಿರುದ್ಧ ಎಂ.ಲಕ್ಷ್ಮಣ್ ಕಿಡಿ

ಮೈಸೂರು: 2024ರ ಚುನಾವಣೆಯಲ್ಲಿ ನಿಮ್ಮ ಪೊಲಿಟಿಕಲ್  ಲೈಫ್ ಎಂಡ್ ಆಗುತ್ತೆ. ಬಿಜೆಪಿಯವರೆ ನಿಮ್ಮನ್ನ ಸೋಲಿಸುವ ಕೆಲಸ ಮಾಡ್ತಾರೆ ಎಂದು ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ್ ಕಿಡಿಕಾರಿದರು.

ನಗರದ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಪ್ರತಾಪ್ ಸಿಂಹ ಅವರೇ ಕಳೆದ ವಿಧಾನಸಭಾ ಚುನಾವಣೆಯಲ್ಲಿ ನಿಮ್ಮ ಎಂಟು ವಿಧಾನಸಭಾ ಕ್ಷೇತ್ರದಲ್ಲಿ ಯಾಕೆ ಪ್ರಚಾರ ಮಾಡಲಿಲ್ಲ. ಅಲ್ಲೆಲ್ಲಾ ನೀವು ಅಡ್ಜಸ್ಟ್ ಮೆಂಟ್ ರಾಜಕಾರಣ ಮಾಡಿದ್ದೀರಾ ಎಂದು ಪ್ರಶ್ನಿಸಿದ್ದಾರೆ.

ವಿರೋಧ ಪಕ್ಷವಾಗಿ ಬಿಜೆಪಿಯವರು ಮೊಸರಲ್ಲಿ ಕಲ್ಲು ಹುಡುಕುವ ಕೆಲಸ ಮಾಡ್ತಿರೋದು ರಾಜ್ಯದ ದುರಂತ. ಸಂಸದ ಪ್ರತಾಪ್‌ ಸಿಂಹ, ಸಿ.ಟಿ‌ ರವಿ, ಅಶೋಕ್ ಚುನಾವಣೆ ಸೋತ ದಿನದಿಂದ ಕಾಂಗ್ರೆಸ್ ಪಕ್ಷವನ್ನ ಅಟ್ಯಾಕ್ ಮಾಡ್ತಿದ್ದಾರೆ. ಪ್ರತಾಪ್ ಸಿಂಹ ಅಡ್ಜಸ್ಟ್ಮೆಂಟ್ ರಾಜಕಾರಣದ ಬಗ್ಗೆ ಮಾತನಾಡಿದ್ದಾರೆ. ಹಾಗಾದ್ರೆ ನಿಮ್ಮ ಪಕ್ಷದಲ್ಲಿ ಯಾರು ಅಡ್ಜಸ್ಟ್ಮೆಂಟ್ ಮಾಡ್ಕೊಂಡಿದ್ರು ಹೇಳಿ..? 2014 ರಲ್ಲಿ ನೀವು ಹೇಗೆ ಗೆದ್ರಿ ಹೇಳಿ. ನೀವು ಗೆಲ್ಲಲು ಯಾರು ಸಪೋರ್ಟ್ ಮಾಡಿದ್ರು, ಯಾವ ಪಕ್ಷದವ್ರನ್ನ ಕಾಲಿಡ್ಕೊಂಡಿದ್ರಿ 2019 ರಲ್ಲಿ ಹೇಗೆ ಗೆದ್ರಿ ಹೇಳಿ…? ನೀವು ಪ್ರತಿನಿಧಿಸುವ ಮೈಸೂರು ಕೊಡಗು ವ್ಯಾಪ್ತಿಯಲ್ಲಿ ಎಲ್ಲಿ ಪ್ರಚಾರ ಮಾಡಿದ್ರಿ. ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಯಾವ ಕ್ಷೇತ್ರದಲ್ಲಿ ಚುನಾವಣೆ ಪ್ರಚಾರ ಮಾಡಿದ್ರಿ..? ವರುಣ ಕ್ಷೇತ್ರದಲ್ಲಿ ಪ್ರಚಾರ ಮಾಡ್ತಿದ್ರಿ. ನಿಮ್ಮ ಕ್ಷೇತ್ರದ ಎಂಟು ವಿಧಾನಸಭಾ ಕ್ಷೇತ್ರದಲ್ಲಿ ಯಾಕೆ ಪ್ರಚಾರ ಮಾಡ್ಲಿಲ್ಲ. ಅಲ್ಲೇಲ್ಲಾ ನೀವು ಅಡ್ಜಸ್ಟ್ಮೆಂಟ್ ರಾಜಕಾರಣ ಮಾಡಿದ್ದೀರಾ ಎಂದು ಕುಟುಕಿದರು.

ಅಕ್ಕಿ ವಿಚಾರದಲ್ಲಿ ಕೇಂದ್ರ ಸರ್ಕಾರ ಬಡಬಗ್ಗರ ಹೊಟ್ಟೆಯ ಮೇಲೆ ಹೊಡೆಯುತ್ತಿದೆ. ಬೇರೆ ಬೇರೆ ರಾಜ್ಯದಲ್ಲಿ ನಾವು ಅಕ್ಕಿಯನ್ನ ಪರ್ಚೇಸ್ ಮಾಡ್ತೀವಿ. ಅದಕ್ಕೆ ಸಂಬಂಧಿಸಿದಂತೆ ಚರ್ಚೆ ಆಗಿದೆ. ಕಳೆದ ಒಂದು ವಾರದಿಂದ ಬಿಜೆಪಿಯವ್ರು ಮೈಮೇಲೆ ಚೇಳು ಬಿಟ್ಕೊಂಡವರ ಆಗೆ ಆಡ್ತಿದ್ದಾರೆ. ವಿದ್ಯುತ್ ದರ ಹೆಚ್ಚಾಗಿದೆ ಅಂತಾ ನಮ್ಮ ಮೇಲೆ ಸುಳ್ಳು ಹೇಳ್ತಿದ್ದಾರೆ. ಆದರೆ ಈಗ ದರ ಏರಿಕೆ ಆಗಿರೋದು. ಬಿಜೆಪಿಯವರು ಅಧಿಕಾರದಲ್ಲಿ ಇದ್ದಾಗ ಒಟ್ಟು 5 ರೂಪಾಯಿ 62 ಪೈಸಾ ಹೆಚ್ಚಾಗಿದೆ. ಈಗ 70 ಪೈಸಾ ಹೆಚ್ಚಾಗಿರೋದು ಬಿಜೆಪಿ ಸರ್ಕಾರದ್ದೆ, ನಮ್ಮದಲ್ಲಾ. ಹಿಂದೆ ವಿದ್ಯುತ್ ದರ ಹೆಚ್ಚಾದಾಗ ಯಾಕೆ ಮಾತನಾಡಲಿಲ್ಲ. ಬಿಜೆಪಿಯ ಅಂದಾಭಿಮಾನಿಗಳು ಈಗ ಪ್ರತಿಭಟನೆ ಮಾಡ್ತಾರಂತೆ ಎಂದು ಎಂ.ಲಕ್ಷ್ಮಣ್ ಲೇವಡಿ ಮಾಡಿದರು.

ಪ್ರತಾಪ್ ಸಿಂಹ ಅವರೇ 2024 ರಲ್ಲಿ ನಡೆಯುವ ಚುನಾವಣೆಯಲ್ಲಿ ನಿಮ್ಮ ಪೊಲಿಟಿಕಲ್ ಲೈಫ್ ಎಂಡ್ ಆಗುತ್ತೆ. ನಿಮ್ಮನ್ನ ಸೋಲಿಸುವ ಕೆಲಸವನ್ನ ಬಿಜೆಪಿಯವ್ರೆ ಮಾಡ್ತಾರೆ. ನಿಮ್ಮ ಜೊತೆಗೆ ಯಾವ ಒಬ್ಬ ನಾಯಕ ಬರಲ್ಲ. ಹೋಗಿ ಪಿರಿಯಾಪಟ್ಟಣ, ಚಾಮುಂಡೇಶ್ವರಿ, ಹುಣಸೂರು ಭಾಗದಲ್ಲಿ ಪ್ರೆಸ್ ಮೀಟ್ ಮಾಡಿ ನೋಡಣ. ಅಲ್ಲಿ ಹೋದ ತಕ್ಷಣ ನಿಮ್ಮ ಕಾರ್ಯಕರ್ತರೇ ಹೊಡಿತಾರೆ ನಿಮಗೆ. ಮಡಿಕೇರಿಗೆ ಪ್ರತಾಪ್ ಸಿಂಹ ಯಾವಾಗ ಬರ್ತಾರೆ ಅಂತಾ ಭೋಪಯ್ಯ, ಅಪ್ಪಚ್ಚು ರಂಜನ್  ಕಾಯುತ್ತಿದ್ದಾರೆ. ಮೈಸೂರಿನಲ್ಲಿ ನಾಗೇಂದ್ರ ಕಾಯುತ್ತಿದ್ದಾರೆ. ಅಡ್ಜಸ್ಟ್ಮೆಂಟ್ ರಾಜಕೀಯ ಮಾಡುತ್ತಿರುವ ಪ್ರತಾಪ್ ಸಿಂಹ ನಿಮಗೆ ಚಳಿ ಬಿಡಿಸ್ತಾರೆ. ಇತ್ತೀಚಿಗೆ ಪ್ರತಾಪ್ ಸಿಂಹ ಮಡಿಕೇರಿಗೆ ಹೋದಾಗ ಹಂದಿ ಹಿಂದೆಯಿಂದ ಬಂದು ಕಚ್ಬಿಡ್ತಂತೆ. ಅದಕ್ಕೆ ಪ್ರತಾಪ್ ಸಿಂಹ ಇತ್ತೀಚೆಗೆ ಜಾಸ್ತಿ ಕಿರ್ಚಾಡ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

RELATED ARTICLES
- Advertisment -
Google search engine

Most Popular