ಗುಂಡ್ಲುಪೇಟೆ: ತಾಲೂಕಿನ ಶಿವಪುರ ಗ್ರಾಮದ ಪದ್ಮರಾಜು ಎಸ್.ಪಿ. ಮತ್ತು ಪುಟ್ಟಮ್ಮ ದಂಪತಿಗಳ ಪುತ್ರ ಮಂಜುನಾಥ ಎಸ್.ಪಿ. ಅವರಿಗೆ ಹಂಪಿ ಕನ್ನಡ ವಿಶ್ವವಿದ್ಯಾಲಯ ಪಿಎಚ್.ಡಿ ಪದವಿ ಪ್ರಧಾನ ಮಾಡಿದೆ.
ಹಂಪಿ ಕನ್ನಡ ವಿಶ್ವವಿದ್ಯಾಲಯದ ಜಾನಪದ ಅಧ್ಯಯನ ವಿಭಾಗದ ಬಾಹ್ಯ ಮಾರ್ಗದರ್ಶಕರಾದ ಡಾ.ಕೆ.ರಾಜೀವಲೋಚನ ಮಾರ್ಗದರ್ಶನದಲ್ಲಿ ಮಂಜುನಾಥ ಎಸ್.ಪಿ. ಕನ್ನಡ ವಿಶ್ವವಿದ್ಯಾಲಯದ ಜಾನಪದ ಅಧ್ಯಯನ ವಿಭಾಗಕ್ಕೆ ಸಲ್ಲಿಸಿದ “ಮಲೆ ಮಹದೇಶ್ವರ ಪರಂಪರೆ” ತಾತ್ವಿಕ ಮತ್ತು ಸಾಂಸ್ಕೃತಿಕ ಸಂಕಥನ” ಎಂಬ ವಿಷಯದ ಮಹಾ ಪ್ರಬಂಧಕ್ಕೆ ಪಿಎಚ್.ಡಿ ಪದವಿ ನೀಡಿ ಪುರಸ್ಕರಿಸಿದೆ.
ಮಂಜುನಾಥ ಎಸ್.ಪಿ. ಗಡಿ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಹಂಗಳ ಹೋಬಳಿಯ ಶಿವಪುರದ ಒಂದು ಪುಟ್ಟ ಗ್ರಾಮದಲ್ಲಿ ಈ ಸಾಧನೆ ಮಾಡಿರುವುದು ಮೊದಲಿಗರಾಗಿದ್ದಾರೆ. ಮಂಜುನಾಥ ಎಸ್.ಪಿ. ಸಂಶೋಧನಾ ಪ್ರಬಂಧ ಮಂಡಿಸಿ ಪಿಎಚ್.ಡಿ ಪದವಿಗೆ ಬಾಜನರಾಗಿರುವುದಕ್ಕೆ ತಾಲೂಕಿನ ಜನತೆ ಅಭಿನಂದನೆ ತಿಳಿಸಿದ್ದಾರೆ.