ಬನ್ನೂರು: ಅಯೋದ್ಯೆ ರಾಮ ಮಂದಿರದಿಂದ ಬಂದಿರುವ ಮಂತ್ರಾಕ್ಷತೆ ಪವಿತ್ರವಾದದ್ದು, ಇದನ್ನು ಶ್ರದ್ಧಾಭಕ್ತಿಯಿಂದ ಮನೆ ಮನೆಗೆ ತಲುಪಿಸುವ ಮೂಲಕ ರಾಮನ ಭಕ್ತಿಗೆ ಪಾತ್ರವಾಗಬೇಕೆಂದು ಪರಿಸರ ಜಾಗೃತಿ ವೇದಿಕೆಯ ಅಧ್ಯಕ್ಷ ಮಹೇಂದ್ರ ಸಿಂಗ್ ಕಾಳಪ್ಪ ತಿಳಿಸಿದರು.
ಅವರು ಪಟ್ಟಣದಲ್ಲಿ ಮಂತ್ರಾಕ್ಷತೆಯ ಪೂಜಾಕಾರ್ಯ ನಿಮಿತ್ತ ಹಮ್ಮಿಕೊಳ್ಳಲಾದ ಮೆರವಣಿಗೆಯ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು. ಅಯೋದ್ಯೆಯಲ್ಲಿ ನಿರ್ಮಾಣವಾಗಿರುವ ರಾಮಮಂದಿರ ಹಿಂದೂಗಳ ಪ್ರಮುಖ ಧಾರ್ಮಿಕ ಕ್ಷೇತ್ರವಾಗಿದೆ. ಅಲ್ಲಿಂದ ಬಂದಿರುವ ಮಂತ್ರಾಕ್ಷತೆಯನ್ನು ಮನೆಯಲ್ಲಿಟ್ಟು ಪೂಜೆಯನ್ನು ಮಾಡುವುದರಿಂದ ರಾಮನಿಗೆ ಪೂಜೆ ಮಾಡಿದಂತಾಗುತ್ತದೆ ಎಂದು ಅವರು ಅಭಿಪ್ರಾಯಪಟ್ಟರು. ಬನ್ನೂರಿನ ಪ್ರಮುಖ ಬೀದಿಗಳಲ್ಲಿ ಮಂತ್ರಾಕ್ಷತೆಯ ಮೆರವಣಿಗೆ ನಡೆಯಿತು. ದಾರಿಯುದ್ದಕ್ಕೂ ನೆರೆದ ಭಕ್ತರು ಮಂತ್ರಕ್ಷತೆಗೆ ಹೂವಿನ ಪುಷ್ಪನಮನ ಸಲ್ಲಿಸಿದರು.