ಮೈಸೂರು: ವರುಣಾ ಕ್ಷೇತ್ರದ ಶಾಲೆಗಳನ್ನು ರಾಜ್ಯದಲ್ಲಿಯೇ ಮಾದರಿ ಶಾಲೆಗಳನ್ನಾಗಿ ಮಾಡುವ ಕನಸಿದೆ ಎಂದು ವರುಣಾ ಕ್ಷೇತ್ರದ ಮಾಜಿ ಶಾಸಕ ಹಾಗೂ ಆಶ್ರಯ ಸಮಿತಿ ಅಧ್ಯಕ್ಷ ಡಾ. ಯತೀಂದ್ರ ಸಿದ್ದರಾಮಯ್ಯ ತಿಳಿಸಿದರು.
ವರುಣಾ ಕ್ಷೇತ್ರದ ಹಡಜನ, ಚಿಕ್ಕೇಗೌಡನ ಹುಂಡಿ, ದೇವಲಾಪುರ, ಕುಂಬ್ರಳ್ಳಿ, ಮರೀಗೌಡನ ಹುಂಡಿ, ಆಯರಹಳ್ಳಿ, ರಾಯನಹುಂಡಿ ಗ್ರಾಮಗಳಿಗೆ ಭೇಟಿ ನೀಡಿ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿ ಹಡಜನದಲ್ಲಿ ಶಾಲಾ ಕಟ್ಟಡ ಕಾಮಗಾರಿಗೆ ಗುದ್ದಲಿ ಪೂಜೆ, ನೆರವೇರಿಸಿ ಮಾತನಾಡಿದ ಅವರು ಯಾವುದೇ ದೇಶ ಅಭಿವೃದ್ಧಿಯಾಗಬೇಕಾದರೆ ಶಿಕ್ಷಣದಿಂದ ಮಾತ್ರ ಸಾಧ್ಯವಾಗಿರುವುದರಿಂದ ವರುಣಾ ಕ್ಷೇತ್ರದ ಶಾಲೆಗಳಿಗೆ ಶೌಚಾಲಯಗಳು, ಕುಡಿಯುವ ನೀರು, ಸ್ಮಾರ್ಟ್ ಕ್ಲಾಸ್, ಕಂಪ್ಯೂಟರ್ ಕೊಠಡಿ, ಹೊಸ ಕಟ್ಟಡಗಳು, ಕಟ್ಟಡಗಳ ದುರಸ್ತಿ, ಶಿಕ್ಷಕರು ಸೇರಿದಂತೆ ಸಮಗ್ರವಾಗಿ ಮೂಲಭೂತ ಸೌಲಭ್ಯಗಳನ್ನು ಒದಗಿಸಿ ರಾಜ್ಯದಲ್ಲಿಯೇ ಮಾದರಿ ಶಾಲೆಗಳನ್ನಾಗಿಸುವ ಕನಸು ನನಗಿದೆ ಎಂದ ಅವರು. ಹಡಜನ ಭಾಗಕ್ಕೆ ಫ್ರೌಡಶಾಲೆಯನ್ನು ಮಂಜೂರು ಮಾಡಿಸಿಕೊಡುವುದಾಗಿ ಭರವಸೆ ನೀಡಿದ ಅವರು ಅಂಬೇಡ್ಕರ್ ವಸತಿ ಯೋಜನೆಯಡಿ ಮನೆ ಮಂಜೂರಾತಿ ಪತ್ರಗಳನ್ನು ವಿತರಿಸಿದರು. ಕೆ.ಇ.ಬಿ, ಯವರಿಗೆ ಹಳೆ ವಿದ್ಯುತ್ ಕಂಬಗಳನ್ನು ತೆಗೆದು ಹೊಸ ಕಂಬಗಳನ್ನು ಹಾಕಲು ಸೂಚಿಸಿದರು.
ಈ ಸಂದರ್ಭದಲ್ಲಿ ಮೂಡಾ ಮಾಜಿ ಅಧ್ಯಕ್ಷ ಸಿ.ಬಸವೇಗೌಡ, ಮುಖ್ಯಮಂತ್ರಿಗಳ ವಿಶೇಷಾಧಿಕಾರಿ ಕೆ.ಎನ್. ವಿಜಯ್, ಆಪ್ತ ಸಹಾಯಕರಾದ ಶಿವಸ್ವಾಮಿ, ಪ್ರದೀಪ್ ಕುಮಾರ್, ತಾ.ಪಂ. ಮಾಜಿ ಅಧ್ಯಕ್ಷೆ ಮಂಜುಳಾ ಮಂಜುನಾಥ್, ಡಿಒಎಸ್‌ಪಿ ಕರಿಂರಾವತ್, ಬಿಇಒ ವಿವೇಕಾನಂದ, ಸಿಡಿಪಿಒ ತಿಬ್ಬಯ್ಯ, ಎಸ್ ಐ ಬಸಪ್ಪ, ಎಇಇ ಪ್ರಕಾಶ್, ಎಇ ಸಿದ್ದರಾಜು, ಆರ್ ಐ ಶಂಕರ್, ನಂಜನಗೂಡು ಎಪಿಎಂಸಿ ಅಧ್ಯಕ್ಷ ದಕ್ಷಿಣಾಮೂರ್ತಿ, ಮುಖಂಡರಾದ ಚೆನ್ನಾಜಮ್ಮ, ಶಿವಣ್ಣ, ನಂಜಪ್ಪ, ರಾಯನಹುಂಡಿ ರವಿ, ಮಹಾದೇವಣ್ಣ, ಉದ್ಬೂರು ಕೃಷ್ಣ, ದೇವಲಾಪುರ ಮಹೇಶ್, ಕುಂಬ್ರಳ್ಳಿ ಮಾದೇವ, ರಾಜು ಹಾಜರಿದ್ದರು.