ರಾಮನಗರ: ಕೂಸಿನ ಮನೆಗೆ ಬರುವಂತಹ ಮಕ್ಕಳನ್ನು ಆರೈಕೆದಾರರು ಸರಿಯಾಗಿ ನೋಡಿಕೊಳ್ಳಬೇಕು ಎಂದು ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಶಿವಕುಮಾರ್ ಅವರು ತಿಳಿಸಿದರು. ರಾಷ್ಟ್ರೀಯ ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್‌ರಾಜ್ ಇಲಾಖೆ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಆಶ್ರಯದಲ್ಲಿ ಮೊದಲನೆ ಹಂತದ ಕೂಸಿನ ಮನೆ ಮಕ್ಕಳನ್ನು ಆರೈಕೆ ಮಾಡುವವರಿಗೆಡಿ. ೯ರ ಮಂಗಳವಾರ ಚನ್ನಟ್ಟಣತಾಲ್ಲೂಕಿನ ಬಿ.ವಿ ಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯದ್ಯಾವ ಪಟ್ಟಣ ಗ್ರಾಮದಲ್ಲಿ ಪ್ರಾರಂಭವಾಗಿರುವ ಶಿಶುಪಾಲನಾ ಕೇಂದ್ರಕ್ಕೆ ರಾಮನಗರ ಜಿಲ್ಲಾ ಪಂಚಾಯಿತಿ ವತಿಯಿಂದತಾಲ್ಲೂಕು ವ್ಯಾಪ್ತಿಯಲ್ಲಿ ಹೊಸದಾಗಿತರಬೇತಿ ಪಡೆಯುತ್ತಿರುವಕೇರ್ ಟೇಕರ್ಸ್ ಸಿಬ್ಬಂದಿಗಳಿಗೆ ಕ್ಷೇತ್ರ ಭೇಟಿಹಮ್ಮಿಕೊಂಡುತರಬೇತಿಕಾರ್ಯಕ್ರಮದಕುರಿತು ಮಾತನಾಡಿದರು.
ಕೂಸಿನ ಮನೆ ಸ್ಥಾಪನೆಯು ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯಿತ್‌ರಾಜ್ ಇಲಾಖೆಯ ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ಒಂದಾಗಿದೆ, ನರೇಗಾ ಕ್ರಿಯಾಶೀಲಾ ಕೂಲಿಕಾರ್ಮಿಕರ ಮಕ್ಕಳ ಲಾಲನೆ ಪಾಲನೆ ಜೊತೆಗೆ ಪೋಣೆ ಮಾಡುವುದು ಈ ಯೋಜನೆಯ ಮುಖ್ಯಉದ್ದೇಶವಾಗಿದೆ ಎಂದರು. ಜಿಲ್ಲಾ ಪಂಚಾಯತ್‌ನ ಯೋಜನಾ ನಿರ್ದೇಶಕ ಮಂಜುನಾಥ್ ಮಾತನಾಡಿ, ನರೇಗಾ ಯೋಜನೆಯಡಿ ಕ್ರಿಯಾಶೀಲಾ ಹೊಂದಿರುವ ಕೂಲಿಕಾರರ ೬ ತಿಂಗಳಿಂದ ೩ ವರ್ಷದ ಒಳಗಿನ ಮಕ್ಕಳ ಆರೈಕೆ ಮಾಡುವ ಉದ್ದೇಶದಿಂದ ರಾಜ್ಯ ವ್ಯಾಪ್ತಿಯಲ್ಲಿ ಕೂಸಿನ ಮನೆಗಳನ್ನು ಆರಂಭಿಸಲಾಗಿದೆ ಎಂದರು.
ರಾಮನಗರ ಜಿಲ್ಲಾ ವ್ಯಾಪ್ತಿಯಲ್ಲೂ ೧೨೫ ಕೂಸಿನ ಮನೆ ಗುರಿಯನ್ನು ನೀಡಿದ್ದು, ಚನ್ನಪಟ್ಟಣ ತಾಲ್ಲೂಕು ವ್ಯಾಪ್ತಿಯಲ್ಲಿ ಸುಮಾರು ೨೭ ಪಂಚಾಯಿತಿಗಳ ಕೇರ್ ಟೇಕರ್ಸ್‌ಗಳು ತರಬೇತಿ ಪಡೆದಿರುತ್ತಾರೆ. ತರಬೇತಿ ಪಡೆದಕೇರ್ ಟೇಕರ್ಸ್‌ಗಳ ೭ನೇ ದಿನಕ್ಷೇತ್ರ ಭೇಟಿ ಹಮ್ಮಿಕೊಂಡಿದ್ದು.ಕೂಸಿನ ಮನೆಗೆ ಬೇಕಾದ ಸಿದ್ಧತೆಯನ್ನು ಸ್ವತಃಕೇರ್ ಟೇಕರ್ಸ್‌ಗಳಿಂದ ಮಾಡಿಸುವ ಮೂಲಕ ನಿತ್ಯ ಮಕ್ಕಳ ಆರೈಕೆ ಬಗ್ಗೆ, ಪೌಷ್ಠಿಕ ಆಹಾರ ಸೇರಿವಿವಿಧ ವಿಚಾರದ ಬಗ್ಗೆ ಮಾಸ್ಟರ್ ಟ್ರೈನರ್ಸ್ ಪ್ರಯೋಗಿಕವಾಗಿತರಬೇತಿ ನೀಡುತ್ತಿದ್ದಾರೆ,ಎಲ್ಲಾಕೇರ್ ಟೇಕರ್ಸ್‌ಗಳು ಈ ತರಬೇತಿಯಸದುಪಯೋಗ ಪಡೆದುಕೊಳ್ಳಬೇಕು ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ತರಬೇತಿ ಪಡೆದಕೇರ್ ಟೇಕರ್ಸ್‌ಗಳಿಗೆ ಪ್ರಮಾಣ ಪತ್ರ ವಿತರಿಸಲಾಯಿತು.ಜಿಲ್ಲಾ ಪಂಚಾಯತ್‌ಸಹಾಯಕಯೋಜನಾಧಿಕಾರಿ ಲೋಕೇಶ್, ಪಂಚಾಯಿತಿಅಭಿವೃದ್ಧಿ ಅಧಿಕಾರಿರಾಜೇಶ್ವರಿ, ಜಿಲ್ಲಾ ಹಾಗೂ ತಾಲೂಕು ಐಇಸಿ ಸಂಯೋಜಕರು, ತಾಲ್ಲೂಕು ಪಂಚಾಯತ್ ತಾಂತ್ರಿಕ ಸಂಯೋಜಕರು ಹಾಗೂ ಪಂಚಾಯಿತಿ ಸಿಬ್ಬಂದಿಗಳು ಇದ್ದರು.