ವರದಿ: ವಿನಯ್ ದೊಡ್ಡಕೊಪ್ಪಲು
ಕೆ.ಆರ್.ನಗರ: ಸರ್ಕಾರಿ ನೌಕರರ ಹಿತ ಕಾಯಲು ನಾನು ಸದಾ ಬದ್ದನಾಗಿ ಕೆಲಸ ಮಾಡುತ್ತೇನೆ ಎಂದು ಶಾಸಕ ಡಿ.ರವಿಶಂಕರ್ ಹೇಳಿದರು. ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸಂಘದ ವತಿಯಿಂದ ಹೊರ ತಂದಿರುವ ಕ್ಯಾಲೆಂಡರ್ ಬಿಡುಗಡೆ ಮಾಡಿ ಮಾತನಾಡಿದ ಅವರು ಯಾವುದೇ ಸಮಸ್ಯೆಗಳಿದ್ದರು ಪದಾಧಿಕಾರಿಗಳು ನನ್ನ ಗಮನಕ್ಕೆ ತಂದರೆ ಕೂಡಲೇ ಸ್ಪಂದಿಸಿ ಅವುಗಳ ಪರಿಹಾರಕ್ಕೆ ಕ್ರಮ ಕೈಗೊಳ್ಳುತ್ತೇನೆ ಎಂದರು.
ಪದಾಧಿಕಾರಿಗಳು ಸಹ ಸದಸ್ಯರ ಹಿತ ಕಾಯುವ ಕೆಲಸವನ್ನು ನಿರಂತರವಾಗಿ ಮಾಡುವುದರ ಜತೆಗೆ ಸಮಾಜ ಮುಖಿ ಕೆಲಸ ಕೈಗೊಂಡರೆ ಅದಕ್ಕೆ ನನ್ನ ಬೆಂಬಲ ಸದಾ ಇರುತ್ತದೆ ಎಂದು ಭರವಸೆ ನೀಡಿದರು.
ಸಂಘದ ಅಧ್ಯಕ್ಷ ಸಿ.ಜಿ.ಅರುಣ್‌ಕುಮಾರ್, ಪ್ರಧಾನ ಕಾರ್ಯದರ್ಶಿ ಪಿ.ಪ್ರಶಾಂತ್, ನಿರ್ದೇಶಕ ಗಣೇಶ್, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಶಂಕರೇಗೌಡ, ಎನ್‌ಪಿಎಸ್ ನೌಕರರ ಸಂಘದ ಅಧ್ಯಕ್ಷ ಶಶಿಕಿರಣ್, ತಾಲೂಕು ಕಛೇರಿ ಸಿಬ್ಬಂದಿಗಳಾದ ಸಣ್ಣಸ್ವಾಮಿ, ಧ್ರುವಕುಮಾರ್, ಆರೋಗ್ಯ ಇಲಾಖೆಯ ನೌಕರ ಕೆ.ಪಿ.ಆನಂದ್,ಕೃಷಿ ಇಲಾಖೆಯ ಗಣೇಶ್,ಐ.ಬಿ.ವಿನಯ್ ಮತ್ತಿತರರು ಹಾಜರಿದ್ದರು.