ಮಂಗಳೂರು(ದಕ್ಷಿಣ ಕನ್ನಡ): ಮಂಗಳೂರು ಹೊರವಲಯದ ಕೆಂಜಾರು ಬಳಿ ಬೃಹತ್ ಗಾತ್ರದ ಎರಡು ಕಟೌಟ್ ಗಳು ನಿನ್ನೆ ರಾತ್ರಿ ಭಾರೀ ಗಾಳಿ ಮಳೆಗೆ ರಸ್ತೆಗೆ ಬಿದ್ದಿತ್ತು.

ಇದರಿಂದ ಸಂಭಾವ್ಯ ಅಪಘಾತ ಸಂಭವಿಸುವ ಸಾಧ್ಯತೆ ಇತ್ತು. ಇದೇ ವೇಳೆ ಇದೇ ರಸ್ತೆಯಲ್ಲಿ ಮಂಗಳೂರು ಕಡೆ ಹೋಗುತ್ತಿದ್ದ ಮಾಜಿ ಶಾಸಕ ಮೊಹಿದಿನ್ ಬಾವ ಅವರು ಕೂಡಲೇ ತನ್ನ ವಾಹನವನ್ನು ನಿಲ್ಲಿಸಿ ಸ್ಥಳೀಯರೊಬ್ಬರ ಸಹಾಯದಿಂದ ಕಟೌಟ್ ಗಳನ್ನು ಪಕ್ಕಕ್ಕೆ ಸರಿಸಿ ಸಮಯ ಪ್ರಜ್ಞೆ ಮೆರೆದಿದ್ದಾರೆ.
ಕತ್ತಲು ತುಂಬಿದ್ದ ನಿರ್ಜನ ಪ್ರದೇಶವಾಗಿದ್ದರಿಂದ ಭಾರಿ ಗಾಳಿ, ಮಳೆಗೆ ವಿದ್ಯುತ್ ಸಂಪರ್ಕ ಕೂಡ ಇಲ್ಲಿ ಕಡಿತಗೊಂಡಿತ್ತು.