ಮಂಡ್ಯ: ಸನಾತನ ಧರ್ಮದ ವಿರೋಧ ಮಾಡುವ ಮೂಲಕ ಕಾಂಗ್ರೆಸ್ ತನ್ನಿಂದ ತಾನೆ ಪತನವಾಗ್ತಿದೆ. ಅವರ ವಿನಾಶವನ್ನ ಅವ್ರೆ ಮಾಡಿಕೊಳ್ತಿದ್ದಾರೆ. ಉತ್ತರ ಪ್ರದೇಶದಲ್ಲಿ 1 ಸೀಟ್ ಕಾಂಗ್ರೆಸ್ ಗೆಲ್ಲಲು ಆಗಲಿಲ್ಲ ಎಂದು ಕೇಂದ್ರ ಸಚಿವ ಕ್ರಿಶನ್ ಪಾಲ್ ಗುರ್ಜರ್ ತಿಳಿಸಿದರು.
ಮಂಡ್ಯದ ಬಿಜೆಪಿ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ದೇಶದಲ್ಲಿ ಮೋದಿಯವರ ಗ್ಯಾರಂಟಿಗಳ ಬಗ್ಗೆ ಭರವಸೆ ಇದೆ. ಮೋದಿ ದೇಶದ ಜನತೆಗೆ ವಿವಿಧ ಯೋಜನೆಗಳ ಗ್ಯಾರಂಟಿ ನೀಡಿದ್ದಾರೆ. ದೇಶದಲ್ಲಿ ರೈತರು, ಮಹಿಳೆಯರಿಗೆ ಸೇರಿದಂತೆ ಅನೇಕ ಜನಪರ ಯೋಜನೆಗಳನ್ನ ನೀಡಿದ್ದಾರೆ. ಮೋದಿಯವರ ಕಾರ್ಯ ವೈಖರಿಯಿಂದ ನಮ್ಮ ದೇಶ 1೦ನೇ ಸ್ಥಾನದಿಂದ 5 ನೇ ಸ್ಥಾನಕ್ಕೆ ಆರ್ಥಿಕ ವ್ಯವಸ್ಥೆ ಬಂದಿದೆ ಎಂದು ಹೇಳಿದರು.

ಅಯೋಧ್ಯಯ ಶ್ರೀರಾಮ ಮಂದಿರ ಉದ್ಘಾಟನೆ ಬಿಜೆಪಿ ಕಾರ್ಯಕ್ರಮ ಅಲ್ಲ. ಅಯೋಧ್ಯೆ ರಾಮಮಂದಿರ ಉದ್ಘಾಟನೆ ಸಾಧು ಸಂತರ ಕಾರ್ಯಕ್ರಮ. ಕಾರ್ಯಕ್ರಮಕ್ಕೆ ಬಿಜೆಪಿ ಆಹ್ವಾನಿಸಿಲ್ಲ. ಅಂತ ಕಾಂಗ್ರೆಸ್ ಬಾಯ್ ಕಟ್ ಮಾಡ್ತಿದೆ. ಕಾಂಗ್ರೆಸ್ ನಾಯಕರನ್ನ ಬಿಜೆಪಿ ನಾಯಕರು ಆಹ್ವಾನಿಸುವ ಅವಶ್ಯಕತೆ ಇಲ್ಲ ಎಂದು ಹೇಳಿದರು.
ಬಿಜೆಪಿಯಿಂದ ಮಂತ್ರಾಕ್ಷತೆ ವಿತರಣೆ:
ಅಯೋಧ್ಯೆಯಲ್ಲಿ ರಾಮ ಮಂದಿರ ಉದ್ಘಾಟನೆ ಹಿನ್ನಲೆ ಮನೆ ಮನೆಗೆ ತೆರಳಿ ಕೇಂದ್ರ ಸಚಿವ ಕ್ರಿಶನ್ ಪಾಲ್ ಗುರ್ಜರ್ ಮಂತ್ರಾಕ್ಷತೆ ವಿತರಿಸಿದ್ದಾರೆ.
ಈ ವೇಳೆ ಕಾಂಗ್ರೆಸ್ ನ ಮಾಜಿ ಸಚಿವ, ಎಂ.ಎಸ್. ಆತ್ಮಾನಂದ ಮನೆಗೆ ಭೇಟಿ ಮಂತ್ರಾಕ್ಷತೆ ವಿತರಿಸಿದ್ದು, ಕೇಂದ್ರ ಸಚಿವರನ್ನು ಸ್ವಾಗತಿಸಿದ ಮಾಜಿ ಸಚಿವ ಆತ್ಮಾನಂದ ಮಂತ್ರಾಕ್ಷತೆಯನ್ನು ಸ್ವೀಕರಿಸಿದ್ದಾರೆ.