ಮಂಡ್ಯ: ಸಿದ್ದರಾಮಯ್ಯ ಅವರ ಹೆಸರಲ್ಲೇ ರಾಮ ಇದ್ದಾನೆ.’! ವೋಟ್ ಗಾಗಿ ಬಿಜೆಪಿಯವರಿಗೆ ಇವತ್ತು ರಾಮ ನೆನಪಾಗಿದ್ದಾನೆ ಎಂದು ಬಿಜೆಪಿ ವಿರುದ್ಧ ರಮೇಶ್ ಬಾಬು ಬಂಡಿಸಿದ್ದೇಗೌಡ ವಾಗ್ದಾಳಿ ನಡೆಸಿದ್ದಾರೆ.
ರಾಮ ಮಂದಿರ ಉದ್ಘಾಟನೆಗೆ ಸಿಎಂ ಆಹ್ವಾನಿಸದ ವಿಚಾರ ಕುರಿತು ಮಂಡ್ಯದಲ್ಲಿ ಶಾಸಕ ರಮೇಶ್ ಬಾಬು ಬಂಡಿಸಿದ್ದೇಗೌಡ ಪ್ರತಿಕ್ರಿಯಿಸಿ, ನಾವು ಪ್ರತಿ ನಿತ್ಯ ರಾಮನ ಪೂಜೆ ಮಾಡ್ತೇವೆ. ಅವರು ಕರೆದಿಲ್ಲ ಅಂತ ನಾವು ಪೂಜೆ ಮಾಡೋದನ್ನ ಬಿಟ್ಟುಬಿಡ್ತಿವಾ? ನಮ್ಮೂರಲ್ಲಿ ರಾಮ ಮಂದಿರ ಇವತ್ತಿನಿಂದ ಇದ್ಯಾ. ಸಿದ್ದರಾಮಯ್ಯ ಮನೆಲಿ ರಾಮ ಇವತ್ತಿನದಿನದಿಂದ ಇದ್ಯಾ.? ಸಿದ್ದರಾಮಯ್ಯ ಅವರ ಹೆಸರಲ್ಲೇ ರಾಮ ಇದ್ದಾನೆ. ಸಿದ್ದರಾಮ ಅಂತ ರಾಮ ಇದ್ದಾರೆ ಎಂದು ಕಿಡಿಕಾರಿದರು.
ನಾವು ಎದ್ದ ತಕ್ಷಣವೇ ದೇವರಿಗೆ ಕೈ ಮುಗಿಯುವವರು.
ಅವರು ಕರೆದ್ರೆ ಮಾತ್ರ ನಾವು ರಾಮನ ನೋಡಕ್ಕೆ ಹೋಗ್ತಿವಾ? ನಾವು ಹಿಂದೆ ಊರಲ್ಲಿ ರಾಮ ರಾಮ ಹಂತ ಭಜನೆ ಮಾಡ್ತಿದ್ವಿ ಅವಾಗ ಇವರು ಬಂದಿದ್ರ? ರಾಮನ ನೆನಪಿಸೋಕೆ.? ಇವತ್ತು ವೋಟಿಗಾಗಿ ರಾಮ ನೆನಪಾಗಿದ್ದಾನೆ ಅವತ್ತು ನೆನಪಿರಲಿಲ್ವಾ? ನಮ್ಮ ಮುತ್ತಾತರು ರಾಮ ಮಂದಿರ ಮಾಡಿ ಹೋಗಿದ್ದಾರೆ ಎಂದು ತಿಳಿಸಿದರು.
ನಾನು ಕೂಡ ಕರಸೇವಕ, ಕಾನೂನು ಉಲ್ಲಂಘನೆ ಮಾಡಿರುವವ ವಿರುದ್ಧ ಕ್ರಮ ಕೈಗೊಳ್ತಾರೆ ಅಷ್ಟೆ. ನಾನು ತಪ್ಪು ಮಾಡಿದ್ರೆ ಶಿಕ್ಷೆಯಾಗುತ್ತೆ ಅವರು ತಪ್ಪು ಮಾಡಿದ್ದಾರೆ ಶಿಕ್ಷೆ. ನಾವು ಕೋಮು ಸಂಘರ್ಷ ಮಾಡ್ತಿಲ್ಲ, ಎಲ್ಲರನ್ನ ಒಟ್ಟಿಗೆ ಕರೆದುಕೊಂಡು ಹೋಗ್ತೇವೆ ಎಂದರು.