ಮದ್ದೂರು: ರಾಸುಗಳಿಗೂ ಮತ್ತು ರೈತನಿಗೂ ಅವಿ ನವ ಭಾವ ಸಂಬಂಧವಿದ್ದು, ಎತ್ತಿನಗಾಡಿ ಓಟದ ಸ್ಪರ್ಧೆ ರೈತರಿಗೆ ಮನರಂಜನೆಯ ಜೊತೆಗೆ ಕ್ರೀಡಾ ಸ್ಪೂರ್ತಿ ನೀಡುತ್ತದೆ ಎಂದು ಶಾಸಕ ಕೆ.ಎಂ. ಉದಯ್ ಹೇಳಿದರು.
ತಾಲೂಕಿನ ಮಾರಸಿಂಗನಹಳ್ಳಿ ಗ್ರಾಮದಲ್ಲಿ ಸಂಕ್ರಾಂತಿ ಹಬ್ಬದ ಅಂಗವಾಗಿ ಮೊದಲನೇ ವರ್ಷದ ರಾಜ್ಯಮಟ್ಟದ ಹಸುಗಳ ಹಾಗೂ ಚಿಕ್ಕಡಿಗಾಡಿ ಓಟದ ಸ್ಪರ್ಧೆಯನ್ನು ಉದ್ಘಾಟಿಸಿ ನಂತರ ಅವರು ಮಾತನಾಡಿದರು.
ಸದಾ ಕೃಷಿ ಚಟುವಟಿಕೆಯಲ್ಲಿ ಭಾಗಿಯಾಗುವ ರೈತರು ಸಂಕ್ರಾಂತಿ ಸಮಯದಲ್ಲಿ ಇಂತಹ ಕ್ರೀಡಾಕೂಟಗಳನ್ನು ಆಯೋಜಿಸುವ ಮೂಲಕ ರಾಸುಗಳು ಮತ್ತು ಹಾಗೂ ರೈತರ ನಡುವೆ ಬಾಂಧವ್ಯ ಹೆಚ್ಚಲು ಸಹಕಾರಿಯಾಗಿದೆ ಎಂದರು.
ರಾಜ್ಯದಲ್ಲಿ ನಮ್ಮ ಸರ್ಕಾರ ರೈತರಿಗೆ ಹಲವು ರೀತಿಯ ಯೋಜನೆಗಳನ್ನು ಜಾರಿಗೆ ತಂದಿದ್ದು ಅವುಗಳನ್ನು ಸಮರ್ಪಕವಾಗಿ ಬಳಸಿಕೊಂಡು ರೈತರು ಆರ್ಥಿಕವಾಗಿ ಸ್ವಾವಲಂಬಿಗಳಾಗಬೇಕು ಎಂದರು.
ಸರ್ಕಾರದ ಗ್ಯಾರಂಟಿ ಯೋಜನೆಗಳಿಂದ 1.25 ಕೋಟಿ ಜನರಿಗೆ ಅನುಕೂಲವಾಗಿದ್ದು, ಜ.12 ರಂದು ಶಿವಮೊಗ್ಗದಲ್ಲಿ 5 ನೇ ಗ್ಯಾರಂಟಿಯಾದ ಯುವ ನಿಧಿಗೂ ಚಾಲನೆ ನೀಡುವ ಮೂಲಕ ರಾಜ್ಯದಲ್ಲಿ ನುಡಿದಂತೆ ನಡೆದ ಏಕೈಕ ಸರ್ಕಾರ ಕಾಂಗ್ರೆಸ್ ಸರ್ಕಾರ ಮಾತ್ರ ಎಂದು ಪ್ರಶಂಸೆ ವ್ಯಕ್ತಪಡಿಸಿದರು.
ನಾನು ಮತ್ತು ವಿಧಾನ ಪರಿಷತ್ ಸದಸ್ಯರಾದ ದಿನೇಶ್ ಗೂಳಿಗೌಡ ಅವರು ಸೇರಿಕೊಂಡು ಕದಲೂರು ಮತ್ತು ಮಾರಸಿಂಗನಹಳ್ಳಿ ಸೇರಿದಂತೆ ತಾಲೂಕಿನ ಹಳ್ಳಿಗಳನ್ನು ಸಮಗ್ರವಾಗಿ ಅಭಿವೃದ್ಧಿ ಮಾಡಲಾಗುವುದು ಎಂದು ಹೇಳಿದರು.

ವಿಧಾನ ಪರಿಷತ್ ಸದಸ್ಯ ದಿನೇಶ್ ಗೂಳಿಗೌಡ ಮಾತನಾಡಿ, ರಾಸುಗಳು ರೈತನ ಜೀವನಾಡಿ ರೈತನ ಮಿತ್ರವಾಗಿವೆ. ರಾಸುಗಳು ಕೃಷಿಯಲ್ಲಿ ರೈತನ ಜೊತೆ ಭಾಗವಹಿಸು ಮೂಲಕ ರೈತರಿಗೆ ವರದಾನವಾಗಿವೆ. ಹಳ್ಳಿಕಾರ್ ತಳಿಯ ರಾಸುಗಳು ತನ್ನದೆಯಾದ ಇತಿಹಾಸವನ್ನು ಹೊಂದಿದೆ. ರೈತರು ಅತಿ ಹೆಚ್ಚು ಹಳ್ಳಿಕಾರ್ ತಳಿಗಳನ್ನು ಬಳಸುತ್ತಾರೆ ಎಂದರು.
ದಿನದಿಂದ ದಿನಕ್ಕೆ ಮಳೆ ಕಡಿಮೆಯಾಗುತ್ತಿದೆ ಕರ್ನಾಟಕ ಸೇರಿದಂತೆ 13 ರಾಜ್ಯಗಳಲ್ಲಿ ಬರವಿದೆ. ಕೃಷಿ ಕ್ಷೇತ್ರ ಕ್ಷೀಣಿಸುತ್ತಿದೆ ರೇಷ್ಮೆ ಮತ್ತು ಹೈನುಗಾರಿಕೆ ರೈತರ ಆದಾಯವನ್ನು ದ್ವಿಗುಣಗೊಳಿಸುತ್ತಿದೆ ಪಶು ಚಿಕಿತ್ಸಾಲಯಗಳಲ್ಲಿ ಸಿಬ್ಬಂದಿಗಳು ಕೊರತೆಯಿದ್ದು ನಾನು ಮತ್ತು ಶಾಸಕ ಕೆ.ಎಂ. ಉದಯ್ ಸದನದಲ್ಲಿ ಧ್ವನಿ ಎತ್ತುವ ಮೂಲಕ ಪಶು ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅಗತ್ಯ ಕ್ರಮವಹಿಸುತ್ತೇವೆ ಎಂದರು.

ನೀರಾವರಿ ಇಲಾಖೆಯಿಂದ ಮಂಡ್ಯ ಜಿಲ್ಲೆಗೆ 680 ಕೋಟಿ ಅನುದಾನ ಬಿಡುಗಡೆಗೆ ಸಿದ್ದವಾಗುದ್ದು, ಮದ್ದೂರು ಕ್ಷೇತ್ರಕ್ಕೆ 120 ಕೋಟಿ ಅನುದಾನಕ್ಕೆ ಶಾಸಕ ಕೆ.ಎಂ. ಉದಯ್ ಅವರು ಪ್ರಸ್ತಾವನೆ ಸಲ್ಲಿಸಿದ್ದಾರೆ ಶೀಘ್ರದಲ್ಲಿ ಹಣ ಬಿಡುಗಡೆಯಾಗಲಿದೆ. ಮದ್ದೂರು ಕ್ಷೇತ್ರದ ನೀರಾವರಿ ಯೋಜನೆಗಳಿಗೆ ಮರು ಜೀವ ದೊರೆಯಲಿದೆ ಶಾಸಕ ಕೆ.ಎಂ. ಉದಯ್ ಅವರು ನೂತನ ಶಾಸಕರಾಗಿ ಆಯ್ಕೆಯಾದ ನಂತರ ಮದ್ದೂರು ತಾಲೂಕಿನಲ್ಲಿ ಹಲವು ಅಭಿವೃದ್ಧಿ ಕಾರ್ಯಗಳನ್ನು ಮಾಡುವ ಮೂಲಕ ನಿರಂತರವಾಗಿ ಜನಸಂಪರ್ಕದಲ್ಲಿದ್ದಾರೆ ಎಂದರು.
ಮಂಡ್ಯ, ರಾಮನಗರ, ಮೈಸೂರು, ತುಮಕೂರು, ಚಾಮರಾಜನಗರ, ಮತ್ತು ಹಾಸನ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಿಂದ ಸ್ಪರ್ಧೆಯಲ್ಲಿ ರಾಸುಗಳು ಭಾಗವಹಿಸಿದ್ದವು.
ಕಾರ್ಯಕ್ರಮಕ್ಕ ಜಾನಪದ ಕಲಾ ತಂಡಗಳೊಂದಿಗೆ ಶಾಸಕ ಹಾಗೂ ವಿಧಾನ ಪರಿಷತ್ ಸದಸ್ಯರನ್ನು ತೆರೆದ ವಾಹನದಲ್ಲಿ ಮೆರವಣಿಗೆ ಮಾಡಲಾಯಿತು ನಂತರ ಬೃಹತ್ ಹಾರ ಹಾಕುವ ಮೂಲಕ ಸ್ವಾಗತಿಸಿದರು.
ಎತ್ತಿನ ಗಾಡಿ ಓಟದ ಸ್ಪರ್ಧೆಯನ್ನು ನೋಡಲು ಮಾರಸಿಂಗನಹಳ್ಳಿ ಹಾಗೂ ಅಕ್ಕ ಪಕ್ಕದ ಗ್ರಾಮಸ್ಥರು ಸ್ಪರ್ಧೆಯನ್ನು ವೀಕ್ಷಣೆ ಮಾಡಿದರು.
ಕೆಪಿಸಿಸಿ ಸದಸ್ಯ ಕದಲೂರು ರಾಮಕೃಷ್ಣ, ಗ್ರಾಮ ಪಂಚಾಯಿತಿ ಅಧ್ಯಕ್ಷ ಗೀತಾ ಸತೀಶ್, ಉಪಾಧ್ಯಕ್ಷ ಮಾರಸಿಂಗನಹಳ್ಳಿ ಎಂ.ಜಿ. ಗೂಳಿಗೌಡ, ಗೂಳೇಶ್, ಸದಸ್ಯರಾದ ರಾಜು ಸಾಕಮ್ಮ ಪಾಪಣ್ಣ ಬೋರೇಗೌಡ ಪುಟ್ಟಮ್ಮ ಮಾಜಿ ಉಪಾಧ್ಯಕ್ಷ ವರಲಕ್ಷ್ಮಿ ರಾಜ ಕಸಪ್ಪ ಮಾಜಿ ಅಧ್ಯಕ್ಷ ಮಾರ್ಸಿಂಗನಹಳ್ಳಿ ರಾಮಚಂದ್ರ ಕಾರ್ಯಕ್ರಮದ ಆಯೋಜಕರಾದ ಪುಟ್ಟಸ್ವಾಮಿ, ಕಿರಣ್ ,ಗೂಳೇಶ್ ,ಮನುರಾಜ್ ವೆಂಕಟೇಶ್ ಇತರರು ಇದ್ದರು.