ಮದ್ದೂರು: ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿರುವ ಸ್ವಾಮಿ ವಿವೇಕಾನಂದರ ಪುತ್ಥಳಿಗೆ ತಹಶೀಲ್ದಾರ್ ಸೋಮಶೇಖರ್ ಮಾಲಾರ್ಪಣೆ ಮಾಡಿ ಮಾತನಾಡಿದರು.
ಸ್ವಾಮಿ ವಿವೇಕಾನಂದ ಯುವ ಸಾಂಸ್ಕೃತಿಕ ಮತ್ತು ಕ್ರೀಡಾ ಸಂಘ ಆಯೋಜನೆ ಮಾಡಿದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ನಾವು ವಿದ್ಯಾರ್ಥಿ ದೆಸೆಯಲ್ಲಿದ್ದಾಗ ವಿವೇಕಾನಂದರ ಆದರ್ಶಗಳನ್ನ ಓದಿ ತಿಳಿದುಕೊಂಡಿದ್ದವು. ಅವರ ಫೋಟೋಗಳನ್ನು ನಮ್ಮ ಸಹಪಾಠಿಗಳು ನಾವು ಮನೆಯಲ್ಲಿ ಇರಿಸಿಕೊಂಡಿದ್ದವು ಆದರೆ ಪ್ರಸ್ತುತ ದಿನಗಳಲ್ಲಿ ಸಿನಿಮಾ ನಟರನ್ನ ಇಂದಿನ ಯುವ ಜನಾಂಗ ಅತಿ ಹೆಚ್ಚಾಗಿ ಫಾಲೋ ಮಾಡುತ್ತಿರುವುದು ವಿಷಾದನೀಯ ಎಂದರು.
ವಿವೇಕಾನಂದರವರು ಹೆಸರು ಆಗಿರುವುದು ಶಿಸ್ತು ಮತ್ತು ಏಕತೆಗೆ ಸ್ವಾಮಿ ವಿವೇಕಾನಂದರು ಪಾಶಿಮಾತ್ಯ ದೇಶಗಳಿಗೆ ಯೋಗ, ವೇದಾಂತ ಹಿಂದುತ್ವ ಶಿಸ್ತಿನ ಬಗ್ಗೆ ಪರಿಚಯಿಸಿದ ವ್ಯಕ್ತಿ ಅಮೆರಿಕಾದ ಚಿಕಾಗೋದಲ್ಲಿ ನಡೆದ ಸರ್ವಧರ್ಮ ಸಮಾವೇಶದಲ್ಲಿ ಅಮೆರಿಕದ ನನ್ನ ಸೋದರ ಸೋದರಿಯ ಎಂಬ ಮಾತಿನಿಂದ ಸಭಾಂಗಣವನ್ನು ತಮ್ಮ ಭಾಷಣದಿಂದ ತಲ್ಲಣ ಮಾಡಿದರು ಎನ್ ಸಿಸಿ ವಿದ್ಯಾರ್ಥಿಗಳು ಸೃಷ್ಟಿಗೆ ಹೆಸರಾದವರು ನಾನು ಕೂಡ ಶಾಲಾ-ಕಾಲೇಜು ಹಂತದಲ್ಲಿ ಎನ್ ಸಿಸಿಯಲ್ಲಿ ಸೇವೆ ಸಲ್ಲಿಸಿದ್ದೇನೆ ಎಂದು ನೆನಪಿಸಿಕೊಂಡರು.
ಈ ವೇಳೆ ಕ್ಷೇತ್ರ ಶಿಕ್ಷಣಾಧಿಕಾರಿ ಕಾಳಿರಯ್ಯ, ಸ್ವಾಮಿ ವಿವೇಕಾನಂದ ಯುವ ಸಾಂಸ್ಕೃತಿಕ ಮತ್ತು ಕ್ರೀಡಾ ಸಂಘದ ಕಾರ್ಯದರ್ಶಿ ಎನ್ ಪ್ರಸನ್ನ, ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಗೀತಾ, ಉಪ ಪ್ರಾಂಶುಪಾಲರಾದ ಸುಕನ್ಯ, ಶಿಕ್ಷಕರಾದ ಮೋಹನ್, ಕಿರಣ್ ಸೇರಿದಂತೆ ಇತರರು ಹಾಜರಿದ್ದರು.