Monday, April 21, 2025
Google search engine

Homeರಾಜ್ಯಲೋಕಸಭೆ ಚುನಾವಣೆಯಲ್ಲಿ ಪಕ್ಷಕ್ಕೆ ಸೋಲಾದರೆ ರಾಜ್ಯದ ಸಚಿವರ ತಲೆದಂಡ: ಡಾ.ಜಿ.ಪರಮೇಶ್ವರ್

ಲೋಕಸಭೆ ಚುನಾವಣೆಯಲ್ಲಿ ಪಕ್ಷಕ್ಕೆ ಸೋಲಾದರೆ ರಾಜ್ಯದ ಸಚಿವರ ತಲೆದಂಡ: ಡಾ.ಜಿ.ಪರಮೇಶ್ವರ್

ಬೆಂಗಳೂರು: ಲೋಕಸಭೆ ಚುನಾವಣೆಯಲ್ಲಿ ಪಕ್ಷಕ್ಕೆ ಸೋಲಾದರೆ ರಾಜ್ಯದ ಸಚಿವರನ್ನು ತಲೆದಂಡ ಮಾಡುವ ಎಚ್ಚರಿಕೆಯನ್ನು ಹೈಕಮಾಂಡ್ ನೀಡಿದ್ದಾಗಿ ಗೃಹಸಚಿವ ಡಾ.ಜಿ.ಪರಮೇಶ್ವರ್ ಹೇಳಿದ್ದಾರೆ.

ಬೆಂಗಳೂರಿನಲ್ಲಿ ಮಾತನಾಡಿದ ಅವರು, ಎರಡು ಮೂರು ದಿನಗಳಲ್ಲಿ ರಣದೀಪ್ ಸಿಂಗ್ ಸುರ್ಜೇವಾಲ ರಾಜ್ಯಕ್ಕೆ ಬರಬಹುದು. ಅಭ್ಯರ್ಥಿಗಳ ಬಗ್ಗೆ ಅಥವಾ ಸಚಿವರ ಸ್ಪರ್ಧೆ ವಿಚಾರವಾಗಿ ಮಾತಾಡಿಲ್ಲ. ಜವಾಬ್ದಾರಿ ತೆಗೆದುಕೊಂಡು ಪ್ರಚಾರ ಮಾಡಿ ಅಂತ ಹೇಳಿದ್ದಾರೆ. ಸಚಿವರ ತಲೆದಂಡ ಅನ್ನೋದನ್ನೂ ಹೇಳಿದ್ದಾರೆ. ಗೆಲ್ಲುವ ಕ್ಷೇತ್ರದಲ್ಲಿ ಸೋತರೆ ಸರಿಯಾಗಿ ಕೆಲಸ ಮಾಡಿಲ್ಲ ಅಂತ ತಿಳಿದುಕೊಳ್ಳಬೇಕಾಗುತ್ತದೆ ಅಂತ ಹೇಳಿದ್ದಾರೆ. ನೀವೆಲ್ಲ ಗಂಭೀರವಾಗಿ ಪರಿಗಣಿಸಬೇಕು. ಇಲ್ಲಾಂದರೆ ಕಷ್ಟ ಆಗುತ್ತೆ ಅಂತ ಹೇಳಿದ್ದಾರೆ ಎಂದರು.

ದೆಹಲಿಯಲ್ಲಿ ಸಂಯೋಜಕರ ಸಭೆಯಲ್ಲಿ ಭಾಗಿಯಾದ ವಿಚಾರವಾಗಿ ಮಾತನಾಡಿದ ಪರಮೇಶ್ವರ್, ನಮ್ಮನ್ನೆಲ್ಲ ಎಐಸಿಸಿ ಅಧ್ಯಕ್ಷಕರು ಲೋಕಸಭಾ ಚುನಾವಣೆ ತಯಾರಿಗೆ ಕರೆಸಿದ್ದರು. ಕರ್ನಾಟಕ ಮಾತ್ರ ಅಲ್ಲ ಎಲ್ಲಾ ರಾಜ್ಯದವರನ್ನು ಕರೆಸಿದ್ದರು. ದೇಶದಲ್ಲಿ ಒಟ್ಟು 5 ಕ್ಲಸ್ಟರ್ ಇದ್ದು, ಕರ್ನಾಟಕ ಕ್ಲಸ್ಟರ್ ಒಂದರಲ್ಲಿದೆ ಎಂದರು.

ಸಭೆಯಲ್ಲಿ ಯಾವ ರೀತಿ ಬಿಎಲ್ ಎ ಮಾಡಬೇಕು, ಪಂಚಾಯತಿ ‌ಮಟ್ಟದಲ್ಲಿ ಹೇಗೆ ಸಮಿತಿ ಮಾಡಬೇಕು, ಅಭ್ಯರ್ಥಿಗಳ ಆಯ್ಕೆ ಆದ ಮೇಲೆ ಏನೆಲ್ಲಾ ಕ್ರಮ ತಗೆದುಕೊಳ್ಳಬೇಕು ಎಂಬ ಕುರಿತು ಚರ್ಚೆ ಆಗಿದೆ. ಹಿಂದೆ ವೀಕ್ಷಕರನ್ನು ನೇಮಿಸುತ್ತಿದ್ದರು, ಈಗ ಸಂಯೋಜಕರನ್ನು ನೇಮಿಸಿದ್ದಾರೆ. ವಾರ್ ರೂಮ್ ಅಂತ ಇರುವುದನ್ನು ಈಗ ಕನ್ವೆನ್ಷನ್ ಸೆಂಟರ್ಸ್ ಅಂತ ಮಾಡಿದ್ದಾರೆ. ಶಶಿಕಾಂತ್ ಸೆಂಥಿಲ್ ಅವರನ್ನು ಎಲ್ಲಾ ಕೋ ಆರ್ಡಿನೇಷನ್ ಗೆ ಮುಖ್ಯಸ್ಥರನ್ನಾಗಿ ಮಾಡಿದ್ದಾರೆ ಎಂದರು.

ಸಭೆಯಲ್ಲಿ ಏನು ಮಾಡಬೇಕು, ಏನು ನೀರಿಕ್ಷೆ ಮಾಡುತ್ತೇವೆ ಎಂಬುದನ್ನ ಹೇಳಿದ್ದಾರೆ. ಕಳೆದ ಬಾರಿ 1 ಕ್ಷೇತ್ರ ಗೆದ್ದಿದ್ದೇವೆ. ಹೆಚ್ಚು ಸ್ಥಾನ ಗೆಲ್ಲಬೇಕು. ಹಿಂದೆ 27 ಸ್ಥಾನ ಗೆದ್ದಿದ್ದೆವು. ಈ ಬಾರಿಯೂ ಅಷ್ಟನ್ನೂ ಗೆಲ್ಲಿ ಅಂತ ಹೇಳಿದ್ದಾರೆ. ಚುನಾವಣೆ ವಿಚಾರವಾಗಿ ಹೈಕಮಾಂಡ್ ಆಗಾಗ ಸೂಚನೆ ರವಾನಿಸಲಿದೆ ಎಂದರು.

RELATED ARTICLES
- Advertisment -
Google search engine

Most Popular