Monday, April 21, 2025
Google search engine

Homeರಾಜ್ಯಸುದ್ದಿಜಾಲಹೆಸ್ಕಾಂ ನೀಡುವ ಗ್ರಾಹಕ ಸುರಕ್ಷಾ ಕ್ರಮಗಳನ್ನು ತಪ್ಪದೆ ಅನುಸರಿಸಬೇಕು: ಎಂ.ಎಂ.ನದಾಫ್

ಹೆಸ್ಕಾಂ ನೀಡುವ ಗ್ರಾಹಕ ಸುರಕ್ಷಾ ಕ್ರಮಗಳನ್ನು ತಪ್ಪದೆ ಅನುಸರಿಸಬೇಕು: ಎಂ.ಎಂ.ನದಾಫ್

ಧಾರವಾಡ : ವಿದ್ಯುತ್ ಬಳಕೆದಾರರು ಸುರಕ್ಷತೆಗೆ ಹೆಚ್ಚು ಒತ್ತು ನೀಡಬೇಕು ಮತ್ತು ಗ್ರಾಹಕ ಸುರಕ್ಷತಾ ಕ್ರಮಗಳನ್ನು ಅನುಸರಿಸಬೇಕು. ಹೆಸ್ಕಾಂ ಗ್ರಾಹಕರ ಜಾಗೃತಿಗಾಗಿ ವಿವಿಧ ರೀತಿಯ ಕಾರ್ಯಕ್ರಮಗಳನ್ನು, ಕುಂದುಕೊರೆತೆಗಳ ಸೇವೆಗಳನ್ನು ಕಾಲಕಾಲಕ್ಕೆ ಆಯೋಜಿಸುತ್ತಿದೆ ಎಂದು ಹೆಸ್ಕಾಂ ಧಾರವಾಡ ನಗರ ವಿಭಾಗದ ಕಾರ್ಯಪಾಲಕ ಅಭಿಯಂತರ ಎಂ.ಎಂ.ನದಾಫ್ ಅವರು ಹೇಳಿದರು.

ಅವರು ಧಾರವಾಡ ಮಾಳಮಡ್ಡಿಯ ಕೆಇ ಬೋರ್ಡ ಸೆಂಟ್ರಲ್ ಸ್ಕೂಲ್‍ದಲ್ಲಿ ಹೆಸ್ಕಾಂ ನಗರ ವಿಭಾಗದಿಂದ ಆಯೋಜಿಸಿದ್ದ, ವಿದ್ಯುತ್ ಸುರಕ್ಷತಾ ಕ್ರಮಗಳ ಕುರಿತು ಅರಿವು ಕಾರ್ಯಕ್ರಮವನ್ನು ಉದ್ಘಾಟಿಸಿ, ಮಾತನಾಡಿದರು.

ಗ್ರಾಹಕರ ಕುಂದು ಕೊರತೆಗಳನ್ನು ಆಲಿಸಲು ಧಾರವಾಡ ನಗರದ ಎಲ್ಲ ಹೆಸ್ಕಾಂ ಉಪವಿಭಾಗಗಳಲ್ಲಿ ಗ್ರಾಹಕರ ಸಭೆಗಳನ್ನು ಸಂಘಟಿಸಲಾಗುತ್ತಿದೆ. ಸಾರ್ವಜನಿಕರ ದೂರುಗಳ ಹಿನ್ನೆಲೆಯಲ್ಲಿ ತಕ್ಷಣ ಸ್ಪಂದಿಸಿ, ಸಮಸ್ಯೆಗಳನ್ನು ಪರಿಹರಿಸಲಾಗುತ್ತಿದೆ. ವಿದ್ಯುತ್ ಅವಗಡಗಳು ಸಂಭವಿಸುವ ಸ್ಥಳಗಳನ್ನು ಗುರುತಿಸಿ ಮಾಹಿತಿ ನೀಡಿದರೆ ಹೆಸ್ಕಾಂ ಸೂಕ್ತ ಕ್ರಮವಹಿಸುತ್ತದೆ ಎಂದು ಅವರು ಹೇಳಿದರು.

ವಿದ್ಯುತ್ ಬಳಕೆಯಲ್ಲಿ ಪಾಲಕರು, ಮಕ್ಕಳು ಜಾಗೃತಿ ವಹಿಸಬೇಕು. ಹಳೆಯ ಮತ್ತು ದುರಸ್ತಿ ಇರುವ ವಿದ್ಯುತ್ ಪರಿಕರಗಳನ್ನು ಬದಲಾಯಿಸಬೇಕು. ಕಾಲಕಾಲಕ್ಕೆ ವಿದ್ಯುತ್ ಬಿಲ್ ತುಂಬಬೇಕು. ಮತ್ತು ಡಿಜಿಟಲ್ ಮೂಲಕ ಹೆಸ್ಕಾಂ ಬಿಲ್ ಪಾವತಿಸಲು ಆಸಕ್ತಿವಹಿಸಬೇಕೆಂದು ಅವರು ಹೇಳಿದರು. ರಾಜ್ಯ ಸರ್ಕಾರ ಜಾರಿಗೊಳಿಸಿರುವ ಗೃಹಜ್ಯೋತಿ ಯೋಜನೆಯನ್ನು ಗ್ರಾಹಕರು ಸಮಪರ್ಕವಾಗಿ ಬಳಸಿಕೊಂಡು ಆರ್ಥಿಕವಾಗಿ ಸದುಪಯೋಗ ಮಾಡಿಕೊಳ್ಳಬೇಕು. ಅನಗತ್ಯವಾಗಿ ವಿದ್ಯುತ್ ಬಳಕೆಯನ್ನು ನಿಲ್ಲಿಸಬೇಕು. ವಿದ್ಯುತ್ ಸರಬರಾಜು ದುರುಪಯೋಗವಾಗದಂತೆ ವಿದ್ಯುತ್ ಜಾಗೃತ ದಳವು ನಿರಂತರ ನಿಗಾವಹಿಸಿದೆ ಎಂದು ಕಾರ್ಯಪಾಲಕ ಅಭಿಯಂತರ ಎಂ.ಎಂ.ನದಾಫ್ ಅವರು ಹೇಳಿದರು.

ಕೆ.ಇ.ಬೋರ್ಡ ಸೆಂಟ್ರಲ್ ಸ್ಕೂಲ್‍ನ ಉಪ ಪ್ರಾಚಾರ್ಯ ಅಶ್ವೀನಕುಮಾರ ಅಧ್ಯಕ್ಷತೆ ವಹಿಸಿದ್ದರು. ಧಾರವಾಡ ನಗರ ಹೆಸ್ಕಾಂ ಉಪವಿಭಾಗ-1ರ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಮಂಜುನಾಥ ಟಿಂಗರಿಕರ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿಕ್ಷಕಿ ಮಮತಾ ದಾವಣಗೇರೆ ಸ್ವಾಗತಿಸಿದರು. ಹೆಸ್ಕಾಂ ಶಾಖಾಧಿಕಾರಿ ಮಹೇಶ ನಾಗನೂರ ವಂದಿಸಿದರು. ಕಾರ್ಯಕ್ರಮವನ್ನು ಪ್ರಾಣೇಶ ಕುಲಕರ್ಣಿ ಕಾರ್ಯಕ್ರಮ ನಿರೂಪಿಸಿದರು.

ವಿದ್ಯುತ್ ಸುರಕ್ಷತಾ ಕ್ರಮಗಳ ಕುರಿತು ವಿದ್ಯಾರ್ಥಿಗಳಿಗೆ ಪ್ರಶ್ನೆಗಳ ಮುಖಾಂತರ ಮನಮುಟ್ಟುವಂತೆ ಕಾರ್ಯಕ್ರಮವನ್ನು ನಡೆಸಲಾಯಿತು ಮತ್ತು ವಿದ್ಯುತ್ ಸುರಕ್ಷತಾ ಕ್ರಮದ ಕುರಿತು ಪ್ರಭಂದ ಸ್ಪರ್ದೆಯನ್ನು ಆಯೋಜಿಸಿ, ಬಹುಮಾನ ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಕೆ.ಇ.ಬೋರ್ಡ ಸೆಂಟ್ರಲ್ ಸ್ಕೂಲ್‍ನ ಪ್ರಾಥಮಿಕ ಹಾಗೂ ಪ್ರೌಢ ಶಾಲಾ ವಿದ್ಯಾರ್ಥಿಗಳು, ಶಿಕ್ಷಕರು, ಶಾಲಾ ಸಿಬ್ಬಂದಿಗಳು ಭಾಗವಹಿಸಿದ್ದರು. ಪ್ರಾಂಶುಪಾಲಕರ ಸಹಯೋಗದೊಂದಿಗೆ ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು. ಅದೇ ರೀತಿ ಧಾರವಾಡ ನಗರ ವಿಭಾಗದ ವ್ಯಾಪ್ತಿಯಲ್ಲಿ ಬರುವ ಪ್ರಾಥಮಿಕ ಶಾಲೆ, ತಡಸಿನಕೊಪ್ಪ ಮತ್ತು ಸತ್ತೂರ ಗ್ರಾಮದಲ್ಲಿ ಇದೇ ರೀತಿ ಕಾರ್ಯಕ್ರಮವನ್ನು ನಡೆಸಲಾಯಿತು.

RELATED ARTICLES
- Advertisment -
Google search engine

Most Popular