ಮಂಡ್ಯ: ಜಿಲ್ಲೆಯ ನಗರ ಸ್ಥಳೀಯ ಸಂಸ್ಥೆಗಳು ತಮ್ಮ ವ್ಯಾಪ್ತಿಯಲ್ಲಿ ಬರುವ ಮನೆಗಳಿಂದ ಕಸ ಸಂಗ್ರಹ ಮಾಡಿ, ಸಂಗ್ರಹಿಸಿದ ಕಸವನ್ನು ಒಣಕಸ ಮತ್ತು ಹಸಿ ಕಸ ಎಂದು ಬೇರ್ಪಡಿಸಿ ವೈಜ್ಞಾನಿಕ ರೀತಿಯಲ್ಲಿ ಕಸ ವಿಲೇವಾರಿ ಮಾಡಬೇಕು ಎಂದು ಜಿಲ್ಲಾಧಿಕಾರಿ ಡಾ: ಕುಮಾರ ಅವರು ತಿಳಿಸಿದರು. ಅವರು ಇಂದು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಗರ ಸ್ಥಳೀಯ ಸಂಸ್ಥೆಗಳ ಪ್ರಗತಿ ಪರಿಶೀಲನೆ ನಡೆಸಿ ಮಾತನಾಡಿದರು.ಸ್ವಚ್ಛ ಭಾರತ್ ಮಿಷನ್ ಯೋಜನೆಯಡಿ ಬಿಡುಗಡೆಯಾದ ಅನುದಾನವನ್ನು ಸರಿಯಾದ ಬಳಕೆ ಆಗಬೇಕು. ಈ ಹಿಂದೆ ಸಂಗ್ರಹವಾಗಿರುವ ಘನ ತ್ಯಾಜ್ಯ ವಸ್ತುಗಳನ್ನು ಸಹ ವೈಜ್ಞಾನಿಕ ವಿಲೇವಾರಿಗೆ ಕ್ರಮ ಕೈಗೊಳ್ಳಬೇಕು ಎಂದರು.
ಸ್ವಚ್ಛ ಭಾರತ ಮಿಷನ್ ಯೋಜನೆಯಡಿ ೧೮೯ ಕಾಮಗಾರಿಗಳನ್ನು ೪೪.೪೬ ಕೋಟಿ ರೂ ವೆಚ್ಚದಲ್ಲಿ ಕೈಗೊಳ್ಳಲಾಗುತ್ತಿದ್ದು,೨೬ ಕೋಟಿ ರೂ ವೆಚ್ಚ ಮಾಡಿ ೧೫೮ ಕಾಮಗಾರಿ ಪೂರ್ಣಗೊಳಿಸಲಾಗಿದೆ. ಜಿಲ್ಲೆಯಲ್ಲಿ ೧೭ ಕೋಟಿ ಮೊತ್ತದಲ್ಲಿ ಸಾಕಷ್ಟ್ಟು ಕಾಮಗಾರಿಗಳು ಪ್ರಗತಿ ಹಂತದಲ್ಲಿದೆ ಎಂದರು. ಇತ್ತೀಚಿನ ಉಚ್ಚ ನ್ಯಾಯಾಲಯದ ಆದೇಶದ ಪ್ರಕಾರ ಮಳವಳ್ಳಿ, ಮಂಡ್ಯ ಹಾಗೂ ಬೆಳ್ಳೂರು ೩ ಕಡೆ ಜನರ ಮನಸ್ಸಿನಲ್ಲಿ ಸ್ವಚ್ಛತೆಗೆ ಆದ್ಯತೆ ನೀಡಲಾಗಿದೆ ಎಂಬ ಮನೋಭಾವ ಮೂಡುವ ರೀತಿ ಸಾರ್ವಜನಿಕ ಶೌಚಾಲಯ ನಿರ್ಮಾಣ ಕಾಮಗಾರಿ ತೆಗೆದುಕೊಳ್ಳಲಾಗಿದೆ. ನಗರ ಸಭೆ ಹಾಗೂ ಪುರಸಭೆ ವ್ಯಾಪ್ತಿಯೊಳಗೆ ಬರುವ ಸಾರ್ವಜನಿಕ ಶೌಚಾಲಯಗಳನ್ನು ಉತ್ತಮವಾಗಿ ನಿರ್ವಹಣೆ ಮಾಡಬೇಕು ಎಂದು ತಿಳಿಸಿದರು.
ವಿವಿಧ ಅನುದಾನದಡಿ ಕೈಗೊಂಡಿರುವ ರಸ್ತೆ, ಚರಂಡಿ ಕಾಮಗಾರಿಗಳನ್ನು ನಿಗದಿತ ಅವಧಿಯಲ್ಲಿ ಸಂಪೂರ್ಣ ಮಾಡುವುದಕ್ಕೆ ಸೂಚನೆ ನೀಡಿದರು. ನಗರ ಸಭೆಗೆ ಮೂಲ ಆದಾಯವಾದ ಆಸ್ತಿ ತೆರಿಗೆಯ ಸಂಗ್ರಹಣೆನ್ನು ಮಾರ್ಚ್ ಅಂತ್ಯದ ಒಳಗೆ ಸಂಪೂರ್ಣ ಗೊಳಿಸಬೇಕು. ಫೆಬ್ರವರಿ ೧೦ನೇ ತಾರೀಕಿನೊಳಗೆ ಶೇಕಡಾ ೮೫ ರಷ್ಟು ಹಾಗೂ ಮಾರ್ಚ್ ಅಂತ್ಯದೊಳಗೆ ಶೇಕಡ ೧೦೦ರಷ್ಟ್ಟು ಸಂಪೂರ್ಣ ಕೆಲಸವಾಗಬೇಕು ಎಂದರು. ಬಾಕಿ ಇರುವ ನೀರಿನ ಶುಲ್ಕ, ಅಂಗಡಿ ಮಳಿಗೆ ಬಾಡಿಗೆ ಶುಲ್ಕ ಹಾಗೂ ಟ್ರೇಡ್ ಲೈಸೆನ್ಸ್ ನ ಪರವಾನಗಿ ನವೀಕರಣ ಶುಲ್ಕದ ವಸೂಲಾತಿಗಳ ಕೆಲಸವಾಗಬೇಕು ಎಂದರು.
ಪೌರಕಾರ್ಮಿಕರಿಗೆ ಗೃಹ ಯೋಜನೆ ಜಿಲ್ಲೆಯಲ್ಲಿ ಜಾರಿಗೊಳಿಸಲಾಗಿದ್ದು, ಜಿಲ್ಲೆಯಲ್ಲಿ ಇದುವರೆಗೂ ಸುಮಾರು ೧೫೫ ಪೌರಕಾರ್ಮಿಕರು ಫಲಾನುಭವಿಯಾಗಿದ್ದಾರೆ. ಬೆಳ್ಳೂರಿನಲ್ಲಿ ೭ ಬಾಕಿ ಇದ್ದು, ಪೂರ್ಣಗೊಳಿಸುವಂತೆ ತಿಳಿಸಿದರು.
ವಾಜಪೇಯಿ ನಗರ ವಸತಿ ಯೋಜನೆ, ಅಂಬೇಡ್ಕರ್ ವಸತಿ ಯೋಜನೆಯಡಿ ನಿರ್ಮಾಣ ಹಂತದಲ್ಲಿ ಬಾಕಿ ಇರುವಂತಹ ಮನೆಗಳನ್ನು ಒಂದು ತಿಂಗಳೊಳಗೆ ಪೂರ್ಣಗೊಳಿಸಬೇಕು. ನಗರ ನಿವೇಶನ ಯೋಜನೆಯಡಿ ಲಭ್ಯವಿರುವ ಜಮೀನಿನ ವಿವರ ಪಡೆದುಕೊಂಡರು. ಮುಂದಿನ ತಿಂಗಳು ನಗರ ಸ್ಥಳೀಯ ಸಂಸ್ಥೆಗಳಿಗೆ ಸಂಬಂಧಿಸಿದಂತೆ ಸಭೆ ಕರೆಯಲಾಗುವುದು ನಿಗದಿಪಡಿಸಿರುವಂತೆ ಗುರಿ ಸಾಧನೆಯಾಗಬೇಕು ಎಂದರು.
ಬೇಸಿಗೆಯಲ್ಲಿ ಉಂಟಾಗುವ ಕುಡಿಯುವ ನೀರಿನ ಸಮಸ್ಯೆ ನಿವಾರಣೆಗಾಗಿ ನಗರ ಸಂಸ್ಥೆಗಳಿಗೆ ಬಿಡುಗಡೆಯಾಗಿರುವ ೧೨ ಲಕ್ಷ ರೂ ಅನುದಾನವನ್ನು ಪೈಪ್ ಲೈನ್ ಅಳವಡಿಸಲು ಹಾಗೂ ಬೋರ್ವೆಲ್ ತೆಗೆಸುವಂತವ ಇನ್ನಿತರ ಸದುಪಯೋಗ ಎಂದರು.
ಸಭೆಯಲ್ಲಿ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕಿ ತುಷರಾಮಣಿ ಸೇರಿದಂತೆ ಇನ್ನಿತರೆ ಅಧಿಕಾರಿಗಳು ಉಪಸ್ಥಿತರಿದ್ದರು.