Sunday, April 20, 2025
Google search engine

Homeರಾಜ್ಯನಾಮಫಲಕಗಳಲ್ಲಿ ಬೆಳಗಾವಿ ಎಂದು ನಮೂದಿಸಲು ಪಾಲಿಕೆ ಆಯುಕ್ತರಿಂದ ನೋಟಿಸ್ ಜಾರಿ

ನಾಮಫಲಕಗಳಲ್ಲಿ ಬೆಳಗಾವಿ ಎಂದು ನಮೂದಿಸಲು ಪಾಲಿಕೆ ಆಯುಕ್ತರಿಂದ ನೋಟಿಸ್ ಜಾರಿ

ಬೆಳಗಾವಿ: ಮಹಾನಗರದ ಎಲ್ಲ ಅಂಗಡಿ/ಮುಗ್ಗಟ್ಟುಗಳ ನಾಮಫಲಕಗಳಲ್ಲಿ ಶೇ60 ರಷ್ಟು ಕನ್ನಡವನ್ನು ಕಡ್ಡಾಯವಾಗಿ ಬಳಸಬೇಕು. ಜೊತೆಗೆ ವಿಳಾಸದಲ್ಲಿ ಬೆಳಗಾವಿ  ಅಂತ ನಮೂದಿಸುವಂತೆ ಮಹಾನಗರ ಪಾಲಿಕೆ  ಆಯುಕ್ತ ಅಶೋಕ ದುಡಗುಂಟಿ ಎರಡು ಸಾವಿರ ಅಂಗಡಿಗಳಿಗೆ ನೋಟಿಸ್ ನೀಡಿದ್ದಾರೆ.

ನಗರದ ಕೆಲವು ಅಂಗಡಿ ಮಾಲಿಕರು ಬೆಳಗಾವಿ ಬದಲು ಬೆಳಗಾಂವ, ಬೆಳಗಾಂ ಅಂತ ನಾಮಫಲಕಗಳಲ್ಲಿ ಬರೆಸಿದ್ದಾರೆ. ಈ ಹಿನ್ನೆಲೆಯಲ್ಲಿ ಆಯಕ್ತರು ನೋಟಿಸ್​ ಜಾರಿ ಮಾಡಿದ್ದಾರೆ.

ನಾಮಫಲಕಗಳನ್ನು ಶೇಕಡಾ 60 ರಷ್ಟು ಬಳಸಬೇಕೆಂದು ಸರ್ಕಾರ ಹೇಳಿದ ಬೆನ್ನಲ್ಲೇ ಆಯಕ್ತರು ಬೆಳ್ಳಂಬೆಳಿಗ್ಗೆ ನಗರ ಸಂಚಾರ ಕೈಗೊಂಡರು. ಈ ವೇಳೆ ನಗರದ ಹಲವು ಅಂಗಡಿಗಳಲ್ಲಿ ಕನ್ನಡ ಬಳಕೆ ತೀರ ವಿರಳವಾಗಿತ್ತು. ಮತ್ತು ವಿಳಾಸದ ಸ್ಥಳದಲ್ಲಿ ಬೆಳಗಾಂವ, ಬೆಳಗಾಮ್​ ಎಂದು ಬರೆಸಲಾಗಿತ್ತು. ಇದನ್ನು ಮನಗಂಡ ಆಯುಕ್ತರು ಈ ಆದೇಶ ಹೊರಡಿಸಿದ್ದಾರೆ.

ಆದೇಶ ಪ್ರತ್ರದಲ್ಲೇನಿದೆ?

ರಾಜ್ಯ ಸರ್ಕಾರ ನಗರಪಾಲಿಕೆ/ಜಿಲ್ಲೆಯಾದ್ಯಂತ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಅಂಗಡಿ/ಮುಂಗಟ್ಟುಗಳು/ವಾಣಿಜ್ಯ ಸಂಕಿರ್ಣಗಳ ನಾಮಫಲಕಗಳಲ್ಲಿ ಶೇ.60 ರಷ್ಟು ಭಾಗವನ್ನು ಕನ್ನಡವನ್ನು ಬಳಸತಕ್ಕದ್ದು ಎಂದು ನಿರ್ದೇಶಿಸಿದೆ. ಜೊತೆಗೆ ವಿಳಾಸದಲ್ಲಿ “ಬೆಳಗಾವಿ” ಎಂದು ನಮೂದಿಸಬೇಕಾಗಿರುತ್ತದೆ. ಆದರೆ ಪಾಲಿಕೆ ವ್ಯಾಪ್ತಿಯಲ್ಲಿ ಹಲವು ಉದ್ದಿಮೆದಾರರು ತಮ್ಮ ಉದ್ದಿಮೆಯ ನಾಮಫಲಕದಲ್ಲಿ ಬೆಳಗಾಂವ ಅಥವಾ ಬೆಳಗಾಮ್ ಎಂದು ನಮೂದಿಸಿದ್ದು ಹಾಗೂ ಶೇ.50 ರಷ್ಟು ಭಾಗವನ್ನು ಕನ್ನಡ ಭಾಷೆಗೆ ಪ್ರಥಮಾಧ್ಯತೆ ನೀಡದೇ ನಾಮಫಲಕವನ್ನು ಉಪಯೋಸುತ್ತಿದ್ದು ಕಂಡುಬಂದಿದೆ.

ಇಂತಹ ಉದ್ದಿಮೆದಾರರಿಗೆ ನೀಡಿದ ಪರವಾನಿಗೆಯನ್ನು ರದ್ದುಗೊಳಿಸಿ ಅಂಗಡಿಯನ್ನು ಬಂದ್​ ಅಥವಾ ಸೀಲ್ ಮಾಡಲಾಗುವುದು ಎಂದು ಆದೇಶ ಹೊರಡಿಸಿದ್ದಾರೆ.

RELATED ARTICLES
- Advertisment -
Google search engine

Most Popular