ವರದಿ: ವಿನಯ್ ದೊಡ್ಡಕೊಪ್ಪಲು
ಕೆ.ಆರ್.ನಗರ: ಗ್ರಾಮೀಣ ಪ್ರದೇಶದ ವರ್ಷದ ಪ್ರಥಮ ಹಬ್ಬ ಸಂಕ್ರಾಂತಿ ಮಕ್ಕಳಿಗೆ ವಿಶೇಷವಾಗಿದ್ದು, ಭಾರತ ಹಲವಾರು ಧರ್ಮದವರು ನೆಲೆಸಿದ್ದು ಅವರವರ ಹಬ್ಬ ಹರಿದಿನಗಳು ಆಚರಿಸಿಕೊಂಡು ಬರುತ್ತಿದ್ದಾರೆ ಎಂದು ಎಂದು ಲಯನ್ಸ್ ಅನುದಾನಿತ ಶಾಲೆಯ ಮುಖ್ಯ ಶಿಕ್ಷಕ ಟಿ.ಪಿ.ನಂದೀಶ್ ಕುಮಾರ್ ಹೇಳಿದರು.
ಪಟ್ಟಣದ ಹುಣಸೂರು ರಸ್ತೆಯಲ್ಲಿರುವ ಲಯನ್ಸ್ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸಂಕ್ರಾಂತಿ ಸುಗ್ಗಿ ಸಮಾರಂಭ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಇಂದಿನ ದಿನಗಳಲ್ಲಿ ಗ್ರಾಮೀಣ ಭಾಗದ ಹಬ್ಬಗಳ ಆಚರಣೆಯಲ್ಲಿ ಒಂದು ರೀತಿಯ ಉತ್ಸಾಹ ಮತ್ತು ಮಕ್ಕಳಲಿರುವ ಪ್ರತಿಭೆಯನ್ನು ತೋರಿಸಲು ಇಂಥಹ ಕಾರ್ಯಕ್ರಮವನ್ನು ಆಯೋಜಿಸುವ ಮೂಲಕ ಪ್ರೋತ್ಸಾಹಿಸ ಬೇಕು ಎಂದರು.

ಈ ಒಂದು ಸುಗ್ಗಿ ಸಂಭ್ರಮದಲ್ಲಿ ಶಾಲಾ ಅವರಣದಲ್ಲಿ ರೈತ ಬೆಳೆದ ಭತ್ತ ಮತ್ತು ರಾಗಿಯ ರಾಶಿಯನ್ನು ಅಲಂಕರಿಸಿ ವಿಶಿಷ್ಟ ರೀತಿಯಲ್ಲಿ ಶಾಲಾ ಮಕ್ಕಳು ಹಾಗೂ ಶಿಕ್ಷಕರ ವೃಂದ ಒಳಗೊಂಡು ಪೂಜೆಯನ್ನು ನೇರವೇರಿಸಿದ ನಂತರ ಮಕ್ಕಳು ವಿವಿಧ ಗೀತೆಗಳಿಗೆ ನೃತ್ಯ ಮಾಡಿದ್ದು ವಿಶೇಷವಾಗಿತ್ತು ಹಾಗೂ ಸಂಕ್ರಾಂತಿ ಹಬ್ಬಕ್ಕೆ ಮೆರಗು ತಂದರು..
ಇಂದಿನ ಆಧುನೀಕ ಯುಗದಲ್ಲಿ ಮಕ್ಕಳಿಗೆ ಪೋಷಕರು ಕೇವಲ ಓದಿಗಷ್ಟೆ ಪ್ರಾಮುಖ್ಯತೆ ನೀಡುತ್ತಿದ್ದು ನಮ್ಮ ದೇಶದ ಗ್ರಾಮೀಣ ಸಂಸ್ಕೃತಿಯನ್ನು ಬಿಂಬಿಸುವಂತಹ ಮತ್ತು ಹಬ್ಬಗಳ ಆಚರಣೆಗಳ ಮಹತ್ವವನ್ನು ತೋರ್ಪಡಿಸುವ ಮೂಲಕ ಮಕ್ಕಳಲ್ಲಿ ಹಬ್ಬಗಳ ಪರಿಚಯವಾಗುತ್ತದೆ ಎಂದರು.
ಈ ಕಾರ್ಯಕ್ರಮದಲ್ಲಿ ಲಯನ್ಸ್ ಅನುದಾನಿತ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಟಿ.ಪಿ.ನಂದೀಶ್ ಕುಮಾರ್, ಲಯನ್ಸ್ ಪ್ರೌಡಶಾಲಾ ಮುಖ್ಯ ಶಿಕ್ಷಕರುಗಳಾದ ಎಲ್.ಎಸ್.ಲೋಕೇಶ್, ಜಿ.ರಮೇಶ್, ಸಹ ಶಿಕ್ಷಕರಾದ ಹೆಚ್.ಎನ್.ದಿವಾಕರ್, ಗಂಗಾಧರ್, ಸುಜಾತ, ಮೇಘನ, ನಳಿನಿ, ನಂದಿನಿ, ಆಶಾ, ಸತ್ಯವತಿ, ದೈಹಿಕ ಶಿಕ್ಷಕಿ ಪಾರ್ವತಿ, ಗಾಯಿತ್ರಿ, ಎಸ್.ಯೋಗನಂದ್, ಅನಿಲ್ ಕುಮಾರ್, ಹರೀಶ್, ಕೆ.ಆರ್.ವಿನುತಾ, ಬಿಬಿ ಜಾನ್, ಆಶ್ವಿನಿ, ರುಕ್ಮೀಣಿ, ಪುಷ್ಪವತಿ, ಸವಿತ, ಸೌಮ್ಯ ಸೇರಿದಂತೆ ಸಿಬ್ಬಂದಿಗಳು ಹಾಗೂ ವಿಧ್ಯಾರ್ಥಿಗಳ ಪೋಷಕರು ಹಾಜರಿದ್ದರು.