ಕೆ.ಆರ್.ನಗರ : ಅಧಿಕಾರ ಶಾಶ್ವತವಲ್ಲ ತಮ್ಮ ಅವಧಿಯಲ್ಲಿ ಶಾಶ್ವತವಾಗಿ ನೆನಪಿನಲ್ಲಿಡುವಂತ ಕಾರ್ಯಕ್ರಮಗಳನ್ನು ಮಾಡುವ ಮೂಲಕ ಅಧಿಕಾರ ನೀಡಿದವರ ಋಣವನ್ನು ತೀರಿಸಿ ಎಂದು ವಸ್ತು ಪ್ರದರ್ಶನದ ಪ್ರಾಧಿಕಾರದ ಮಾಜಿ ಅಧ್ಯಕ್ಷ ಮಿರ್ಲೆ ಶ್ರೀನಿವಾಸ ಗೌಡ ಸಲಹೆ ನೀಡಿದರು.
ಕೆ .ಆರ್.ನಗರ ಪಟ್ಟಣದ ಒಕ್ಕಲಿಗ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ವತಿಯಿಂದ ನೂತನವಾಗಿ ಅಧ್ಯಕ್ಷರಾಗಿ ಆಯ್ಕೆಯಾದ ಒಕ್ಕಲಿಗ ನೌಕರರ ಸ್ನೇಹ ಬಳಗದ ಅಧ್ಯಕ್ಷ ಶಂಕರೇಗೌಡ ಮತ್ತು ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ದೊಡ್ಡ ಕೊಪ್ಪಲು ವಿನಯ್ ರವರಿಗೆ ಅಭಿನಂದಿಸಿ ಮಾತನಾಡಿದ ಅವರು ಜವಾಬ್ದಾರಿ ಹೆಚ್ಚಿದೆ ಸಮಾಜ ಮೆಚ್ಚುವಂತ ಕೆಲಸವನ್ನು ಮಾಡುವಂತೆ ತಿಳಿ ಹೇಳಿದರು.
ಅಧಿಕಾರ ಇರಲಿ ಇಲ್ಲದಿರಲಿ ಸಮಾಜದ ಬಂಧುಗಳು ಕಷ್ಟದಲ್ಲಿದ್ದಾಗ ಅವರ ನೆರವಿಗೆ ಧಾವಿಸಿ ಸಹಾಯ ನೀಡುವ ಜೊತೆಗೆ ಸಲಹೆ ಸೂಚನೆಗಳನ್ನು ನೀಡುತ್ತಿರುವುದು ಹಾಗೂ ಅಧ್ಯಕ್ಷರಾಗಿರುವ ನೀವು ಎಲ್ಲರನ್ನೂ ಜೊತೆಯಾಗಿ ಕರೆದುಕೊಂಡು ಹೋಗುವ ಗುರುತರವಾದ ಜವಾಬ್ದಾರಿ ನಿಮ್ಮ ಮೇಲಿದ್ದು ಅದನ್ನು ಯಶಸ್ವಿಯಾಗಿ ನಿರ್ವಹಿಸುವಂತೆ ಸಲಹೆ ನೀಡಿದರು.
ಪತ್ರಕರ್ತ ಸಂಘದ ಅಧ್ಯಕ್ಷ ವಿನಯ್ ಅವರ ಬಗ್ಗೆ ಮಾತನಾಡಿ ಶಂಕರೇಗೌಡರು ಕೇವಲ ಸಮಾಜದ ಮತ್ತು ನೌಕರರ ಬಗ್ಗೆ ಸಂಘಟನೆ ಮತ್ತು ಹೋರಾಟ ಮಾಡುವ ಜವಾಬ್ದಾರಿ ಅವರಿಗಿದ್ದರೆ ಪತ್ರಕರ್ತರ ಸಂಘದ ಅಧ್ಯಕ್ಷರಿಗೆ ಹೆಚ್ಚಿನ ಜವಾಬ್ದಾರಿ ಇದ್ದು ಸಮಾಜದ ಜೊತೆಗೆ ಸಮಾಜವನ್ನು ತಿದ್ದುವ ಕೆಲಸವನ್ನು ಮಾಡುವ ನೀವು ರಾಜಕಾರಣಿಗಳು, ಅಧಿಕಾರಿಗಳು ಸಮಾಜ ದಾರಿ ತಪ್ಪಿದಾಗ ತಮ್ಮ ಹರಿತವಾದ ಲೇಖನದಿಂದ ಜನ ಮೆಚ್ಚುವ ಕೆಲಸವನ್ನು ಮಾಡಿ ಎಂದು ತಿಳಿಸಿದರು.
ನಿಮ್ಮಿಬ್ಬರ ಜೊತೆ ತಾಲೂಕು ಒಕ್ಕಲಿಗ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯು ಸದಾ ಇದ್ದು ನಿಮ್ಮ ಎಲ್ಲಾ ಕಾರ್ಯಕ್ರಮಗಳು ಮತ್ತು ಹೋರಾಟ ಹಾಗೂ ಸಂಘಟನೆಯಲ್ಲಿ ನಿಮ್ಮ ಜೊತೆಯಲ್ಲಿ ಇರುತ್ತದೆ ಅದನ್ನು ಯಾವಾಗ ಬೇಕಾದರೂ ಬಳಸಿಕೊಳ್ಳಬಹುದಾಗಿದೆ ಎಂದು ತಿಳಿಸಿದರು. ಕಾರ್ಯಕ್ರಮವನ್ನು ಉದ್ದೇಶಿಸಿ ಸರ್ಕಾರಿ ನೌಕರ ಸಂಘದ ಅಧ್ಯಕ್ಷ ಸಿ ಜೆ ಅರುಣ್ ಕುಮಾರ್ ಒಕ್ಕಲಿಗ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ, ಉಪಾಧ್ಯಕ್ಷ ವಡ್ಡರಕೊಪ್ಪಲು ಶಿವರಾಮು, ವಕೀಲ ಅಂಕನಹಳ್ಳಿ ತಿಮ್ಮಪ್ಪ ಉಪನ್ಯಾಸಕ ಮಿರ್ಲೆ ಧನಂಜಯ ಮಾತನಾಡಿದರು. ವೇದಿಕೆಯಲ್ಲಿ ಪದವೀಧರ ಸಹಕಾರ ಸಂಘದ ಮಾಜಿ ಕಾರ್ಯದರ್ಶಿ ರಾಧಾಕೃಷ್ಣ ,ಎಂ ಡಿ ಸಿ ಸಿ ಬ್ಯಾಂಕಿನ ಅಭಿವೃದ್ಧಿ ಅಧಿಕಾರಿಗಳಾದ ಪ್ರಕಾಶ್, ಸುಧೀರ್ ,ಬ್ಯಾಂಕಿನ ಸಿಬ್ಬಂದಿಗಳಾದ ಜೀವನ್, ಹೇಮಂತ್ ಸೇರಿದಂತೆ ಇನ್ನಿತರರು ಹಾಜರಿದ್ದರು.