Wednesday, April 23, 2025
Google search engine

Homeರಾಜ್ಯಪಿಎಂ ಆವಾಸ್ ಗ್ರಾಮೀಣ ಯೋಜನೆಯ ಒಂದು ಲಕ್ಷ ಫಲಾನುಭವಿಗಳಿಗೆ ಮೊದಲ ಕಂತಿನ ಹಣ ಬಿಡುಗಡೆ

ಪಿಎಂ ಆವಾಸ್ ಗ್ರಾಮೀಣ ಯೋಜನೆಯ ಒಂದು ಲಕ್ಷ ಫಲಾನುಭವಿಗಳಿಗೆ ಮೊದಲ ಕಂತಿನ ಹಣ ಬಿಡುಗಡೆ

ನವದೆಹಲಿ: ಸಂಕ್ರಾಂತಿ ಹಬ್ಬದ ದಿನದಂದು ವಿಡಿಯೋ ಕಾನ್ಫೆರೆನ್ಸ್ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರು ಪಿಎಂ ಆವಾಸ್ ಗ್ರಾಮೀಣ ಯೋಜನೆಯ (PMAY- G) ಒಂದು ಲಕ್ಷ ಫಲಾನುಭವಿಗಳಿಗೆ ಮೊದಲ ಕಂತಿನ ಹಣ ಬಿಡುಗಡೆ ಮಾಡಿದ್ದಾರೆ.

ಈ ಸಂದರ್ಭದಲ್ಲಿ ಪ್ರಧಾನಿಗಳು ಪಿಎಂ ಜನಮಾನ್ ಯೋಜನೆಯ ಫಲಾನುಭವಿಗಳೊಂದಿಗೆ ಸಂವಾದ ನಡೆಸಿದರು.

ಏನಿದು ಪಿಎಂ ಜನಮಾನ್ ಯೋಜನೆ?

ಪ್ರಧಾನ ಮಂತ್ರಿ ಜನಜಾತಿ ಆದಿವಾಸಿ ನ್ಯಾಯ ಮಹಾ ಅಭಿಯಾನ್ ಯೋಜನೆ (PM JANMAN – Pradhan Mantri Janjati Adivasi Nyaya Maha Abhiyan) ಇದು. ಬಹಳ ದುರ್ಬಲ ಸ್ಥಿತಿಯಲ್ಲಿರುವ ಬುಡಕಟ್ಟು ಜನರ ಶ್ರೇಯೋಭಿವೃದ್ಧಿಗೆ ರೂಪಿಸಿದ ಸ್ಕೀಮ್ ಇದು. ಎರಡು ತಿಂಗಳ ಹಿಂದೆ 2023ರ ನವೆಂಬರ್ 15ರಂದು ಬುಡಕಟ್ಟು ಆತ್ಮಾಭಿಮಾನ ದಿನದಂದು (ಟ್ರೈಬಲ್ ಪ್ರೈಡ್ ಡೇ) ಪಿಎಂ ಜನಮಾನ್ ಯೋಜನೆಯನ್ನು ಆರಂಭಿಸಲಾಗಿತ್ತು. 24,000 ಕೋಟಿ ರೂನಷ್ಟು ಆರಂಭಿಕ ಬಜೆಟ್ ಅನ್ನು ಈ ಸ್ಕೀಮ್ ​ಗಾಗಿ ತೆಗೆದಿರಿಸಲಾಗಿದೆ.

ಬುಡಕಟ್ಟು ಸಮುದಾಯದವರ ಸಾಮಾಜಿಕ ಮತ್ತು ಆರ್ಥಿಕ ಪರಿಸ್ಥಿತಿಯನ್ನು ಸುಧಾರಿಸಲು ಈ ಸ್ಕೀಮ್ ರೂಪಿಸಲಾಗಿದೆ. ಬಹಳ ಸೂಕ್ಷ್ಮ ಅಥವಾ ಅಸಹಾಯಕ ಪರಿಸ್ಥಿತಿಯಲ್ಲಿರುವ ಬುಡಕಟ್ಟು ಸಮುದಾಯಗಳನ್ನು ಗುರುತಿಸಿ ಅವರನ್ನು ಮಾತ್ರ ಈ ಸ್ಕೀಮ್​​ ನಲ್ಲಿ ಒಳಗೊಳ್ಳಲಾಗಿದೆ. ವಸತಿ, ಕುಡಿಯುವ ನೀರು, ಶೌಚ, ಶಿಕ್ಷಣ, ಆರೋಗ್ಯ, ಪೌಷ್ಟಿಕಾಂಶ ಲಭ್ಯತೆ, ವಿದ್ಯುತ್, ರಸ್ತೆ, ಟೆಲಿಕಾಂ ಇತ್ಯಾದಿ ಮೂಲಭೂತ ಸೌಕರ್ಯಗಳನ್ನು ಒದಗಿಸುವ ಗುರಿ ಇದೆ.

2011ರ ಸೆನ್ಸಸ್ ಪ್ರಕಾರ ಭಾರತದಲ್ಲಿ ಪರಿಶಿಷ್ಟ ಪಂಗಡದ (ಎಸ್​ ಟಿ- ಶ್ಕೆಡ್ಯೂಲ್ಡ್ ಟ್ರೈಬ್) ಜನಸಂಖ್ಯೆ 10.45 ಕೋಟಿಯಷ್ಟಿದೆ. ಅಂಡಮಾನ್ ಮತ್ತು ನಿಕೋಬಾರ್ ದ್ವೀಪದ ಸಮುದಾಯಗಳೂ ಸೇರಿದಂತೆ 19 ರಾಜ್ಯ ಹಾಗು ಕೇಂದ್ರಾಡಳಿತ ಪ್ರದೇಶಗಳಲ್ಲಿರುವ 75 ಸಮುದಾಯಗಳನ್ನು ಪಿವಿಟಿಜಿ ಎಂದು ವರ್ಗೀಕರಿಸಲಾಗಿದೆ.

RELATED ARTICLES
- Advertisment -
Google search engine

Most Popular