Wednesday, April 23, 2025
Google search engine

Homeರಾಜಕೀಯಇಡೀ ಪ್ರಪಂಚದಲ್ಲೇ ಶ್ರೀರಾಮನ ಅಲೆ ಶುರುವಾಗಿದೆ: ಸಂಸದ ಜಿ.ಎಸ್.ಬಸವರಾಜ

ಇಡೀ ಪ್ರಪಂಚದಲ್ಲೇ ಶ್ರೀರಾಮನ ಅಲೆ ಶುರುವಾಗಿದೆ: ಸಂಸದ ಜಿ.ಎಸ್.ಬಸವರಾಜ

ತುಮಕೂರು: ಇಡೀ ಪ್ರಪಂಚದಲ್ಲೇ ಶ್ರೀರಾಮನ ಅಲೆ ಶುರುವಾಗಿದೆ.  ಭಾರತಿಯರೆಲ್ಲರೂ ಆ ಕ್ಷಣಕ್ಕಾಗಿ ಕಾಯುತ್ತಿದ್ದಾರೆ. ಮೋದಿ ಪುಣ್ಯಾತ್ಮ ಬಂದಿದ್ದಾರೆ. ರಾಮಮಂದಿರ ಮಾಡ್ತಾ ಇದ್ದಾನೆ ಎಂದು ಪಕ್ಷಬೇಧ ಮರೆತು ಜನ ಧನ್ಯವಾದ ಹೇಳುತ್ತಿದ್ದಾರೆ ಸಂಸದ ಜಿ.ಎಸ್.ಬಸವರಾಜ ತಿಳಿಸಿದರು.

ಕಾಂಗ್ರೆಸ್ ನವರು ಕಾರ್ಯಕ್ರಮದಿಂದ ದೂರ ಉಳಿದಿರಬಹುದು. ಆದರೆ ಉತ್ತರ ಪ್ರದೇಶದ ಎಲ್ಲಾ ಕಾಂಗ್ರೆಸ್ ನವರು ಸರಯೂ ನದಿಯಲ್ಲಿ ಸ್ನಾನ ಮಾಡಿ ಶ್ರೀರಾನ ದರ್ಶನ ಪಡೆದಿದ್ದಾರೆ. ನಾವೆಲ್ಲ ರಾಮನ ಭಕ್ತರು ಎಂದಿದ್ದಾರೆ.  ಈ ಉದಾಹರಣೆ ಸಾಕು. ಕಾಂಗ್ರೆಸ್ ನವರು ರಾಜಕೀಯಕ್ಕಾಗಿ ರಾಮನನ್ನು ವಿರೋಧಿಸುತ್ತಿದೆ ಅನ್ನೋದಕ್ಕೆ. ಬಿ.ಕೆ.ಹರಿಪ್ರಸಾದ್ ವೈಯಕ್ತಿಕ ದ್ವೇಷಕ್ಕಾಗಿ ರಾಮ ಮಂದಿರ ಕಾರ್ಯಕ್ರಮ ವಿರೋಧಿಸುತ್ತಾರೆ. ಸಿಎಂ ಸಿದ್ದರಾಮಯ್ಯ ರಾಜಕೀಯಕ್ಕಾಗಿ ವಿರೋಧಿಸುತ್ತಾರೆ ಎಂದರು.

ಶ್ರೀ ರಾಮನ ನಡವಳಿಕೆಗಳು ನರೇಂದ್ರ ಮೋದಿ ಯಲ್ಲಿ ಕಾಣುತ್ತೇವೆ. ಕಳೆದ 10 ವರ್ಷದಿಂದ ಸಂಸದನಾಗಿ ನಾನು ಮೋದಿಯನ್ನು ಹತ್ತಿರದಿಂದ ನೋಡಿದ್ದೇನೆ. ಅವರಿಗೆ ಬಂದ ಗಿಫ್ಟ್ ಗಳನ್ನೂ ಹರಾಜು ಕೂಗಿ ಅದರಿಂದ ಬಂದ ಹಣ ಸರ್ಕಾರದ ಬೊಕ್ಕಸಕ್ಕೆ ಕೊಡ್ತಾರೆ. ಯಾವುದೇ ಭ್ರಷ್ಟಾಚಾರ ಇಲ್ಲದೇ ಆಡಳಿತ ಮಾಡುತ್ತಾರೆ ಎಂದು ಹೇಳಿದರು.

RELATED ARTICLES
- Advertisment -
Google search engine

Most Popular