ಎಡತೊರೆ ಮಹೇಶ್
ಹೆಚ್.ಡಿ.ಕೋಟೆ: ಪ್ರಗತಿಪರ ಮುಖಂಡರುಗಳಿಂದ ಸೌಹಾರ್ದ ಸಂಕ್ರಾಂತಿ ಆಚರಿಸಿದರು.
ಸೌಹಾರ್ದ ಸಂಘಟನೆ ವತಿಯಿಂದ ಪಟ್ಟಣದ ಸಿದ್ದಪ್ಪಾಜಿ ರಸ್ತೆಯಲ್ಲಿರುವ ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆಯ ಮುಂದೆ ಎಲ್ಲಾ ಸಮುದಾಯದ ಮುಖಂಡರುಗಳು ಸೇರಿ ಸಿಹಿ ವಿತರಿಸುವ ಮೂಲಕ ಸಂಕ್ರಾಂತಿ ಹಬ್ಬವನ್ನ ಅರ್ಥಪೂರ್ಣವಾಗಿ ಆಚರಿಸಿದರು.
ಪ್ರಗತಿಪರ ಮುಖಂಡ ಅಕ್ಬರ್ ಪಾಷ ಮಾತನಾಡಿ, ಭಾರತ ಬಹುತ್ವದ ದೇಶ ಇಲ್ಲಿ ನಾನಾ ಧರ್ಮದ ನಾನಾ ಜಾತಿಯ ನಾನಾ ಭಾಷೆಯ ವೈವಿಧ್ಯಮಯ ಆಚರಣೆಗಳಿದ್ದು ಎಲ್ಲಾ ಸಮುದಾಯಗಳ ಜನರು ಪ್ರೀತಿ ಮಮತೆ ಯಿಂದ ಪ್ರತಿಯೊಬ್ಬರನ್ನೂ ಅವರವರ ಆಚಾರ ವಿಚಾರ ಗಳನ್ನು ಗೌರವಿಸುವ ವಾತಾವರಣ ನಿರ್ಮಾಣವಾಗಬೇಕು ಯಾವುದೇ ಒಂದು ಜಾತಿಗೆ ಒಂದು ಧರ್ಮಕ್ಕೆ ಸೀಮಿತವಾಗಿರಬಾರದು, ಎಲ್ಲಾ ಸಮುದಾಯದವರು ಒಂದಾದರೆ ಜಾತಿಯತೆ ತೊಲಗುತ್ತದೆ. ನಾನು ಶ್ರೇಷ್ಠ , ಕನಿಷ್ಠ ಎಂಬ ಮನೋರೋಗದಿಂದ ಹೊರಬರಬೇಕು ಎಂದು ಹೇಳಿದರು.
ಬಳಿಕ ಮಾತಾನಾಡಿದ ಸಿಪಿಎಮ್ ಶಿವಣ್ಣ, ಹಬ್ಬ ಹರಿದಿನ ಜಾತ್ರೆಗಳು ಎಲ್ಲಾ ಜಾತಿ ಸಮುದಾಯಗಳ ಜನರನ್ನ ಒಂದು ಕಡೆ ತರುವಂತ ಮತ್ತು ಒಟ್ಟಾಗಿ ಆಚರಿಸುವಂತ ಮನೋಭಾವ ನಮ್ಮಲ್ಲಿ ಬೆಳೆಯಬೇಕು ಎಂಬ ಉದ್ದೇಶದಿಂದ ಇಂದು ಎಲ್ಲಾ ಜಾತಿ ಜನಾಂಗದ ಪ್ರಮುಖರನ್ನ ಸೇರಿಸಿ ದೇಶಕ್ಕೆ ಸಂವಿಧಾನ ಕೊಟ್ಟ ಮಹಾನ್ ನಾಯಕ ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆ ಮುಂದೆ ಸಿಹಿ ಹಂಚುವ ಮೂಲಕ ಸೌಹಾರ್ದ ಸಂಕ್ರಾಂತಿ ಆಚರಿಸುತ್ತಿದ್ದೆವೆ ಎಂದರು.
ಕಾರ್ಯಕ್ರಮದಲ್ಲಿ ತಾ. ಪಂಚಾಯ್ತಿ ಮಾಜಿ ಅಧ್ಯಕ್ಷ ಇಬ್ರಾಹಿಂ. ಜೀವಿಕ ರಾಜ್ಯ ಸಂ ಸಂಚಾಲಕ ಉಮೇಶ್. ಬಿ.ನೂರಲಕುಪ್ಪೆ. ಲಾರಿ ಪ್ರಕಾಶ್. ಅಂಬೇಡ್ಕರ್ ಸೇನೆ ಅಧ್ಯಕ್ಷ ಮಹದೇವಸ್ವಾಮಿ. ಜಿಲ್ಲಾ ಸಂಚಾಲಕ ರವಿಕುಮಾರ್. ಏಜಾಷ್ ಪಾಷ. ಯಾಜಮಾನರಾದ ಸೋಮಣ್ಣ. ಪುರಸಭಾ ಮಾಜಿ ಸದಸ್ಯ ತಾಜ್. ಟಿಎಪಿಸಿಎಮ್ ನೂರ್ ಅಹಮದ್. ಕರಿಗೌಡ. ಸಜ್ಜಾದ್ ಹುಸೇನ್. ದಸಂಸ ಸಮ್ಮಿರ್. ಸಿದ್ದಪ್ಪಾಜಿನ ರಸ್ತೆಯ ಮುಖಂಡರುಗಳು ಭಾಗವಹಿಸಿದರು.