ಮೈಸೂರು: ಪೂಜ್ಯ ಹಾನಗಲ್ ಶ್ರೀ ಕುಮಾರಶಿವಯೋಗಿಗಳ ಜೀವನಚರಿತ್ರೆ ಆಧಾರಿತ `ವಿರಾಟಪುರ ವಿರಾಗಿ’ ಚಲನಚಿತ್ರವು ಬಿಡುಗಡೆಯಾಗಿ ಪ್ರದರ್ಶನಗೊಂಡಿದೆ. ಮಠಾಧಿಪತಿಗಳು, ಭಕ್ತಾದಿಗಳು ಹಾಗೂ ಸಾರ್ವಜನಿಕರಕೋರಿಕೆಯ ಮೇರೆಗೆ ನಾಳೆ ೧೭ ರಂದು ಸಂಜೆ ೪.೦೦ ಗಂಟೆಗೆ ಬನ್ನಿಮಂಟಪದಲ್ಲಿರುವ ಜೆಎಸ್‌ಎಸ್ ಫಾರ್‍ಮಸಿ ಕಾಲೇಜಿನ ಸಭಾಂಗಣದಲ್ಲಿ ಪ್ರದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಪೂಜ್ಯ ಸುತ್ತೂರು ಶ್ರೀಗಳು,ನಿಂಬಾಳದಮೌನತಪಸ್ವಿ ಜಡೆಯಶ್ರೀ ಶಾಂತಲಿಂಗಸ್ವಾಮಿಗಳು, ಮಠಾಧಿಪತಿಗಳು ಹಾಗೂ ಇತರರು ಭಾಗವಹಿಸುತ್ತಾರೆ.
ಭಕ್ತಾಧಿಗಳು, ಸಾರ್ವಜನಿಕರುಇದರ ಸದುಪಯೋಗಪಡಿಸಿಕೊಳ್ಳಬಹುದಾಗಿದೆ. ವೀಕ್ಷಿಸಲು ಆಸಕ್ತಿವುಳ್ಳವರು ಶ್ರೀ ರೇವಣಸಿದ್ಧ ಕುಂದೂರು, ಶ್ರೀಗಣೇಶ್ ಉತ್ತಂಬಳ್ಳಿ ಮತ್ತು ಶ್ರೀ ಎನ್. ಪರಶಿವಮೂರ್ತಿ ಇವರುಗಳನ್ನು ಕ್ರಮವಾಗಿ೯೧೦೮೫೦೬೯೨೫, ೮೭೨೨೨೦೬೯೨೧ ಮತ್ತು೯೭೪೦೧೨೯೮೪೬ ಮೊಬೈಲ್‌ಗಳಲ್ಲಿ ಸಂಪರ್ಕಿಸಿ ಹೆಸರು ನೋಂದಾಯಿಸಿಕೊಳ್ಳಬಹುದಾಗಿದೆ. ಮೊದಲಿಗೆ ಹೆಸರು ನೋಂದಾಯಿಸಿಕೊಳ್ಳುವವರಿಗೆ ಆದ್ಯತೆಯ ಮೇರೆಗೆ ಪ್ರವೇಶಕಲ್ಪಿಸಲಾಗುತ್ತದೆ.