ರಾಮನಗರ: ಅಪ್ರಾಪ್ತ ಮಕ್ಕಳು ಸಮಸ್ಯೆಗೆ ಒಳಗಾದ ಸಂದರ್ಭದಲ್ಲಿಗೌಪ್ಯತೆಯನ್ನುಕಾಪಾಡಿಕೊಂಡು ಸಮಸ್ಯೆಯನ್ನು ಬಗೆಹರಿಸುವ ನಿಟ್ಟಿನಲ್ಲಿಎಲ್ಲ ಪೋಷಕರು ಮತ್ತು ಅಧಿಕಾರಿಗಳು ಪಾತ್ರ ವಹಿಸಬೇಕು ಎಂದು ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ನ್ಯಾ.ಅನಿತಾಎನ್.ಪಿ ಅವರು ತಿಳಿಸಿದರು.
ಅವರು ಇಂದು ಮಕ್ಕಳನ್ನು ಅವರ ಬೆಂಗಳೂರಿನ ಮಕ್ಕಳ ರಕ್ಷಣಾ ನಿರ್ದೇಶನಾಲಯ, ಕರ್ನಾಟಕರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾಆಯೋಗ, ರಾಮನಗರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾಘಟಕದ ಸಹಯೋಗದೊಂದಿಗೆ ನಗರದಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ವಿವಿಧ ಇಲಾಖೆಗಳ ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳಿಗೆ ಆಯೋಜಿಸಲಾಗಿದ್ದಒಂದು ದಿನದಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.
ಇತ್ತೀಚಿನ ದಿನಗಳಲ್ಲಿ ಮಕ್ಕಳ ಹಕ್ಕುಗಳನ್ನು ಕಡೆಗಣಿಸಿ ಅವರನ್ನುದುಡಿಮೆಗೆದೂಡಿ, ಶಿಕ್ಷಣದಿಂದ ವಂಚಿತರಾಗುವಂತೆ ಹಾಗೂ ಬಾಲ್ಯ ವಿವಾಹ ಮಾಡುತ್ತಿರುವುದುಕಂಡುಬಂದಿರುತ್ತದೆ.ಮಕ್ಕಳ ಸಾಗಾಣಿಕೆ ಹಾಗೂ ಕಣ್ಮರೆಯಾದ ಮಕ್ಕಳನ್ನು ಗುರುತಿಸಿ ಅಧಿಕಾರಿಗಳು ಮಕ್ಕಳ ರಕ್ಷಣೆಯನ್ನು ಮಾಡಬೇಕಾಗಿರುತ್ತದೆಎಂದು ತಿಳಿಸಿದರು. ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ವತಿಯಿಂದ ಸೆಕ್ಷನ್ ೧೨ರ ಪ್ರಕಾರ ಪರಿಶಿಷ್ಟ ಜಾತಿ ಮತ್ತು ಪಂಗಡದವರು, ಮಹಿಳೆಯರು, ಮಕ್ಕಳು, ಹಿರಿಯ ನಾಗರೀಕರು ಹಾಗೂ ವಿಕಲಚೇತನರಿಗೆಉಚಿತ ಕಾನೂನು ಅರಿವು ನೆರವು ನೀಡಲಾಗುವುದುಎಂದರು.
ಉಪ ಪೊಲೀಸ್ ಅಧೀಕ್ಷಕ ದಿನಕರ್ ಶೆಟ್ಟಿಅವರು ಮಾತನಾಡಿ, ಪೊಲೀಸ್ ಇಲಾಖೆಯಲ್ಲಿ ಎಸ್‌ಜೆಪಿ ಯುಘಟಕ ಸ್ಥಾಪನೆಯಾಗಿದೆ.ಪ್ರತೀಠಾಣೆಯಲ್ಲಿಯೂ ಮಕ್ಕಳ ಹಕ್ಕುಗಳ ಬಗ್ಗೆ ನೋಡಿಕೊಳ್ಳುವಂತಹ ಉಸ್ತುವಾರಿಘಟಕವಿದ್ದು, ಇದರಲ್ಲಿ ಮಕ್ಕಳ ಕಲ್ಯಾಣಾಧಿಕಾರಿ, ಸಬ್‌ಇನ್ಸ್‌ಪೆಕ್ಟರ್, ಮಹಿಳಾ ಸಿಬ್ಬಂದಿ ಕಾರ್ಯನಿರ್ವಹಿಸುತ್ತಾರೆ.ಇವರನ್ನು ಮಕ್ಕಳ ಪ್ರಕರಣಗಳನ್ನು ವಿಶೇಷವಾಗಿ ನಿರ್ವಹಿಸಲು ಬಳಸಿಕೊಳ್ಳಲಾಗುತ್ತದೆ ಎಂದರು.
ಸಮಾಜದ ಕೆಲವೊಂದು ಸ್ಥಳಗಳಲ್ಲಿ ನಾವು ಹಿಂದುಳಿದಿದ್ದೇವೆ. ಇತ್ತೀಚಿನ ದಿನಗಳಲ್ಲಿ ಬಾಲ್ಯವಿವಾಹ ಹಾಗೂ ಮಕ್ಕಳ ಮೇಲಿನ ದೌರ್ಜನ್ಯ ಹೆಚ್ಚಾಗುತ್ತಿರುವ ಘಟನೆಗಳು ನಡೆಯುತ್ತಿದೆ.ಮಕ್ಕಳ ರಕ್ಷಣೆಯಲ್ಲಿ ಬಹಳಷ್ಟು ಕಾಳಜಿವಹಿಸಿ ಕೆಲಸ ಮಾಡಿದರೂ ಸಹ ಮಕ್ಕಳ ಹಕ್ಕುಗಳನ್ನು ರಕ್ಷಣೆ ಮಾಡಲು ಬಹಳ ದೊಡ್ಡಜವಾಬ್ದಾರಿಯಿದೆ.ಈ ನಿಟ್ಟಿನಲ್ಲಿಇದನ್ನು ನಾವು ಬಹಳ ಗಂಭೀರವಾಗಿ ಪರಿಗಣಿಸಬೇಕಾಗಿರುತ್ತದೆಎಂದು ತಿಳಿಸಿದರು.
ಕರ್ನಾಟಕರಾಜ್ಯ ಮಕ್ಕಳ ಹಕ್ಕುಗಳ ಆಯೋಗದ ಸದಸ್ಯರಾದಎಸ್. ಮಂಜು ಅವರು ಮಾತನಾಡಿ, ಮಕ್ಕಳ ಹಕ್ಕುಗಳ ಬಗ್ಗೆ ಎಲ್ಲಾಅಧಿಕಾರಿ ಹಾಗೂ ಸಿಬ್ಬಂದಿಗಳಿಗೆ ಈ ಕಾರ್ಯಗಾರಆಯೋಜಿಸಲಾಗಿದೆ.ಈ ಕಾರ್ಯಗಾರದಲ್ಲಿ ಪಡೆಯುವ ಮಾಹಿತಿಯನ್ನು ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ತಮ್ಮಇಲಾಖೆಯಲ್ಲಿ ಮತ್ತುತಮ್ಮಕಾರ್ಯ ವ್ಯಾಪ್ತಿಯಲ್ಲಿ ಅನುಷ್ಠಾನಗೊಳಿಸುವಂತೆ ತಿಳಿಸಿದರು.
ಕಾರ್ಯಗಾರದಲ್ಲಿನುರಿತ ಸಂಪನ್ಮೂಲ ವ್ಯಕ್ತಿಗಳಿಂದ ವಿಶೇಷ ಉಪನ್ಯಾಸಏರ್ಪಡಿಸಲಾಗಿತ್ತು.ಕಾರ್ಯಕ್ರಮದಲ್ಲಿಜಿಲ್ಲಾ ಪಂಚಾಯತ್‌ಯೋಜನಾ ನಿರ್ದೇಶಕರಾದ ಮಂಜುನಾಥಎಚ್.ಎನ್., ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕರಾದ ಪ್ರಸನ್ನಕುಮಾರ್‌ಟಿ.ಆರ್, ಶಿಕ್ಷಣ ಇಲಾಖೆಯಉಪನಿರ್ದೇಶಕರಾದ ಬಸವರಾಜೇಗೌಡ ವಿ.ಸಿ., ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ನಾಗವೇಣಿ ಸೇರಿದಂತೆಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.