Sunday, April 20, 2025
Google search engine

Homeರಾಜ್ಯಸುದ್ದಿಜಾಲಡಾ. ಬಿ.ಆರ್.ಅಂಬೇಡ್ಕರ್‌ ಅವರ ಕೊಡುಗೆ ಅಪಾರ: ಜಯರಾಮ್‌ಎ.ಜಿ

ಡಾ. ಬಿ.ಆರ್.ಅಂಬೇಡ್ಕರ್‌ ಅವರ ಕೊಡುಗೆ ಅಪಾರ: ಜಯರಾಮ್‌ಎ.ಜಿ

ರಾಮನಗರ: ಅಂಬೇಡ್ಕರ್‌ ಅವರ ಜೀವನವನ್ನು ವಿದ್ಯಾರ್ಥಿಗಳು ಮಾದರಿಯಾಗಿ ತೆಗೆದುಕೊಳ್ಳಬೇಕು ಎಂದು ತಗಚಗೆರೆ ಪ್ರೌಢಶಾಲೆಯ ಸಹ ಶಿಕ್ಷಕ ಜಯರಾಮ್‌ಎ.ಜಿ ಅವರು ತಿಳಿಸಿದರು. ಅವರುಇಂದುಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಚನ್ನಪಟ್ಟಣ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಂಯುಕ್ತಾಶ್ರಯದಲ್ಲಿ ಚನ್ನಪಟ್ಟಣ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಭಾರತರತ್ನಡಾ.ಬಿ.ಆರ್.ಅಂಬೇಡ್ಕರ್‌ ಓದು ಅಭಿಯಾನವನ್ನು ಉದ್ಘಾಟಿಸಿ ಮಾತನಾಡಿದರು.

ಅಂಬೇಡ್ಕರ್‌ ಅವರ ಬಾಲ್ಯಜೀವನ,ಅವರವಿದ್ಯಾಭ್ಯಾಸದ ಬದುಕು ಹಾಗೂ ಅವರ ಸಾಮಾಜಿಕ ಮತ್ತು ದೇಶಕ್ಕೆ ಕೊಟ್ಟಕೊಡುಗೆಕುರಿತುಅಂಬೇಡ್ಕರ್‌ಅವರನ್ನು ನಾವು ಎರಡುರೀತಿಯಲ್ಲಿಅರ್ಥ ಮಾಡಿಕೊಳ್ಳಬೇಕು.ಇದನ್ನು ನಾವು ಮಾದರಿಯಾಗಿ ತೆಗೆದುಕೊಳ್ಳಬೇಕು ಎಂದರು. ಡಾ. ಬಿ.ಆರ್.ಅಂಬೇಡ್ಕರ್‌ಅವರಿಗೆಬಂದ ಹಣದಿಂದಅವರು ಪುಸ್ತಕ ಖರೀದಿಸಲು ಮೀಸಲಿಡುತ್ತಿದ್ದರು.ಇದರಿಂದಅವರು ಮನೆಯನ್ನುಗ್ರಂಥಾಲಯ ಮಾಡಿಕೊಂಡಿದ್ದರು.ಅಂಬೇಡ್ಕರ್‌ಅವರು ಲಂಡನಿನಲ್ಲಿಅಧ್ಯಯನ ಮುಗಿಸಿ ಭಾರತಕ್ಕೆ ಬಂದ ಸಂದರ್ಭದಲ್ಲಿಅಸ್ಪೃಶ್ಯತೆ ಹಾಗೂ ಜಾತಿ ಪದ್ಧತಿ ಹೆಚ್ಚಾಗಿತ್ತು.ಆದ್ದರಿಂದಅಂಬೇಡ್ಕರ್‌ ಅವರು ಅಸ್ಪೃಶ್ಯತೆಯನ್ನು ಹೋಗಲಾಡಿಸುವುದೇದ್ಯೇಯವನ್ನಾಗಿಟ್ಟು ಕೊಂಡು ಹೋರಾಡಿದ ಮಹನೀಯರು ಬಾಬಾ ಸಾಹೇಬ್‌ ಡಾ.ಬಿ.ಆರ್. ಅಂಬೇಡ್ಕರ್‌ಅವರುಎಂದು ತಿಳಿಸಿದರು.

ಅಂಬೇಡ್ಕರ್‌ರವರು ಲಂಡನ್‌ದುಂಡು ಮೇಜಿನ ಸಭೆಯಲ್ಲಿದೇಶದ ಪ್ರತಿಯೊಬ್ಬರಿಗೂ ಮತದಾನದ ಹಕ್ಕು ನೀಡಬೇಕು, ಶಿಕ್ಷಣದ ಅವಕಾಶ, ಸರ್ಕಾರಿಉದ್ಯೋಗದಲ್ಲಿಎಲ್ಲಾರಿಗೂ ಸಮಾನ ಅವಕಾಶ ನೀಡಬೇಕು ಎಂಬ ಮೂರು ಬೇಡಿಕೆಯನ್ನು ಇಟ್ಟಿದ್ದರು.ಹೆಣ್ಣು ಮಕ್ಕಳಿಗೆ ಮೊಟ್ಟ ಮೊದಲ ಬಾರಿಗೆ ಮತದಾನದ ಹಕ್ಕನ್ನು ನೀಡಿದಕೀರ್ತಿ ಡಾ. ಬಿ.ಆರ್. ಅಂಬೇಡ್ಕರ್‌ ಅವರಿಗೆ ಸಲ್ಲುತ್ತದೆಎಂದರು. ಕಾರ್ಯಕ್ರಮದಲ್ಲಿಕನ್ನಡ ಮತ್ತು ಸಂಸ್ಕೃತಿಇಲಾಖೆಯ ಸಹಾಯಕ ನಿರ್ದೇಶಕರಾದರಮೇಶ್ ಬಾಬು, ಎಸ್ಸಿ/ಎಸ್ಟಿ ನೌಕರರ ಸಮನ್ವಯ ಸಮಿತಿಯ ಪ್ರಧಾನ ಕಾರ್ಯದರ್ಶಿ ಜೈಪ್ರಕಾಶ್‌ ಎಂ.ಎಸ್, ಚನ್ನಪಟ್ಟಣಸರ್ಕಾರಿ ಪ್ರಥಮದರ್ಜೆಕಾಲೇಜಿನಪ್ರಾಂಶುಪಾಲರಾದಡಾ. ವಿ. ವೆಂಕಟೇಶ್, ಅಂಬೇಡ್ಕರ್‌ಅಧ್ಯಯನಕೇಂದ್ರದ ಸಂಚಾಲಕರು ಹಾಗೂ ಸರ್ಕಾರಿ ಪ್ರಥಮದರ್ಜೆಕಾಲೇಜಿನ ಸಹಾಯಕಪ್ರಾಧ್ಯಾಪಕರಾದಜ್ಯೋತಿಡಿ.ಕೆ, ವಿದ್ಯಾರ್ಥಿಗಳು ಹಾಗೂ ಇತರರು ಉಪಸ್ಥಿತರಿದ್ದರು.

RELATED ARTICLES
- Advertisment -
Google search engine

Most Popular