Sunday, April 20, 2025
Google search engine

Homeರಾಜ್ಯಬ್ಯಾಕ್ ಲಾಗ್ ಭರ್ತಿ: ಸರ್ಕಾರದ ವರದಿ ಕೇಳಿದ ಹೈಕೋರ್ಟ್

ಬ್ಯಾಕ್ ಲಾಗ್ ಭರ್ತಿ: ಸರ್ಕಾರದ ವರದಿ ಕೇಳಿದ ಹೈಕೋರ್ಟ್

ಬೆಂಗಳೂರು : ಸರ್ಕಾರಿ ಇಲಾಖೆಗಳಲ್ಲಿ ಮತ್ತು ಸಂಸ್ಥೆಗಳಲ್ಲಿ ಬ್ಯಾಕ್‌ ಲ್ಯಾಗ್ ಹುದ್ದೆಗಳ ನೇಮಕಾತಿಯನ್ನು ಯುದ್ದೋಪಾದಿಯಲ್ಲಿ ನಡೆಸಿ, ಗರಿಷ್ಠ ಆರು ತಿಂಗಳಿನಲ್ಲಿ ಪೂರ್ಣಗೊಳಿಸಬೇಕು ಎಂದು ಈ ಹಿಂದೆಯೇ ಸರ್ಕಾರಕ್ಕೆ ಆದೇಶ ನೀಡಿದೆ, ಈ ಸಂಬಂಧ ವರದಿ ನೀಡುವಂತೆ ಮತ್ತೆ ಸರ್ಕಾರಕ್ಕೆ ಚಾಟಿ ಬೀಸಿದೆ.

ಧಾರವಾಡದ ಪರಿಶಿಷ್ಟ ಜಾತಿಯ ವಿದ್ಯಾರ್ಥಿಗಳಿಗಾಗಿ ನಿರ್ಮಿಸಿರುವ ಹಾಸ್ಟೆಲ್‌ಗಳಲ್ಲಿ ಸಿಬ್ಬಂದಿ ಮತ್ತು ಮೇಲ್ವಿಚಾರಕರ ಕೊರತೆಗಾಗಿ ಸ್ವಯಂಪ್ರೇರಿತವಾಗಿ ದಾಖಲಿಸಿಕೊಂಡಿರುವ ಅರ್ಜಿ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಳೆ ಮತ್ತು ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರ ನೇತೃತ್ವದ ವಿಭಾಗೀಯ ಪೀಠವು ನಡೆಸಿತು.

ಈ ಸಂದರ್ಭದಲ್ಲಿ ಪೀಠವು ಎಂ ಮಂಜು ಪ್ರಸಾದ್ ವರ್ಸಸ್ ಕರ್ನಾಟಕ ರಾಜ್ಯ ಪ್ರಕರಣದ ಮುಖ್ಯ ಕಾರ್ಯದರ್ಶಿ, ಸಮಾಜ ಕಲ್ಯಾಣ ಇಲಾಖೆ ಮತ್ತು ವೈದ್ಯಕೀಯ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳು, ಸರ್ಕಾರಿ ದಂತ ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ ನಿರ್ದೇಶಕರಿಗೆ ಸರ್ಕಾರದ ಎಲ್ಲಾ ಇಲಾಖೆ ಮತ್ತು ಸಂಸ್ಥೆಗಳ ಬ್ಯಾಕ್‌ಲಾಗ್ ಹುದ್ದೆಗಳಿಗೆ ಯುದ್ದೋಪಾದಿಯಲ್ಲಿ ಗರಿಷ್ಠ ಆರು ತಿಂಗಳಿನಲ್ಲಿ ತುಂಬುವ ದಿನಾಂಕ ೨೦೨೩ರ ಸೆಪ್ಟೆಂಬರ್ ೨೧ ರಂದು ಆದೇಶ. ಇದಕ್ಕೆ ಪೂರಕವಾಗಿ ಏನಾದರೂ ಕ್ರಮ ಕೈಗೊಳ್ಳಲಾಗಿದೆ ಎಂದು ಬಯಸುವುದು ಉತ್ಪ್ರೇಕ್ಷಿತ ನಿರೀಕ್ಷೆ ಏನಲ್ಲ. ಈ ಕುರಿತು ರಾಜ್ಯ ಸರ್ಕಾರವು ಸ್ಥಿತಿಗತಿ ವರದಿ ಸಲ್ಲಿಸಬೇಕು ಎಂದು ಆದೇಶ ನೀಡಿದೆ.

ಎಸ್‌ಸಿ/ಎಸ್‌ಟಿ ಹಾಸ್ಟೆಲ್‌ಗಾಗಿ ವಾರ್ಡನ್ ಮತ್ತು ಮೇಲ್ವಿಚಾರಕರ ಹುದ್ದೆಗಳಿಗೆ ನೇಮಕಾತಿ ಆಗದಿರುವಿರಿ ಮಕ್ಕಳ ವಿದ್ಯಾಭ್ಯಾಸದ ಮೇಲೆ ಪರಿಣಾಮ. ಇದು ಕಳಕಳಿಯ ವಿಚಾರವಾಗಿದೆ. ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗವು ವರದಿಯನ್ನು ಬಿಡುಗಡೆ ಮಾಡಿದೆ, ಅದರ ನಿಯಂತ್ರಣ ಮಾರ್ಗಸೂಚಿಗಳನ್ನು ಪ್ರಕಟಿಸಲಾಗಿದೆ. ಸರ್ಕಾರದ ಕರ್ತವ್ಯ ಮತ್ತು ಹಾಸ್ಟೆಲ್‌ಗಳ ನಿರ್ವಹಣೆಯ ಬಗ್ಗೆಯೂ ಉಲ್ಲೇಖಿಸಲಾಗಿದೆ. ಇದು ಸೂಕ್ತ ಅಂಶವಾಗಿದೆ. ಇದಕ್ಕೂ ಸಹ ರಾಜ್ಯ ಸರ್ಕಾರವು ಎರಡು ವಾರಗಳಲ್ಲಿ ಆಕ್ಷೇಪಣೆ ಸಲ್ಲಿಸಬೇಕು ಎಂದು ಸೂಚಿಸಲಾಗಿದೆ.

ಸರ್ಕಾರಿ ನೇಮಕಾತಿ ವಿಳಂಬದಿಂದ ವ್ಯವಸ್ಥೆಗೆ ನಷ್ಟ; ಉದ್ಯೋಗಕಾಂಕ್ಷಿಗಳಿಗೆ ವಯಸ್ಸಾಗಲಿದೆ: ಬೇಸರ
ಇದಕ್ಕೂ ಮುನ್ನ ಅಮಿಕಾಸ್ ಕ್ಯೂರಿ ನಿತಿನ್ ರಮೇಶ್ ಅವರು ಮಕ್ಕಳ ದೃಷ್ಟಿಯಿಂದ ಹುದ್ದೆ ತುಂಬುವುದು ಅಗತ್ಯ. ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗವು ನಿರ್ದಿಷ್ಟವಾಗಿ ನಿಯಂತ್ರಣ ಮಾರ್ಗಸೂಚಿಗಳನ್ನು ರೂಪಿಸಿದೆ. ಹಾಸ್ಟೆಲ್‌ಗಳನ್ನು ಹೇಗೆ ನಡೆಸಬೇಕು ಎಂದು ವಿವರಿಸಲಾಗಿದೆ. ವಾರ್ಡನ್ ಮತ್ತು ವಿದ್ಯಾರ್ಥಿಗಳ ಅನುಪಾತವನ್ನು ಮಾರ್ಗಸೂಚಿಯಲ್ಲಿ ಉಲ್ಲೇಖಿಸಲಾಗಿದೆ. ಮಕ್ಕಳ ಆಧಾರವಿಲ್ಲದೇ ಹುದ್ದೆ ತುಂಬುವುದು ಸರಿಯಾಗುವುದಿಲ್ಲ ಎಂದರು.

ಸರ್ಕಾರದ ವಕೀಲರು ಹಲವು ಇಲಾಖೆಗಳಿಂದ ಸೂಚನೆ ನಿರೀಕ್ಷಿಸಲಾಗುತ್ತಿದೆ. ಅಲ್ಲಿಂದ ಸೂಚನೆ ಬಂದ ಬಳಿಕ ಸಮಗ್ರ ಮತ್ತು ವಿಸ್ತೃತ ಆಕ್ಷೇಪಣೆ ಸಲ್ಲಿಸಲಾಗುವುದು ಎಂದು ಪ್ರಕಟಿಸಿದರು.

RELATED ARTICLES
- Advertisment -
Google search engine

Most Popular