ಮಂಡ್ಯ: ಕೇಂದ್ರದ ನೂತನ ಮೋಟರ್ ಕಾಯ್ದೆ ವಿರೋಧಿಸಿ ಲಾರಿ ಮಾಲೀಕರು ನಾಳೆ ರಸ್ತೆಗಿಳಿಯಲಿದ್ದು, ಬೃಹತ್ ಪ್ರತಿಭಟನೆಗೆ ರೈಲ್ವೆ ಗೂಡ್ಸ್ ಶೆಡ್ ಲಾರಿ ಹಾಗೂ ಸ್ಥಳೀಯ ಲಾರಿ ಮಾಲೀಕರ ಸಂಘದಿಂದ ಮುಷ್ಕರಕ್ಕೆ ಕರೆ ಕೊಡಲಾಗಿದೆ. ಫ್ಯಾಕ್ಟರಿ ಸರ್ಕಲ್ ನಿಂದ ಡಿಸಿ ಕಚೇರಿರೆಗೆ ಬೃಹತ್ ಹೋರಾಟ ನಡೆಯಲಿದೆ.
ಹಿಟ್ ಅಂಡ್ ರನ್ ಪ್ರಕರಣದ ಕಾಯ್ದೆ 106/1 ಹಾಗೂ 106/2 ಕಾಯ್ದೆ ರದ್ದಿಗೆ ಆಗ್ರಹಿಸಿ ಲಾರಿ ಹಾಗೂ ಮಾಲೀಕರು ಕೇಂದ್ರದ ನೂತನ ಕಾಯ್ದೆ ವಿರೋಧಿಸಿ ರಸ್ತೆಗಳಿಯಲಿದ್ದಾರೆ.
ಕೇಂದ್ರ ಸರ್ಕಾರ ಈ ರೀತಿಯ ಕಾಯ್ದೆ ತರುವುದು ಸರಿಯಲ್ಲ. ಲಾರಿ ಮಾಲೀಕರು ಒಂದೊಂದು ಲಾರಿ ಇಟ್ಟುಕೊಂಡು ಜೀವನ ನಡೆಸುತ್ತಿದ್ದಾರೆ. ತಕ್ಷಣವೇ ಈ ನೂತನ ಕಾಯ್ದೆ ವಾಪಸ್ ಪಡೆಯುವಂತೆ ಸುದ್ದಿಗೋಷ್ಟಿಯಲ್ಲಿ ಲಾರಿ ಮಾಲೀಕರ ಸಂಘದ ಉಪಾಧ್ಯಕ್ಷ ಸಂಜಯ್ ಕುಮಾರ್ ಆಗ್ರಹಿಸಿದ್ದಾರೆ.