ಮಂಡ್ಯ: ತಾಲೂಕು ಕಚೇರಿಗೆ ಕಂದಾಯ ಸಚಿವ ಕೃಷ್ಣಭೈರೇಗೌಡ ಅವರು ದಿಢೀರ್ ಭೇಟಿ ನೀಡಿದ್ದು, ಅಧಿಕಾರಿಗಳನ್ನು ಹಿಗ್ಗಾಮುಗ್ಗಾ ತರಾಟೆ ತೆಗೆದುಕೊಂಡಿದ್ದಾರೆ.
ಮೈಸೂರಿಗೆ ತೆರಳುತ್ತಿದ್ದ ವೇಳೆ ಮಂಡ್ಯದ ಮದ್ದೂರು ತಾಲೂಕು ಕಚೇರಿಗೆ ದಿಢೀರ್ ಭೇಟಿ ನೀಡಿ, ರಸ್ತೆ ಸರ್ವೇ ಮಾಡಿಕೊಡದ ಅಧಿಕಾರಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ.

ಈ ವೇಳೆ ಸಚಿವರು ಜನರಿಂದ ಅಹವಾಲು ಕೇಳಿದ್ದು, ಸಾರ್ವಜನಿಕರು ಅಧಿಕಾರಿಗಳು ವಿರುದ್ಧ ದೂರಿನ ಸುರಿಮಳೆ ಸುರಿಸಿದ್ದಾರೆ.
ಮೂರು ವರ್ಷಗಳಿಂದ ಬಂಡಿ ರಸ್ತೆ ಸರ್ವೇ ಮಾಡದ ಅಧಿಕಾರಿಗೆ ಸಚಿವರು ಫುಲ್ ಕ್ಲಾಸ್ ತೆಗೆದುಕೊಂಡಿದ್ದಾರೆ.
ಸರ್ಕಾರಿ ಜಾಗ ಸರ್ವೇ ಮಾಡಿಕೊಡಲು ಎಷ್ಟು ದಿನ ಬೇಕು? ನೆಪ ಹೇಳಿಕೊಂಡು ಕಾಲ ಕಳೆಯಲು ಬಂದಿದ್ದೀರಾ ಇಲ್ಲಿ. ನಿಮಗೆಲ್ಲ ನಾಚಿಕೆ ಆಗಬೇಕು. ಒಂದೊಂದು ಕೆಲಸ ಮಾಡಿಸಲು ನಾನೇ ಬರಬೇಕು? ಕೆಲಸ ಮಾಡಲು ಆಗಲ್ಲ ಅಂದ್ರೆ ಬಿಟ್ಟೋಗಿ ಎಂದು ಅಸಮಾಧಾನ ವ್ಯಕ್ತಪಡಿಸಿರುವ ಸಚಿವರು, ಜನರನ್ನ ಅಲೆಸದೆ ಕೆಲಸ ಮಾಡಿಕೊಡಲು ಸೂಚನೆ ನೀಡಿದ್ದಾರೆ.