ಮದ್ದೂರು: ಮಂಜುನಾಥನಾ ಸಾಕ್ಷಿಯಾಗಿಯೂ ಲಂಚ ಪಡೆದಿದ್ದಾರೆ ಎಂದು ಮದ್ದೂರು ಉಪನೊಂದಣಾಧಿಕಾರಿ ವಿರುದ್ಧ ಸಾರ್ವಜನಿಕನೋರ್ವ ಕಂದಾಯ ಸಚಿವ ಕೃಷ್ಣ ಭೈರೆಗೌಡರ ಬಳಿ ದೂರು ಹೇಳಿದರು.
ಇಂದು ಮದ್ದೂರು ತಾಲೂಕು ಕಚೇರಿಗೆ ಕಂದಾಯ ಸಚಿವರ ದಿಢೀರ್ ಭೇಟಿ ವೇಳೆ ಉಪನೊಂದಣಾಧಿಕಾರಿ ದಿನೇಶ್ ವಿರುದ್ಧ ವ್ಯಕ್ತಿಯೋರ್ವ ಜಮೀನೊಂದರ ವಿಚಾರವಾಗಿ 6.5 ಸಾವಿರಕ್ಕೆ 15 ಸಾವಿರ ಹಣ ಪಡೆದಿದ್ದಾರೆ ಎಂದು ಆರೋಪಿಸಿದ್ದಾರೆ.
ವ್ಯಕ್ತಿ ಆರೋಪ ಮಾಡ್ತಿದ್ದಂತೆ ಸಚಿವರು, 6 ವರೆ ಸಾವಿರ ಸ್ಟಾಂಪ್ ಡ್ಯೂಟಿಗೆ ಹೇಗೆ 15 ಸಾವಿರ ಪಡೆದ್ರಿ ಎಂದು ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಈ ವೇಳೆ ಉಪನೊಂದಣಾಧಿಕಾರಿ ದಿನೇಶ್ ಆರೋಪ ನಿರಾಕರಿಸಿದರು. ದಿನೇಶ್ ನಿರಾಕರಣೆಯಿಂದ ಕೋಪಗೊಂಡ ವ್ಯಕ್ತಿ,ಧರ್ಮಸ್ಥಳ ಮಂಜುನಾಥನ ಮೇಲೆ ಆಣೆ ಪ್ರಮಾಣ ಮಾಡಿದ್ದಾರೆ.
ಬಾಯಿಗೆ ಬೆರಳಿಟ್ಟರೆ ಪಾಪ ನಿನಗೆ ಕಚ್ಚೋಕೆ ಬರಲ್ಲಾ. ನೀನು ಲಂಚ ಪಡೆದಿ ಇಲ್ಲಾ ಅಲ್ವಾ ಎಂದು ಅಧಿಕಾರಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ.