ಮೈಸೂರು: ರೋಟರಿ ಜಿಲ್ಲಾ ಮಟ್ಟದ ರಸಪ್ರಶ್ನಾ ಸ್ಪರ್ಧಾ ಕೂಟದಲ್ಲಿ ರೋಟರಿ ವಿಜಯನಗರ ಮೈಸೂರು ಕ್ಲಬ್ ನ ರೊ.ಹೆಚ್.ಎಂ ಹರೀಶ್ ರವರು ಪ್ರಥಮ ಸ್ಥಾನ ಪಡೆದಿದ್ದಾರೆ.
ರೋಟರಿ ಮಂಗಳೂರು ಸೆಂಟ್ರಲ್ ಸಂಸ್ಥೆ ಆಶ್ರಯದಲ್ಲಿ ಪ್ರತಿವರ್ಷ ರೋಟರಿ ಜ್ಞಾನ ಮಾಹಿತಿ ಮತ್ತು ಜಾಗೃತಿ ಅಭಿಯಾನ ಅಂಗವಾಗಿ ರೋಟರಿ ಜಿಲ್ಲಾ ಮಟ್ಟದ ರಸಪ್ರಶ್ನೆ ಸ್ಪರ್ಧಾ ಕೂಟ ನಡೆಯುತ್ತಿದ್ದು, ಈ ಬಾರಿ ಹೋಟೆಲ್ ಮೋತಿ ಮಹಲ್ ಸಭಾಂಗಣದಲ್ಲಿ ನಡೆದ 18 ನೇ ವಾರ್ಷಿಕ ಜಿಲ್ಲಾ ಮಟ್ಟದ ಅಂತರ ರೋಟರಿ ಕ್ಲಬ್ ರಸಪ್ರಶ್ನಾ ಸ್ಪರ್ಧಾ ಕೂಟದಲ್ಲಿ ರೋಟರಿ ಕ್ಲಬ್ ವಿಜಯನಗರ ಮೈಸೂರು ಸಂಸ್ಥೆ ಪ್ರತಿನಿಧಿಸಿದ್ದ ರೊ.ಹೆಚ್.ಎಂ ಹರೀಶ್ ರವರು ಪ್ರಥಮ ಸ್ಥಾನ ಪಡೆದು ರೋಟರಿ ಪ್ರತಿಷ್ಠಿತ ಪ್ರಶಸ್ತಿ ಹಾಗೂ ಪ್ರಮಾಣ ಪತ್ರ ಸೇರಿದಂತೆ 3 ಸಾವಿರ ನಗದು ಪಡೆದು ನಾಲ್ಕನೇ ಬಾರಿ ಪ್ರಥಮ ಸ್ಥಾನ ಪಡೆದ ಹೆಗ್ಗಳಿಕೆಗೆ ಪಾತ್ರರಾದರು.

ಎರಡು ಬಾರಿ ದ್ವಿತೀಯ ಸ್ಥಾನ ಪಡೆದಿದ್ದಾರೆ, ಇವರ ಸಾಧನೆಗೆ ರೋಟರಿ ಮೈಸೂರು ವಿಜಯನಗರ ಕ್ಲಬ್ ಪದಾಧಿಕಾರಿಗಳು ಹಾಗೂ ಸದಸ್ಯರು ಸೇರಿ ಹಲವರು ಶ್ಲಾಘನೆ ವ್ಯಕ್ತಪಡಿಸಿದರು. ಸ್ಪರ್ಧೆಯಲ್ಲಿ ರೋಟರಿ ಕ್ಲಬ್ ಮಂಗಳೂರು ಬೈಕಂಪಾಡಿ ಸಂಸ್ಥೆ ಪ್ರತಿನಿಧಿಸಿದ್ದ ರೊ.ಸುಭೋದ್ ಕುಮಾರ್ ದಾಸ್ ಹಾಗೂ ರೊ.ಕಿರಣ್ ಪ್ರಸಾದ್ ರೈ ತಂಡ ದ್ವಿತೀಯ ಸ್ಥಾನ ಪಡೆದರು.
ಪ್ರಥಮ ಸ್ಥಾನ ಪಡೆದ ರೋ. ಎಚ್.ಎಮ್ ಹರೀಶ್ ಅವರು ಮಾತನಾಡಿ 119 ವರ್ಷ ಇತಿಹಾಸವಿರುವ ರೋಟರಿ ಬಗ್ಗೆ ಪ್ರಸ್ತುತ ರೋಟರಿಯಲ್ಲಿ ನೆಡೆಯುತ್ತಿರುವ ವಿದ್ಯಾಮಾನ ಬಗ್ಗೆ ರೋಟರಿ ಸಂಸ್ಥೆ ಆಡಳಿತ ವಿಷಯ ಹಾಗೂ ಚಟುವಟಿಕೆಗಳ ಬಗ್ಗೆ ಪ್ರತಿ ವರ್ಷ ರಸಪ್ರಶ್ನೆ ನಡೆಯುತ್ತದೆ ಇದರಲ್ಲಿ ಪ್ರಥಮ ಸ್ಥಾನ ಪಡೆದಿದ್ದಕ್ಕೆ ಹೆಚ್ಚು ಸಂತಸವಾಗುತ್ತಿದೆ ಎಂದರು.
ಈ ಸಂದರ್ಭ ರೋಟರಿ ಜಿಲ್ಲಾ ಮಾಜಿ ಗವರ್ನರ್ ರೊ.ರವೀಂದ್ರ ಭಟ್, ರೊ.ಡಾ.ದೇವದಾಸ್ ರೈ,
ರೋಟರಿ ಅಧ್ಯಕ್ಷರಾದ ರೊ.ರಾಜೇಶ್ ಶೆಟ್ಟಿ, ಜಂಟಿ ಕಾರ್ಯದರ್ಶಿ ರೊ.ರಾಮದಾಸ್, ವಲಯ ಸೇನಾನಿ ರೊ.ಸಾಹಿಬಾಬ ರಾವ್, ನಿಯೋಜಿತ ಅಧ್ಯಕ್ಷರಾದ ಬ್ರಾನ್ ಪಿಂಟೋ, ಸಹಾಯಕ ಗವರ್ನರ್ ರೊ.ಸುಭೋದ್ ಕುಮಾರ್ ದಾಸ್ ಸೇರಿದಂತೆ ಮೈಸೂರು ಮಂಗಳೂರು ಬೈಕಂಪಾಡಿ ಪುತ್ತೂರು ದೇರಳಕಟ್ಟೆ ಪಣಂಬೂರು ಮೂಡಬಿದ್ರೆ ಬಂಟ್ವಾಳ ರೋಟರಿ ಸಂಸ್ಥೆಯ ಪದಾಧಿಕಾರಿಗಳು ಸದಸ್ಯರು ಇದ್ದರು.