ಮೈಸೂರು:ನರಸಿಂಹರಾಜ ಕ್ಷೇತ್ರದ ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾ ಮಾಜಿ ಅಧ್ಯಕ್ಷ ಎಂ. ಪುಟ್ಟಸ್ವಾಮಿ (ಪುಟ್ಟರಾಜು) ಬುಧವಾರ ಮುಂಜಾನೆ ನಿಧನರಾದರು. 47 ವರ್ಷ ವಯಸ್ಸಾಗಿತ್ತು. ಮೃತರಿಗೆ ತಾಯಿ ರಾಮಮ್ಮ, ಪತ್ನಿ ಮಹದೇವಿ (ಮಧು), ಪುತ್ರಿ ಪೂರ್ವಿಕಾ, ಪುತ್ರ ಧನುಷ್ ಇದ್ದಾರೆ.
1994 ರಿಂದ ಬಿಜೆಪಿ ಕಾರ್ಯಕರ್ತನಾಗಿ ಗುರಿತಿಸಿಕೊಂಡಿದ್ದ ಪುಟ್ಟಸ್ವಾಮಿ ಎರಡು ಬಾರಿ ನಗರ ಪಾಲಿಕೆ ಚುನಾವಣೆಯಲ್ಲಿ ಸ್ಪರ್ಧಿಸಿ ಪರಾಭವಗೊಂಡಿದ್ದರು. 53ನೇ ವಾರ್ಡಿನ ಅಧ್ಯಕ್ಷರಾಗಿ, ಎನ್.ಆರ್. ಕ್ಷೇತ್ರ ಬಿಜೆಪಿ ಕಾರ್ಯದರ್ಶಿಯಾಗಿ, ನಗರ ಸ್ಲಂ ಮೋರ್ಚಾ ಉಪಾಧ್ಯಕ್ಷರಾಗಿ ಮತ್ತು ಹಿಂದುಳಿದ ವರ್ಗಗಳ ಮೋರ್ಚಾ ಅಧ್ಯಕ್ಷರಾಗಿಯೂ ಕಾರ್ಯ ನಿರ್ವಹಿಸಿದ್ದರು. ಮೊನ್ನೆಯಷ್ಟೇ ಪಾರ್ಶ್ವವಾಯುವಿಗೆ ತುತ್ತಾಗಿದ್ದ ಪುಟ್ಟಸ್ವಾಮಿ ಅವರಿಗೆ ಬುಧವಾರ ಬೆಳಗ್ಗೆ ಹೃದಯಾಘಾತ ಸಂಭವಿಸಿದ್ದರಿಂದ ಆಸ್ಪತ್ರೆಯಲ್ಲಿಯೇ ಕೊನೆಯುಸಿರೆಳೆದರು.
ಮೃತರ ಅಂತ್ಯಕ್ರಿಯೆ ಎನ್.ಆರ್. ಮೊಹಲ್ಲಾದ ರುದ್ರಭೂಮಿಯಲ್ಲಿ ನೆರವೇರಿತು.
ಮೃತರ ನಿಧನಕ್ಕೆ ಸಂಸದ ಪ್ರತಾಪ ಸಿಂಹ, ನಗರ ಬಿಜೆಪಿ ಅಧ್ಯಕ್ಷ ಎಲ್. ನಾಗೇಂದ್ರ, ಶಾಸಕ ಟಿ.ಎಸ್. ಶ್ರೀವತ್ಸ, ಮಾಜಿ ಮೇಯರ್ಸಂದೇಶ್ಸ್ವಾಮಿ, ಮಾಜಿ ಶಾಸಕ ಮಾರುತಿರಾವ್ಪವಾರ್, ಮಾಜಿ ಉಪ ಮೇಯರ್ಗಳಾದ ಡಾ.ಜಿ. ರೂಪಾ, ಶ್ರೀಧರ್, ಮಾಜಿ ಸದಸ್ಯರಾದ ಸತ್ಯರಾಜ್, ಪ್ರದೀಪ್, ಎಂ.ಕೆ. ಶಂಕರ್, ಸು. ಮುರುಳಿ, ವಸ್ತು ಪ್ರದರ್ಶನ ಪ್ರಾಧಿಕಾರದ ಮಾಜಿ ಅಧ್ಯಕ್ಷ ಬಿ.ಪಿ. ಮಂಜುನಾಥ್, ಮುಖಂಡರಾದ ಯೋಗೇಶ್ಬಾಬು, ರವಿ, ಕೃಷ್ಣಪ್ಪ, ಮಣಿಕಂಠ ಸೇರಿದಂತೆ ಅನೇಕರು ಭೇಟಿ ನೀಡಿ ಅಂತಿಮ ನಮನ ಸಲ್ಲಿಸಿದರು.