Saturday, April 19, 2025
Google search engine

Homeಅಪರಾಧಗೂಡ್ಸ್ ವಾಹನ ಡಿಕ್ಕಿ : ಸ್ಥಳದಲ್ಲೆ ಪಾದಚಾರಿ ಸಾವು

ಗೂಡ್ಸ್ ವಾಹನ ಡಿಕ್ಕಿ : ಸ್ಥಳದಲ್ಲೆ ಪಾದಚಾರಿ ಸಾವು

ಕೆ.ಆರ್.ಪೇಟೆ : ಅತಿ ವೇಗವಾಗಿ ಬಂದ ಗೂಡ್ಸ್ ವಾಹನವೊಂದು ಪಾದಚಾರಿಗೆ ಡಿಕ್ಕಿ ಹೊಡೆದ ಪರಿಣಾಮ ಪಾದಚಾರಿ ರೈತರೊಬ್ಬರು ಸ್ಥಳದಲ್ಲಿಯೇ ಮೃತಪಟ್ಟಿರುವ ಘಟನೆ ತಾಲ್ಲೂಕಿನ ಜಾಗಿನಕೆರೆ ಬಳಿಯ ಜಲಸೂರು-ಬೆಂಗಳೂರು ಅಂತಾರಾಜ್ಯ ಹೆದ್ದಾರಿಯಲ್ಲಿ ಮಂಗಳವಾರ ರಾತ್ರಿ ೭.೪೫ಕ್ಕೆ ನಡೆದಿದೆ. ಜಾಗಿನಕೆರೆ ಗ್ರಾಮದ ಮೋಟೇಗೌಡರ ಮಗ ನಾಗೇಶ್(೫೮) ಮೃತ ವ್ಯಕ್ತಿ ಎಂದು ತಿಳಿದು ಬಂದಿದೆ.

ಘಟನೆ ವಿವರ: ರೈತ ನಾಗೇಶ್ ಅವರು ಕೆಲಸದ ನಿಮಿತ್ತ ಕೈಗೋನಹಳ್ಳಿ ಕ್ರಾಸ್‌ಗೆ ಹೋಗಿ ವಾಪಸ್ ಬರುತ್ತಿದ್ದ ವೇಳೆ ಎದುರಿನಿಂದ ಬಂದ ಅಶೋಕ್ ಲೇಲ್ಯಾಂಡ್ ಗೂಡ್ಸ್ ವಾಹನ (ಕೆ.ಎ.೧೩-ಬಿ.೧೪೧೨) ಅತಿ ವೇಗವಾಗಿ ಬಂದು ನಾಗೇಶ್ ಅವರಿಗೆ ಡಿಕ್ಕಿ ಹೊಡೆದಿದೆ. ಜತೆಗೆ ಹಿಂಬದಿಯ ಚಕ್ರವು ನಾಗೇಶ್ ಅವರ ಮೈಮೇಲೆ ಹರಿದಿದೆ. ಇದರಿಂದ ಗಂಭೀರವಾಗಿ ಗಾಯಗೊಂಡ ನಾಗೇಶ್ ಅವರು ಸ್ಥಳದಲ್ಲಿಯೇ ಮೃತಪಟ್ಟಿರುತ್ತಾರೆ.

ಘಟನೆಯ ನಂತರ ಒಂದು ಕಿ.ಮೀ. ದೂರದಲ್ಲಿ ವಾಹನದ ಚಾಲಕ ವಾಹನ ಬಿಟ್ಟು ಪರಾರಿಯಾಗಿದ್ದಾನೆ.
ಘಟನೆ ಕುರಿತು ಮೃತ ನಾಗೇಶ್ ಅವರ ಮಗ ಅಭಿಜಿತ್ ನೀಡಿದ ದೂರಿನ ಮೇರೆಗೆ ಘಟನಾ ಸ್ಥಳಕ್ಕೆ ಕೆ.ಆರ್.ಪೇಟೆ ಪೋಲೀಸ್ ಠಾಣೆಯ ವೃತ್ತ ನಿರೀಕ್ಷಕಿ ಸುಮಾರಾಣಿ, ಸಬ್ ಇನ್ಸ್ ಪೆಕ್ಟರ್ ನವೀನ್ ಬೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿದರು.

ಗ್ರಾಮಸ್ಥರ ಆಗ್ರಹ: ಅಪಘಾತ ನಡೆದ. ಜಲಸೂರು- ಬೆಂಗಳೂರು ಅಂತಾರಾಜ್ಯ ಹೆದ್ದಾರಿ ಸ್ಥಳದಲ್ಲಿ ಕೆಶಿಪ್ ಸಂಸ್ಥೆಯವರು ರಸ್ತೆ ಬದಿಯಲ್ಲಿ ವಿದ್ಯುತ್ ದೀಪಗಳನ್ನು ಹಾಕಿರುವುದಿಲ್ಲ. ಇದು ಈ ಅಪಘಾತಕ್ಕೆ ಪ್ರಮುಖ ಕಾರಣವಾಗಿದೆ. ವಿದ್ಯುತ್ ದೀಪಗಳು ಇಲ್ಲದ ಕಾರಣ ಈ ಹೆದ್ದಾರಿಯಲ್ಲಿ ಹಲವು ಅಪಘಾತಗಳು ಸಂಭವಿಸಿವೆ. ಹಾಗಾಗಿ ಕೆಶಿಪ್ ಇಲಾಖೆಯು ಈ ಅಪಘಾತದ ಹೊಣೆ ಹೊತ್ತು ಮೃತ ರೈತ ನಾಗೇಶ್ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಬೇಕು ಎಂದು ಜಾಗಿನಕೆರೆ ಗ್ರಾಮಸ್ಥರು ಕೆಶಿಪ್ ಅಧಿಕಾರಿಗಳನ್ನು ಒತ್ತಾಯ ಮಾಡಿದ್ದಾರೆ

RELATED ARTICLES
- Advertisment -
Google search engine

Most Popular