ಮಂಡ್ಯ: ಮೊಟ್ಟಮೊದಲ ಬಾರಿಗೆ ಮಂಡ್ಯದಲ್ಲಿ ಹವಾನಿಯಂತ್ರಿತ(A/C) ಶೌಚಾಲಯ ನಿರ್ಮಾಣಕ್ಕೆ ಶಾಸಕ ಗಣಿಗ ರವಿಕುಮಾರ್ ಗುದ್ದಲಿ ಪೂಜೆ ನೆರವೇರಿಸಿದರು.
ಈ ಸಂದರ್ಭ ಮಾತನಾಡಿದ ಶಾಸಕ ಗಣಿಗ ರವಿಕುಮಾರ್, ಮಂಡ್ಯ ನಗರದಲ್ಲಿ ಮಂಡ್ಯದ ಸಂಜಯ್ ವೃತ್ತ, ನಂದಾ ವೃತ್ತ, ಹಾಗೂ ಜೈಲುಖಾನೆ ಸರ್ಕಲ್ ಬಳಿ ಈ ಹೈಟೆಕ್ ಎಸಿ ಶೌಚಾಲಯ ನಿರ್ಮಾಣ ಮಾಡಲಾಗುತ್ತಿದೆ ಎಂದರು.
ಬೆಂಗಳೂರು ಮಹಾನಗರ ಬಿಟ್ಟರೆ ಎಸಿ ಶೌಚಾಲಯ ಕರ್ನಾಟಕದಲ್ಲಿ ಬೇರೆಲ್ಲೂ ಇಲ್ಲ. ಮಂಡ್ಯದಲ್ಲಿ ಪ್ರಥಮಬಾರಿಗೆ ಖಾಸಗಿಯವರ ಸಹಭಾಗಿತ್ವದಲ್ಲಿ ಹೈಟೆಕ್ ಎಸಿ ಶೌಚಾಲಯವನ್ನು ನಿರ್ಮಾಣ ಹಾಗೂ ನಿರ್ವಹಣೆ ಮಾಡಲಾಗುತ್ತದೆ ಎಂದು ತಿಳಿಸಿದರು.
ಮಂಡ್ಯಕ್ಕೆ ಹೊಸ ರೂಪ ಕೊಡಲು ನಮ್ಮ ಪಕ್ಷದ ಗುರಿ. ಮೊದಲ ಹೆಜ್ಜೆಯಾಗಿ ಮುನ್ನುಡಿ ಬರೆಯುತ್ತಿದ್ದೇವೆ. ಸಾರ್ವಜನಿಕ ಶೌಚಾಲಯ ಕೆಟ್ಟು ನಿಂತಿವೆ ಅವುಗಳನ್ನು ಸರಿಪಡಿಸುವ ಕೆಲಸ ಮಾಡ್ತೇವೆ ಎಂದು ಹೇಳಿದರು.