ಬೆಂಗಳೂರು: ಭಾರತದ ಏರೋಸ್ಪೇಸ್ ಮತ್ತು ರಕ್ಷಣಾ ಉದ್ಯಮದ ಪ್ರಮುಖ ಸಂಸ್ಥೆ ರಂಗ್‌ಸನ್ಸ್‌ಏರೋಸ್ಪೇಸ್, ಏರೋಸ್ಪೇಸ್ ಸಿಸ್ಟಮ್ ಗಳಿಗೆ ಟ್ಯೂಬ್‌ಗಳು ಮತ್ತು ಡಕ್ಟ್ಸ್ ಗಳನ್ನು ಪೂರೈಸಲು ಬೋಯಿಂಗ್‌ನೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿದೆ. ಇದು ಭಾರತೀಯ ಪೂರೈಕೆದಾರರೊಂದಿಗೆ ಬೋಯಿಂಗ್‌ನ ಈ ರೀತಿಯ ಮೊದಲ ಸಹಯೋಗವಾಗಿದೆ.
ರಂಗ್‌ಸನ್ಸ್ ಏರೋಸ್ಪೇಸ್‌ನ ಸಿಇಓ ಶ್ರೀ ಪವನ್ ರಂಗ ಅವರು ಸಹಯೋಗದ ಕುರಿತು ಉತ್ಸಾಹ ವ್ಯಕ್ತಪಡಿಸುತ್ತಾ, ಈ ಒಪ್ಪಂದವು ರಂಗ್‌ಸನ್ಸ್‌ಏರೋಸ್ಪೇಸ್ ಮತ್ತು ಭಾರತೀಯ ಏರೋಸ್ಪೇಸ್ ಉದ್ಯಮಕ್ಕೆ ಮಹತ್ವದ ಮೈಲಿಗಲ್ಲಾಗಿದೆ. ಜಾಗತಿಕ ಏವಿಯೇಷನ್ ಲೀಡರ್ ಆಗಿರುವ ಬೋಯಿಂಗ್‌ನೊಂದಿಗೆ ಪಾಲುದಾರರಾಗಲು ಮತ್ತು ಭಾರತದಲ್ಲಿ ಏವಿಯೇಷನ್ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸುವುದಕ್ಕೆ ಕೊಡುಗೆ ನೀಡಲು ನಾವು ಹೆಮ್ಮೆ ಪಡುತ್ತೇವೆ ಎಂದು ಹೇಳಿದ್ದಾರೆ.
ಐದು ವರ್ಷಗಳ ಈ ಒಪ್ಪಂದವು ಏವಿಯೇಷನ್ಸಪ್ಲೈಚೈನ್ ಗೆ ಪ್ರಮುಖ ಕೊಡುಗೆದಾರರಾಗಿ ರಂಗ್‌ಸನ್ಸ್‌ಏರೋಸ್ಪೇಸ್ ಸ್ಥಾನವನ್ನು ಗಟ್ಟಿಗೊಳಿಸುತ್ತದೆ.ಇದು ಏರೋಸ್ಪೇಸ್ ವಲಯದಲ್ಲಿ ಉತ್ಕೃಷ್ಟತೆ ಮತ್ತು ನಾವೀನ್ಯತೆ ಕುರಿತಾದ ಕಂಪನಿಯ ದೃಢವಾದ ಬದ್ಧತೆಯನ್ನು ಎತ್ತಿ ತೋರಿಸುತ್ತದೆ.ಈ ಕಾರ್ಯತಂತ್ರದ ಸಹಯೋಗವು ಉತ್ತಮ ಗುಣಮಟ್ಟದ, ಸುಧಾರಿತ ಪರಿಹಾರಗಳನ್ನು ಒದಗಿಸುವರಂಗ್ ಸನ್ಸ್‌ಏರೋಸ್ಪೇಸ್‌ನ ಬದ್ಧತೆಯನ್ನು ಒತ್ತಿ ಹೇಳುತ್ತದೆ.ಜೊತೆಗೆ ಭಾರತದಿಂದ ಯುನೈಟೆಡ್ ಸ್ಟೇಟ್ಸ್ ಮತ್ತು ಇಸ್ರೇಲ್‌ಗೆ ಅದರ ಜಾಗತಿಕ ಉಪಸ್ಥಿತಿಯನ್ನು ವಿಸ್ತರಿಸುತ್ತದೆ.