ಮಂಡ್ಯ: ಕೇಂದ್ರದ ನೂತನ ಮೋಟರ್ ಕಾಯ್ದೆ ವಿರೋಧಿಸಿ ಮದ್ದೂರಿನಲ್ಲಿ ಕೊಲ್ಲಿ ವೃತ್ತದ ಬಳಿ ಬೆಂಗಳೂರು ಮೈಸೂರು ಹೆದ್ದಾರಿ ತಡೆದು ಲಾರಿ ಮಾಲೀಕರ ಬೃಹತ್ ಪ್ರತಿಭಟನೆ ನಡೆಸಿದರು.
ಗೂಡ್ಸ್ ಶೆಡ್ ಲಾರಿ ಹಾಗೂ ಸ್ಥಳೀಯ ಲಾರಿ ಮಾಲೀಕರ ಸಂಘದಿಂದ ಪ್ರತಿಭಟನೆ ನಡೆಯುತ್ತಿದ್ದು, ಕೇಂದ್ರದ ನೂತನ ಕಾಯ್ದೆ ವಿರೋಧಿಸಿ ಲಾರಿ ಚಾಲಕರು ಹಾಗೂ ಮಾಲೀಕರು ರಸ್ತೆಗಳಿದಿದ್ದಾರೆ.
ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿರುವ ಪ್ರತಿಭಟನಾಕಾರರು, ಹಿಟ್ ಅಂಡ್ ರನ್ ಪ್ರಕರಣದ ಕಾಯ್ದೆ 106/1 ಹಾಗೂ 106/2 ಕಾಯ್ದೆ ರದ್ದಿಗೆ ಆಗ್ರಹಿಸಿದ್ದಾರೆ.