ಮೈಸೂರು: ಕರ್ನಾಟಕ ರಾಜ್ಯ ಡಾ.ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯ ಇಂದು ಐತಿಹಾಸಿಕವಾಗಿ ವಿಶ್ವವಿದ್ಯಾಲಯದ ಚಟುವಟಿಕೆಗಳಿಗೆ ನಾಂದಿ ಹಾಡಿದ್ದು, ಇಲ್ಲಿಯವರೆಗೂ ನಮ್ಮ ವಿಶ್ವವಿದ್ಯಾಲಯ ಮೈಸೂರಿಗೆ ಮಾತ್ರ ಸೀಮಿತವಾಗಿತ್ತು. ಇದೀಗ ನಾಲ್ಕು ಶಿಕ್ಷಣ ಸಂಸ್ಥೆಗಳೊಂದಿಗೆ ಒಡಂಬಡಿಕೆ ಮಾಡಿಕೊಂಡು ರಾಜ್ಯಕ್ಕೆ ವಿಸ್ತರಿಸಿದೆ ಎಂದು ಕರ್ನಾಟಕ ರಾಜ್ಯ ಡಾ.ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ನಾಗೇಶ್ ವಿ.ಬೆಟ್ಟಕೋಟೆ ಹೇಳಿದರು.
ವಿಶ್ವವಿದ್ಯಾಲಯದ ಮಧ್ಯಕುಟೀರದಲ್ಲಿ ನಡೆದ ಎಂಓಯು ಸಭೆಯಲ್ಲಿ ಮಾತನಾಡಿದ ಅವರು, ರಾಜ್ಯಪಾಲರಿಂದ ಅನುಮೋದಿತವಾಗಿರುವ ಪರಿನಿಯಮಗಳ ಅನುಸಾರ ವಿಶ್ವವಿದ್ಯಾಲಯದಿಂದ ಮಾನ್ಯತೆ ಪಡೆದುಕೊಂಡು ಸರ್ಟಿಫಿಕೇಟ್ ಡಿಪ್ಲೋಮೊ, ಪದವಿ ಮತ್ತು ಸ್ನಾತಕೋತ್ತರ ಪದವಿ ಕೋರ್ಸ್‌ಗಳನ್ನು ನಡೆಸಲು ಒಡಂಬಡಿಕೆ ಮಾಡಿಕೊಂಡು ಪದವಿ ನೀಡಬಹುದಾಗಿದೆ. ಪಠ್ಯ ಮತ್ತು ಪರೀಕ್ಷಾ ಕಾರ್ಯಗಳು ವಿಶ್ವವಿದ್ಯಾಲಯದ ಜವಾಬ್ದಾರಿಯಾಗಿರುತ್ತದೆ. ಹೀಗಾಗಿ ಗುಣಮಟ್ಟದ ಪ್ರದರ್ಶನ ಕಲೆಗಳ ಶಿಕ್ಷಣ ಎಲ್ಲರಿಗೂ ತಲುಪಲಿದೆ ಎಂದು ಹೇಳಿದರು.
ಮೊದಲ ಹಂತದಲ್ಲಿ ಬೆಂಗಳೂರಿನ ಲಕ್ಷ್ಮೀನಾರಾಯಣ ಗ್ಲೋಬಲ್ ಸೆಂಟರ್ ಫಾರ್ ಎಕ್ಸಲೆನ್ಸ್ ಶೇ?ದ್ರಿಪುರಂ ಸಂಜೆ ಕಾಲೇಜು, ಎಂಇಎಸ್ ಕಾಲೇಜ್ ಮತ್ತು ದೃಷ್ಟಿ ಆರ್ಟ್ ಸೆಂಟರ್‌ಗಳು ವಿಶ್ವವಿದ್ಯಾಲಯದೊಂದಿಗೆ ಈ ಶೈಕ್ಷಣಿಕ ವ?ದಿಂದಲೇ ಪ್ರಾರಂಭಿಸುವ ಬಗ್ಗೆ ಒಡಂಬಡಿಕೆ ಮಾಡಿಕೊಂಡಿರುತ್ತೇವೆ ಎಂದು ಹೇಳಿದರು.
ಇದರ ಸದುಪಯೋಗ ರಾಜ್ಯದ ಎಲ್ಲಾ ಜನತೆಗೂ ತಲುಪಲಿದೆ ಮತ್ತು ಮುಂದಿನ ಹಂತದಲ್ಲಿ ೧೪ ಸಂಸ್ಥೆಗಳು ಈ ವ?ದಿಂದಲೇ ಕಾರ್ಯ ಆರಂಭ ಮಾಡುತ್ತವೆ ಎಂದರು.
ಅಂತರಾಷ್ಟ್ರೀಯ ವೈಲಿನ್ ವಾದಕ, ಪದ್ಮಭೂ?ಣ ಪುರಸ್ಕೃತ ಎಲ್.ಸುಬ್ರಹ್ಮಣ್ಯ ನಮ್ಮ ವಿಶ್ವವಿದ್ಯಾಲಯದೊಂದಿಗೆ ಒಡಂಬಡಿಕೆ ಮಾಡಿಕೊಂಡು ಕರ್ನಾಟಕ ಸಂಗೀತ ಶಿಕ್ಷಣವನ್ನು ಕಾರ್ಯ ಮಾಡಲು ಮುಂದೆ ಬಂದಿರುವುದು ಶ್ಲಾಘನೀಯ ಎಂದರು.
ಸಭೆಯಲ್ಲಿ ಕುಲಸಚಿವರು ಹಾಗೂ ವಿವಿಧ ಸಂಸ್ಥೆಗಳ ಮುಖ್ಯಸ್ಥರು ಉಪಸ್ಥಿತರಿದ್ದರು.