Saturday, April 19, 2025
Google search engine

Homeಸ್ಥಳೀಯಉನ್ನತ ಶಿಕ್ಷಣಕ್ಕೆ ಪ್ರೋತ್ಸಾಹ: ಶೋಭಾ ವಿನ್ಸೆಂಟ್

ಉನ್ನತ ಶಿಕ್ಷಣಕ್ಕೆ ಪ್ರೋತ್ಸಾಹ: ಶೋಭಾ ವಿನ್ಸೆಂಟ್


ಮೈಸೂರು: ಸಾಂಸ್ಕೃತಿಕ ಹಾಗೂ ಶೈಕ್ಷಣಿಕ ವಿನಿಮಯದ ಹಿನ್ನೆಲೆಯಲ್ಲಿ ಯುಎಸ್‌ಎಯಲ್ಲಿ ಉನ್ನತ ಶಿಕ್ಷಣ ನೀಡಲು ಯುನೈಟೆಡ್ ಸ್ಟೇಟ್ಸ್-ಇಂಡಿಯಾ ಎಜುಕೇಷನಲ್ ಫೌಂಡೇಶನ್(ಯುಎಸ್‌ಐಎಎಫ್) ಪ್ರೋತ್ಸಾಹ ನೀಡುತ್ತಿದೆ ಎಂದು ಫೌಂಡೇಶನ್ ಸಂಯೋಜಕಿ ಶಿನು ಶೋಬಾ ವಿನ್ಸೆಂಟ್ ತಿಳಿಸಿದರು.
ಮೈಸೂರು ವಿಶ್ವವಿದ್ಯಾಲಯದ ಅಂತರರಾಷ್ಟ್ರೀಯ ಕೇಂದ್ರ ಹಾಗೂ ಅಂತರರಾಷ್ಟ್ರೀಯ ಗುಣಮಟ್ಟದ ಭರವಸೆ ಕೋಶ ಶುಕ್ರವಾರ ವಿಜ್ಞಾನ ಭವನದಲ್ಲಿ ಆಯೋಜಿಸಿದ್ದ ಫೆಲೋಶಿಪ್ ಕುರಿತ ಸಂವಾದದಲ್ಲಿ ಮಾತನಾಡಿದ ಅವರು, ಭಾರತ ಹಾಗೂ ಯುಎಸ್‌ಎ ಸರ್ಕಾರ ವಿದ್ಯಾಭ್ಯಾಸದ ಉದ್ದೇಶಕ್ಕಾಗಿ ಹಲವು ಫೆಲೋಶಿಪ್‌ಗಳನ್ನು ಸ್ಥಾಪಿಸಿದೆ. ಉನ್ನತ ಶಿಕ್ಷಣ ಪಡೆಯುವವರಿಗೆ ಈ ಸೌಲಭ್ಯ ಲಭ್ಯವಿದೆ. ಫೌಂಡೇಶನ್ ವತಿಯಿಂದ ಫುಲ್ ಬ್ರೈಟ್ ನೆಹರೂ ಹಾಗೂ ಫುಲ್ ಬ್ರೈಟ್ ಕಲಾಂ ಫೆಲೋಶಿಪ್ ನೀಡುತ್ತಿದ್ದೇವೆ ಎಂದು ಮಾಹಿತಿ ನೀಡಿದರು.
ಸ್ನಾತಕೋತ್ತರ, ಡಾಕ್ಟರೇಟ್, ಸಂಶೋಧನೆ ಹಾಗೂ ಶಾಲಾ ಶಿಕ್ಷಕರಿಗೆ ಸಂಬಂಧಿಸಿದ ಕೋರ್ಸ್‌ಗಳಿಗೆ ಫೆಲೋಶಿಪ್ ನೀಡಲಾಗುತ್ತಿದೆ. ಫೌಂಡೇಶನ್ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯ ಆಯ್ಕೆ ಮಾಡಿ ವಿದ್ಯಾಭ್ಯಾಸಕ್ಕೆ ಸಹಾಯ ಮಾಡುತ್ತದೆ. ನಿಗದಿತ ಮೊತ್ತಕ್ಕಿಂತ ಹೆಚ್ಚಿನ ವೆಚ್ಚವನ್ನು ವಿದ್ಯಾರ್ಥಿಗಳೇ ಭರಿಸಬೇಕಾಗುತ್ತದೆ ಎಂದು ತಿಳಿಸಿದರು.

?ಯುಎಸ್‌ಎ ಶಿಕ್ಷಣದಲ್ಲಿ ಇತರೆ ದೇಶಗಳ ವಿದ್ಯಾರ್ಥಿಗಳೂ ಇರುತ್ತಾರೆ. ಹೀಗಾಗಿ ವಿವಿಧ ದೇಶದ ಜನರ ವ್ಯಕ್ತಿತ್ವ ಅರಿಯಲು ಇದು ಉತ್ತಮ ವೇದಿಕೆ. ಫೆಲೋಶಿಪ್‌ನ ಆಯ್ಕೆಗೆ ಅಂಕಗಳಿಗಿಂತ ಹೆಚ್ಚಾಗಿ ನಿಮ್ಮ ಪ್ರಕಟಣೆಗಳು ಪ್ರಾಮುಖ್ಯತೆ ಪಡೆದುಕೊಳ್ಳುತ್ತದೆ. ಮನಸ್ಸಿನ ಭಾವನೆಗಳನ್ನು ಇಂಗ್ಲೀಷ್‌ನಲ್ಲಿ ಇತರರಿಗೆ ಅರ್ಥೈಸುವಷ್ಟು ಭಾಷಾಜ್ಞಾನ ನಿಮ್ಮಲ್ಲಿದ್ದರೆ ಯುಎಸ್‌ಎಯಲ್ಲಿ ಶಿಕ್ಷಣ ಪಡೆಯಬಹುದು? ಎಂದು ಸಲಹೆ ನೀಡಿದರು.

ವಿಶ್ರಾಂತ ಕುಲಪತಿ ವೆಂಕಟರಾಮಯ್ಯ, ಅಂತರರಾಷ್ಟ್ರೀಯ ಕೇಂದ್ರದ ನಿರ್ದೇಶಕ ಪ್ರೊ.ಜಿ.ಆರ್.ಜನಾರ್ಧನ್, ಐಕ್ಯೂಎಸಿ ನಿರ್ದೇಶಕ ಪ್ರೊ.ಕೆ.ಎನ್.ಅಮೃತೇಶ್ ಇದ್ದರು.

RELATED ARTICLES
- Advertisment -
Google search engine

Most Popular