Saturday, April 19, 2025
Google search engine

Homeರಾಜ್ಯಸುದ್ದಿಜಾಲಗುಂಡ್ಲುಪೇಟೆ: ನಮ್ಮ ನಡೆ ಗುಂಡ್ಲುಪೇಟೆ ಸ್ವಚ್ಛತೆ ಕಡೆ -ಮುಖ್ಯಾಧಿಕಾರಿ ವಸಂತಕುಮಾರಿ

ಗುಂಡ್ಲುಪೇಟೆ: ನಮ್ಮ ನಡೆ ಗುಂಡ್ಲುಪೇಟೆ ಸ್ವಚ್ಛತೆ ಕಡೆ -ಮುಖ್ಯಾಧಿಕಾರಿ ವಸಂತಕುಮಾರಿ

ಗುಂಡ್ಲುಪೇಟೆ: ನಮ್ಮ ನಡೆ ಸ್ವಚ್ಚ ಗುಂಡ್ಲುಪೇಟೆ ಕಡೆ ಎಂಬ ವಿನೂತನ ಜಾಗೃತಿಯನ್ನ ಪುರಸಭಾ ಮುಖ್ಯಾಧಿಕಾರಿಗಳಾದ ಕೆ.ಪಿ.ವಸಂತ ಕುಮಾರಿಯವರು ತಮ್ಮ ಸಿಬ್ಬಂದಿಗಳೊಡನೆ ಪಟ್ಟಣದ ಬೀದಿಗಳಲ್ಲಿ ಸಂಚರಿಸಿ ಅಂಗಡಿ ಹೊಟೆಲು ಮಾಲಿಕರುಗಳಿಗೆ ಕರಪತ್ರವನ್ನ ನೀಡುತ್ತಾ ಕಸ ಸಂಗ್ರಹಣೆಯ ಬಗ್ಗೆ ಮಾಹಿತಿ ನೀಡಿದರು.

ಈ ಸಮಯದಲ್ಲಿ ಮಾತನಾಡಿದ ಮುಖ್ಯಧಿಕಾರಿಗಳು ಸ್ವಚ್ಚ ಪಟ್ಟಣವನ್ನಾಗಿ ಪರಿವರ್ತನೆ ಮಾಡುವುದಕ್ಕೆ ಸ್ಥಳೀಯರು ಸಂಪೂರ್ಣವಾದ ಸಹಕಾರ ನೀಡಬೇಕು.ಮನೆಯ ಕಸವನ್ನ ವಿಂಗಡಿಸಿ ನಮ್ಮ ವಾಹನಗಳಿಗೆ ನೀಡಬೇಕು.ಪ್ಲಾಸ್ಟಿಕ್ ಬಳಕೆಯನ್ನ ನಿಲ್ಲಿಸಬೇಕು.ನೀರು ಪೋಲಾಗದಂತೆ ತಡೆಯಬೇಕು.

ಪಟ್ಟಣದಲ್ಲಿ ಎಲ್ಲಿ ಬೇಕೆಂದರಲ್ಲಿ ಸಂಚರಿಸುವ ದನಗಳನ್ನ ಅವುಗಳ ಮಾಲಿಕರು ಎಚ್ಚರವಹಿಸಿ ಮನೆಗಳಲ್ಲಿ ಕಟ್ಟಬೇಕು. ಮನೆಗೊಂದು ಮರ ಎಂಬಂತೆ ಮನೆಯ ಮುಂದೆ ಸ್ಥಳವಕಾಶ ವಿದ್ದರೆ ಗಿಡಗಳನ್ನ ನೆಡುವ ಮೂಲಕ ಉತ್ತಮ ಪರಿಸರ ನಿರ್ಮಾಣ ಮಾಡಬೇಕು.ಟೀ ಅಂಗಡಿಗಳು ಜ್ಯೂಸ್ ಅಂಗಡಿಗಳಲ್ಲಿ ಬಳಸುವ ಕಾಗದದ ಕಪ್ಪುಗಳನ್ನ ರಸ್ತೆ ಅಥವಾ ಚರಂಡಿಗಳಿಗೆ ಬೀಸಾಕದಂತೆ ಕಸದ ಡಬ್ಬಿಗಳನ್ನಿಟ್ಟು ಪುರಸಭೆಯ ವಾಹನಗಳಿಗೆ ನೀಡಬೇಕು. ಇಂತಹ ಕೆಲಸಗಳನ್ನ ಸಾರ್ವಜನಿಕರು ಮಾಡಿದರೆ ಉತ್ತಮ ಪರಿಸರವನ್ನ ಸೃಷ್ಟಿಮಾಡಿದಂತಾಗುತ್ತದೆ.ಈ ಜವಬ್ದಾರಿ ಪ್ರತಿಯೊಬ್ಬ ನಾಗರೀಕ ಪಜೆಯ ಮೇಲಿದ್ದು ಅದನ್ನ ಪಾಲಿಸಬೇಕು ಎಂದು ತಿಳಿಸಿದ್ದಾರೆ.

ವಿಶೇಷ ಸೂಚನೆಯಾಗಿ ಪುರಸಭೆಯ ವಾಹನಕ್ಕೆ ಕಸ ಹಾಕದೆ ರಸ್ತೆ ಚರಂಡಿ.ಮತ್ತು ಖಾಲಿ ಜಾಗವಿರುವಲ್ಲಿ ಕಸ ಹಾಕುವವರ ವಿರುದ್ದ ಕಾನೂನು ಕ್ರಮ ಕೈಗೋಳ್ಳಲಾಗುವುದು.ಕಸ ಹಾಕುವವರ ಛಾಯಾಚಿತ್ರಗಳನ್ನ ತೆಗೆದು ಸಹಾಯವಾಣಿ ಸಂಖ್ಯೆ 8296485190 ಇಲ್ಲಿಗೆ ವಾಟ್ಸಾಪ್ ಮೂಲಕ ಕಳುಹಿಸುವ ನಾಗರೀಕರಿಗೆ ಸೂಕ್ತ ಬಹುಮಾನವನ್ನು ನೀಡಲಾಗುವುದು.ಈ ಸಂದರ್ಭದಲ್ಲಿ ಪುರಸಭೆಯ ಸಿಬ್ಬಂದ್ದಿವರ್ಗ ಹಾಜರಿದ್ದರು..

RELATED ARTICLES
- Advertisment -
Google search engine

Most Popular