Tuesday, April 22, 2025
Google search engine

Homeಸ್ಥಳೀಯಜಿಲ್ಲಾ ವಿಶ್ವಕರ್ಮ ಸಮಾಜದ ವತಿಯಿಂದ ಅರುಣ್ ಯೋಗಿರಾಜ್ ಕುಟುಂಬಕ್ಕೆ ಗೌರವ ಸಮರ್ಪಣೆ

ಜಿಲ್ಲಾ ವಿಶ್ವಕರ್ಮ ಸಮಾಜದ ವತಿಯಿಂದ ಅರುಣ್ ಯೋಗಿರಾಜ್ ಕುಟುಂಬಕ್ಕೆ ಗೌರವ ಸಮರ್ಪಣೆ

ಮೈಸೂರು: ಅಯೋಧ್ಯೆಯ ರಾಮಮಂದಿರದ ಗರ್ಭಗುಡಿಯಲ್ಲಿ ಪ್ರತಿಷ್ಠಾಪನೆ ಮಾಡಿದ ಮೈಸೂರಿನ ಶಿಲ್ಪಿ ಅರುಣ್ ಯೋಗಿರಾಜ್ ವಿಶ್ವಕರ್ಮ ರವರು ಕೆತ್ತನೆ ಮಾಡಿರುವ ರಾಮಲಲ್ಲಾ ಮೂರ್ತಿಯನ್ನು ದೇಶಾದ್ಯಂತ ವಿಶ್ವಕರ್ಮ ಸಮಾಜದ ಶಿಲ್ಪಕಲೆಗೆ ಸಂದ ಗೌರವ ಹಾಗೂ ಆಯ್ಕೆ ಮಾಡಿದ ಶ್ರೀ ರಾಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ನ ಎಲ್ಲಾ ಸದಸ್ಯರು ಹಾಗೂ ಈ ಮಹತ್ಕಾರ್ಯಕ್ಕೆ ಕಾರಣಕರ್ತರಾದ ದೇಶದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಸನ್ಮಾನಿಸಲಾಯಿತು.

ಹಾಗೂ ಅರುಣ್ ಯೋಗಿರಾಜ್ ರವರ ಶಿಲ್ಪಕಲೆಗೆ ಪ್ರೋತ್ಸಾಹಿಸಿ ಕೇದಾರನಾಥದಲ್ಲಿ ಶಂಕರಾಚಾರ್ಯರ ಪ್ರತಿಮೆ ನಿರ್ಮಾಣ ಮಾಡಿದರು, ಇಂಡಿಯಾ ಗೇಟ್ ಬಳಿ ನೇತಾಜಿ ಸುಭಾಷ್ ಚಂದ್ರ ಬಾಸ್ ರವರ ಪುತ್ತಳಿಯನ್ನು ನಿರ್ಮಿಸಲು ಅವಕಾಶ ಮಾಡಿಕೊಟ್ಟರು, ಅಯೋಧ್ಯೆಯಲ್ಲಿಯೂ ಸಹ ರಾಮಮಂದಿರದ ರಾಮಲಲ್ಲಾ ಅವರಿಗೆ ಸಲ್ಲಿಸಿದ ಅವಕಾಶವನ್ನು ಮೈಸೂರು – ಕೊಡಗಿನ ಮಾನ್ಯ ಸಂಸದ ಪ್ರತಾಪ್ ಸಿಂಹರವರ ಪರವಾಗಿ ಸಮಸ್ತ ವಿಶ್ವಕರ್ಮ ಸಮಾಜದವರಿಗೆ ಸಲ್ಲಿಸಲಾಯಿತು.

ಅಯೋಧ್ಯೆಯಲ್ಲಿ ರಾಮಲಲ್ಲಾ ಮೂರ್ತಿ ಅರಳಿರುವುದು ಹೆಚ್.ಡಿ.ಕೋಟೆ ತಾಲೂಕಿನ ಕೃಷ್ಣ ಶಿಲೆ ಎಂಬ ಸಂಗತಿ ಪ್ರಭು ಶ್ರೀ ರಾಮಮಂದಿರದ ಜೊತೆಯಲ್ಲಿ ಕನ್ನಡಿಗರ ಶ್ರದ್ದೆ ಸ್ವಾಗತಿಸಿದೆ. ಕನ್ನಡನಾಡು ಸಹೋದರರ ನಾಡು ಎಂದು ಮತ್ತೊಮ್ಮೆ ಶಿಲ್ಪಿ ಮಾಡಿರುವ ವಿಶ್ವಕರ್ಮ ಅರುಣ್ ಯೋಗಿರಾಜ್ ಶಿಲ್ಪಿ ಅವರಿಗೆ ಅಭಿನಂದನೆಗಳನ್ನು ಸಲ್ಲಿಸುವ ಸಲುವಾಗಿ ಮೈಸೂರಿನ ಮನೆಗೆ ಭೇಟಿ ನೀಡಿದ ಮೈಸೂರು ನಗರ ಮತ್ತು ಜಿಲ್ಲಾ ವಿಶ್ವಕರ್ಮ ಸಮಾಜದ ಎಲ್ಲಾ ಸಂಸ್ಥೆಗಳ ಸಂಸ್ಥೆಗಳು ಅರುಣ್ ಯೋಗಿರಾಜ್ ಅವರ ತಾಯಿಯಾದ ಸರಸ್ವತಮ್ಮ ಯೋಗಿರಾಜ್ ರವರಿಗೆ ಹಾಗೂ ಸುಪುತ್ರ ಸೂರ್ಯಪ್ರಕಾಶ್ ರವರ ಧರ್ಮಪತ್ನಿಯಾದ ಪ್ರಶಸ್ತಿ ವಿಜೇತರು ಶ್ರೀಮತಿ ಚೇತನ ಸುನಿಲ್ ರವರಿಗೆ ಸಮಸ್ತ ವಿಶ್ವಕರ್ಮರ ಪರವಾಗಿ ಮೈಸೂರು ನಗರ ಮತ್ತು ಜಿಲ್ಲಾ ವಿಶ್ವಕರ್ಮ ಸಮಾಜದ ಎಲ್ಲಾ ಸಂಸ್ಥೆಯ ಅಧ್ಯಕ್ಷರು ಪದಾಧಿಕಾರಿಗಳು ಹಾಗೂ ಸಂಘ ಸಂಸ್ಥೆಗಳು ಭೇಟಿ ನೀಡಿ ಗೌರವಿಸಿದರು.

ಈ ಸಂದರ್ಭದಲ್ಲಿ ಮಹಾನಗರಪಾಲಿಕೆ ಸದಸ್ಯರುಗಳಾದ ರಮೇಶ್ ಹಾಗೂ ಛಾಯಾದೇವಿ ರವರು ,ಮೈಸೂರು ಜಿಲ್ಲಾ ವಿಶ್ವಕರ್ಮ ಒಕ್ಕೂಟದ ಅಧ್ಯಕ್ಷ ಹುಚ್ಚಪ್ಪಚಾರ್ , ಜಿಲ್ಲಾ ವಿಶ್ವಕರ್ಮ ಸಂಘದ ಅಧ್ಯಕ್ಷ ರಿಷಿ ವಿಶ್ವಕರ್ಮ ,ಪ್ರಧಾನ ಕಾರ್ಯದರ್ಶಿ ಸಿ.ಟಿ. ಆಚಾರ್ಯ, ಬಡ ಉಪಾಧ್ಯಕ್ಷ ಲೋಹಿತೇಶಚಾರ್ , ಸಂಘದ ಅಧ್ಯಕ್ಷ ಎಂ.ಮೊಗಣ್ಣಚಾರ್ , ವಿಶ್ವಕರ್ಮ ವಿದ್ಯಾವರ್ಧಕ ಸಂಘದ ಗೌರವಾಧ್ಯಕ್ಷರಾದ ಟಿ. ನಾಗರಾಜ್, ನಿರ್ದೇಶಕರುಗಳಾದ ಜಯಕುಮಾರ್ , ಬಿಲ್ಡರ್ ವೆಂಕಟೇಶ್ , ಅಮರಶಿಲ್ಪಿ ವೇದಿಕೆ ಅಧ್ಯಕ್ಷ ನಾಗರಾಜ್ , ವಿಶ್ವಕರ್ಮ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಲೋಕೇಶ್ , ಶಿಲ್ಪಿಗಳಾದ ಮುರಳೀಧರ ಸಿದ್ದಾಪುರ, ಚಿನ್ನಬೆಳ್ಳಿ ಸಂಘದ ಅಧ್ಯಕ್ಷ ಸುರೇಶ್ ಗೋಲ್ಡ್ , ವಸಂತಕುಮಾರ್ , ಹೆಬ್ಬಾಳಿನ ಹಿರಿಯ ಪ್ರಮುಖರಾದ ಈಶ್ವರಚಾರ್ , ಅರ್ಕೇಶ್ವರ ಚಾರ್ ,ಮಂಜು, ಪುಟ್ಟಮಾ ಸೋಚಾರ್ , ಹಂಚ್ಯಾ, ಶಿವು, ಕೃಷ್ಣಪ್ಪ, ಶ್ರೀ ಶನೇಶ್ವರ ಭಕ್ತ ಮಂಡಳಿಯ ನಿರ್ದೇಶಕರಾದ ಆನಂದ್, ವಿವೇಕ, ಉಮೇಶ, ಶ್ರೀಧರ್, ಮಹೇಶ, ಯೋಗಾನಂದ, ಚೆಲುವರಾಜು, ನಾರಾಯಣ, ಮಹಿಳಾ ಪ್ರಮುಖರಾದ ನಾಗಮ್ಮ, ಪುಷ್ಪ, ಶ್ರೀಲಕ್ಷ್ಮಿ ಹಾಗೂ ಹಲವಾರು ಸಮಾಜದ ಪ್ರಮುಖರು ಹಾಜರಿದ್ದು ಅಭಿನಂದಿಸಿ ಸನ್ಮಾನಿಸಿದರು.

RELATED ARTICLES
- Advertisment -
Google search engine

Most Popular