ಮದ್ದೂರು: ತಾಲೂಕಿನ ನಿಡಘಟ್ಟ ಗ್ರಾಮದ ಬೆಂಗಳೂರು ಮೈಸೂರು ಹೆದ್ದಾರಿಯಲ್ಲಿರುವ ಶ್ರೀ ಹಳ್ಳಿಕಟ್ಟೆ ಆಂಜನೇಯ ಸ್ವಾಮಿಗೆ ಮನ್ ಮುಲ್ ನಿರ್ದೇಶಕಿ ರೂಪಾ ನೇತೃತ್ವದಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು.
ಬಳಿಕ ನಿಡಘಟ್ಟ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಿಗೆ ಮಂತ್ರಾಕ್ಷತೆಯನ್ನು ಹಂಚಿ, ಸಿಹಿ ವಿತರಿಸಿದರು.

ಈ ವೇಳೆ ಮಾತನಾಡಿದ ಮನ್ ಮುಲ್ ನಿರ್ದೇಶಕಿ ರೂಪಾ ಅವರು, ಜನವರಿ 22ರಂದು ರಾಮಮಂದಿರ ಉದ್ಘಾಟನೆಗೆ ಯಾವುದೇ ವಿಘ್ನ ಬಾರದಂತೆ ರಾಮನ ಬಂಟ ಶ್ರೀ ಆಂಜನೇಯನಿಗೆ ಪೂಜೆ ಸಲ್ಲಿಸುವ ಮೂಲಕ ಪ್ರಾರ್ಥನೆ ಮಾಡುತಿದ್ದೇವೆ ಎಂದು ತಿಳಿಸಿದರು.
ಹಿಂದುಗಳ 500 ವರ್ಷದ ಕನಸನ್ನ ಭಾರತದ ಹೆಮ್ಮೆಯ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಜನವರಿ 22ರಂದು ಮನಸ್ಸು ಮಾಡುವ ಕಾರ್ಯ ನಡೆಯುತ್ತಿದ್ದು, ಇದಕ್ಕೆ ಯಾವುದೇ ಅಡೆತಡೆ ಬಾರದಿರಲಿ ಎಂದು ರಾಮನ ಬಂಟ ಆಂಜನೇಯನಿಗೆ ವಿಶೇಷ ಪೂಜೆ ಸಲ್ಲಿಸಿ ನಿಡಘಟ್ಟ ಗ್ರಾಮ ಪಂಚಾಯತಿಯ ವ್ಯಾಪ್ತಿಯ ಗ್ರಾಮಗಳಿಗೆ ಮಂತ್ರಾಕ್ಷತೆಯನ್ನು ವಿತರಿಸಲಾಗುತ್ತಿದೆ ಎಂದರು.

ಈ ವೇಳೆ ಗ್ರಾಮದ ಹಲವು ಮುಖಂಡರು ಹಿಂದುಪುರ ಸಂಘಟನೆಯ ಹೋರಾಟಗಾರರು ಮಹಿಳಾ ಮುಖಂಡರು ಹಾಜರಿದ್ದರು.