ಹುಣಸೂರು: ಹುಣಸೂರು ಸಂತ ಜೋಸೆಫರ ಪ್ರೌಢಶಾಲೆಯ 10ನೇ ತರಗತಿ ವಿದ್ಯಾರ್ಥಿನಿ ಎಚ್.ಎನ್.ಪ್ರಜ್ಞಾ(15) ಅನಾರೋಗ್ಯದಿಂದ ಮೃತಪಟ್ಟಿದ್ದಾಳೆ. ಈಕೆ ಲೈಸನ್ಸ್ ಸರ್ವೆಯರ್ ನಟೇಶ್‌ರ ಪುತ್ರಿ, ಜ್ವರ-ನಿತ್ರಾಣದಿಂದ ಬಳಲುತ್ತಿದ್ದ ಪ್ರಜ್ಞಾಳನ್ನು ಬುಧವಾರ ಸಂಜೆ ಶಾಲೆಯಿಂದ ಮರಳಿದ ನಂತರ ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಚಿಕಿತ್ಸೆ ಫಲಕಾರಿಯಾಗದೆ ರಾತ್ರಿ ಸಾವನ್ನಪ್ಪಿದ್ದಾಳೆ.
ಶಾಲೆಯ ಮುಖ್ಯ ಶಿಕ್ಷಕಿ ಬಿಂದು, ಶಿಕ್ಷಕರು, ಸಹಪಾಠಿಗಳು ಭೇಟಿ ನೀಡಿ ಅಂತಿಮ ದರ್ಶನ ಪಡೆದರು. ಮೃತಳ ಅಂತ್ಯಕ್ರಿಯೆಯು ನಗರದ ರುದ್ರಭೂಮಿಯಲ್ಲಿ ನಡೆಯಿತು.