Tuesday, April 22, 2025
Google search engine

Homeರಾಜ್ಯಕುಟುಂಬ ಸಹಿತವಾಗಿ ಅಯೋಧ್ಯೆ ರಾಮ ಮಂದಿರಕ್ಕೆ ಹೋಗುತ್ತೇನೆ: ಮಾಜಿ ಪ್ರಧಾನಿ ಹೆಚ್​.ಡಿ ದೇವೇಗೌಡ

ಕುಟುಂಬ ಸಹಿತವಾಗಿ ಅಯೋಧ್ಯೆ ರಾಮ ಮಂದಿರಕ್ಕೆ ಹೋಗುತ್ತೇನೆ: ಮಾಜಿ ಪ್ರಧಾನಿ ಹೆಚ್​.ಡಿ ದೇವೇಗೌಡ

ಹಾಸನ: ಕುಟುಂಬ ಸಹಿತವಾಗಿ ನಾನು ಅಯೋಧ್ಯೆ ರಾಮ ಮಂದಿರಕ್ಕೆ ಹೋಗುತ್ತೇನೆ ಎಂದು ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಹೆಚ್​.ಡಿ ದೇವೇಗೌಡ ಹೇಳಿದರು.

ಹಾಸನದಲ್ಲಿ ಮಾತನಾಡಿದ ಅವರು, ನಾನು, ನನ್ನ ಪತ್ನಿ, ಮಗ ಹೆಚ್.​ಡಿ ಕುಮಾರಸ್ವಾಮಿ ಮತ್ತು ಅವರ ಪತ್ನಿ ಹಾಗೂ ನಿಖಿಲ್‌ ಹೋಗುತ್ತೇವೆ ಎಂದರು.

ಜನವರಿ 22ಕ್ಕೆ ವಿಶೇಷ ವಿಮಾನ ಮಾಡಿದ್ದಾರೆ. ಅದರಲ್ಲೆ ಅಯೋಧ್ಯೆಗೆ ಹೋಗುತ್ತೇವೆ. ಸಂಜೆ ಒಕ್ಕಲಿಗರ ಒಂದು ಸಮಾವೇಶ ಇದೆ. ಎಸ್ ಎಂ ಕೃಷ್ಣ, ಡಿಕೆ ಶಿವಕುಮಾರ್, ನಾನು ನಮ್ಮ ಸ್ವಾಮಿಜಿ ಎಲ್ಲರೂ ಭಾಗಿಯಾಗುತ್ತೇವೆ ಎಂದರು.

ಮೀಸಲಾತಿ ಬಗ್ಗೆ ತಮ್ಮ ಅಧಿಕಾರವಧಿಯಲ್ಲಿ ಕೈಕೊಂಡ ತೀರ್ಮಾನಗಳ ಬಗ್ಗೆ ದೇವೇಗೌಡರು ಸ್ಮರಿಸಿದರು. ರಾಜ್ಯ ಸರ್ಕಾರ ಒಳ ಮೀಸಲಾತಿ ಬಗ್ಗೆ ಸಚಿವ ಸಂಪುಟ ಸಭೆ ನಿರ್ಣಯ ಮಾಡಿ ಕೇಂದ್ರಕ್ಕೆ ಕಳಿಸಿದೆ. ಒಕ್ಕಲಿಗರಿಗೆ ಕೊಟ್ಟಿದ್ದ ಮೀಸಲಾತಿ ಕೋಟಾ ಕಡಿಮೆ ಮಾಡಿ ಮುಸ್ಲಿಂರಿಗೆ ಕೊಟ್ಟಿದ್ದು ನಾನು ಎಂದು ಹೆಚ್ ​ಡಿ ದೇವೇಗೌಡರು ಹೇಳಿದರು.

ಮಲ್ಲಿಕಾರ್ಜುನ ಖರ್ಗೆ ಅವರು ಸಂವಿದಾನ ಕೊಟ್ಟ ಮೀಸಲಾತಿ ಭರ್ತಿಮಾಡಲು ಆಗದಿದ್ದಾಗ ಉದ್ಯೋದದಲ್ಲಿ ಪದೋನ್ನತಿ ಬಗ್ಗೆ ಜಾರಿ ಮಾಡಲು ಕೇಳಿದರು. ಶೇಕಡಾ 15 ಎಸ್​ ಸಿಗಳಿಗೆ, ಶೇಕಡಾ 3 ಎಸ್​ಟಿಗಳಿಗೆ ಮೀಸಲಾತಿ ಇತ್ತು. ಆದರೆ ಉದ್ಯೋಗದಲ್ಲಿ ಈ ಮೀಸಲಾತಿ ಪ್ರಮಾಣ ತಲುಪದೆ ಹೋದಾಗ ನಾನು ಅದನ್ನ ಶೇಕಡಾ 15 ರಿಂದ 18ಕ್ಕೆ ಮತ್ತು ಶೇಕಡಾ 3 ರಿಂದ 5ಕ್ಕೆ ಏರಿಸಿದೆ. ಇದೆಲ್ಲವನ್ನೂ ಕೂಡ ನಾನು ಮುಖ್ಯಮಂತ್ರಿ ಆಗಿದ್ದ ಅವಧಿಯಲ್ಲಿ ಮಾಡಿದ್ದು ಎಂದರು.

ಅಂದು ಶೇಕಡಾ 23 ರಷ್ಟು ತೀರ್ಮಾನ ಮಾಡಿದ್ದು ಈಗಲೂ ಜಾರಿಯಲ್ಲಿ ಇದೆ. ಒಳ ಮೀಸಲಾತಿ ಬಗ್ಗೆ ಈಗ ಸರ್ಕಾರ ಕೇಂದ್ರಕ್ಕೆ ಕಳಿಸಿದೆ. ಇಷ್ಟು ವರ್ಷ ಕೆಲವೇ ಕೆಲವು ಕುಟುಂಬಗಳು ಫಲ ಅನುಭವಿಸಿವೆ. ನಾವು ಮಾಡಿರುವ ಜಾತಿಗಳಲ್ಲಿ ಕೆಲವೇ ಕೆಲವು ಕುಟುಂಬಗಳು ಈ ಮೀಸಲಾತಿಯ ಫಲ ಅನುಭವಿಸಿವೆ ಎಂದರು.

ನಮ್ಮ ಅವದಿಯಲ್ಲಿ ತಿಪ್ಪೇಸ್ವಾಮಿ ಅವರು ಒಳ ಮೀಸಲಾತಿ ಬಗ್ಗೆ ಖಾಸಗಿ ನಿರ್ಣಯ ಮಂಡಿಸಿದ್ದರು. ಅಂದು ಖರ್ಗೆ ಅವರು ವಿಪಕ್ಷದ ನಾಯಕರಾಗಿದ್ದರು. ಅವರು ತಮ್ಮ ಸೀಟ್​ನಿಂದ ನೆಗೆದು ಬಂದು ಆ ನಿರ್ಣಯ ಪ್ರತಿಯನ್ನ ಹರಿದು ಹರಿದು ಅವರ ಮುಖಕ್ಕೆ ಎಸೆದಿದ್ದರು. ಇವತ್ತು ಒಳ ಮೀಸಲಾತಿ ಬಗ್ಗೆ ಚರ್ಚೆ ಮಾಡುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.

ಲೋಕಸಭೆ ಚುನಾವಣೆಗೆ ಕರ್ನಾಟಕದಲ್ಲಿ ಬಿಜೆಪಿ ಜೊತೆ ಜೆಡಿಎಸ್ ಮೈತ್ರಿ ಮಾಡಿಕೊಂಡಿದೆ. ಸೀಟು ಹಂಚಿಕೆ ಚರ್ಚೆ ನಡೆಯುತ್ತಿದ್ದು, ನಾಲ್ಕೈದು ಸ್ಥಾನಗಳು ನೀಡುವಂತೆ ಜೆಡಿಎಸ್ ಮನವಿ ಮಾಡಿದೆ. ಈ ಬಗ್ಗೆ ಮಾತನಾಡಿದ ದೇವೇಗೌಡರು, ನಮಗೆ ನಾಲ್ಕು ಸೀಟ್ ಕೊಡುತ್ತಾರೋ ಮೂರು ಕೊಡುತ್ತಾರೋ ಗೊತ್ತಿಲ್ಲ ಎಂದರು.

RELATED ARTICLES
- Advertisment -
Google search engine

Most Popular