Monday, April 21, 2025
Google search engine

Homeಸ್ಥಳೀಯಮೈಸೂರು: ಮೂವರು ಅಯ್ಯಪ್ಪ ಮಾಲಾಧಾರಿಗಳು ನೀರು ಪಾಲು

ಮೈಸೂರು: ಮೂವರು ಅಯ್ಯಪ್ಪ ಮಾಲಾಧಾರಿಗಳು ನೀರು ಪಾಲು

ಮೈಸೂರು: ಮೂವರು ಅಯ್ಯಪ್ಪ ಮಾಲಾಧಾರಿಗಳು ನೀರು ಪಾಲಾದ ಘಟನೆ ನಂಜನಗೂಡಿನ ನದಿಯಲ್ಲಿ ನಡೆದಿದೆ.

ತುಮಕೂರು ಜಿಲ್ಲೆ ಕೊರಟಗೆರೆ ತಾಲೂಕಿನ ಎಂಟು ಮಾಲಾಧಾರಿಗಳು ನಂಜನಗೂಡಿನಲ್ಲಿ ನೀರಿಗಿಳಿದಿದ್ದರು. ಅವರಲ್ಲಿ ಗವಿರಂಗ, ರಾಕೇಶ್ (19 ವ), ಅಪ್ಪು (16 ವ) ಮೃತಪಟ್ಟಿದ್ದಾರೆ.

ಅಗ್ನಿಶಾಮಕ ದಳದ ಸಿಬ್ಬಂದಿಯು ಗವಿರಂಗನನ್ನು ಮೇಲಕ್ಕೆತ್ತಿದೆ. ಆದರೆ ಆತನೂ ಮೃತಪಟ್ಟಿದ್ದಾನೆ. ಅಪ್ಪು ಎಂಬಾತನ ಮೃತದೇಹವನ್ನು ಸಿಬ್ಬಂದಿಗಳು ಹೊರತೆಗೆದಿದ್ದಾರೆ.

ಕಳೆದ ಮೂರು ದಿನಗಳ ಹಿಂದೆ ಶಬರಿ ಮಲೆಗೆ ತೆರಳಿದ್ದ 8 ಜನ ಮಾಲಾಧಾರಿಗಳು, ಅಯ್ಯಪ್ಪನ ದರ್ಶನ ಮುಗಿಸಿಕೊಂಡು ನಂಜನಗೂಡಿಗೆ ಬಂದಿದ್ದರು. ನಂಜನಗೂಡಿನಲ್ಲೆ ಮಾಲೆ ತೆಗೆಯಲು ಬಂದಿದ್ದ ಬಂದಿದ್ದರು. ಈ ವೇಳೆ ಈ ಅನಾಹುತ ನಡೆದಿದೆ.

RELATED ARTICLES
- Advertisment -
Google search engine

Most Popular